ಅಗರ್ತಲ (ತ್ರಿಪುರ): ನೆರೆಯ ರಾಷ್ಟ್ರ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದು 50 ವರ್ಷ ಪೂರೈಸಿದ ಬೆನ್ನಲ್ಲೇ, ಅಗರ್ತಲಾದಲ್ಲಿ ಶುಕ್ರವಾರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ತ್ರಿಪುರವು ತನ್ನ ಕಾರ್ಯತಂತ್ರದ ಮೂಲಕ ಪ್ರಮುಖ ಪಾತ್ರ ವಹಿಸಿತ್ತು. ಆದ್ದರಿಂದ ಈಶಾನ್ಯ ರಾಜ್ಯವು ಯಾವಾಗಲೂ ಬಾಂಗ್ಲಾದೇಶಕ್ಕೆ ವಿಶೇಷವಾಗಿದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಕ್ಕೆ ತ್ರಿಪುರ ನೀಡಿದ ಕೊಡುಗೆಗಳನ್ನು ಪ್ರದರ್ಶಿಸಲು ಮತ್ತು ಆ ನೆನಪುಗಳನ್ನು ಹಸಿರಾಗಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕೇಂದ್ರ ವೀಕ್ಷಣೆಯನ್ನು ಬಾಂಗ್ಲಾದೇಶದ ಸಹಾಯಕ ಹೈಕಮಿಷನರ್ ಕಚೇರಿ ಅಗರ್ತಲದಲ್ಲಿ ನಡೆಸಲಾಯಿತು. ಬಳಿಕ ಅಲ್ಲಿಯೇ ರಾಷ್ಟ್ರಧ್ವಜ ಹಾರಿಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿದ ಬಾಂಗ್ಲಾದೇಶದ ಸಹಾಯಕ ಹೈಕಮಿಷನರ್ ಎಂ.ಡಿ. ಜೊಬಾಯೆದ್ ಹೊಸೈನ್, ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆಯಲು ಭಾರತೀಯ ಸರ್ಕಾರ ಮತ್ತು ಭಾರತೀಯ ಮಿಲಿಟರಿ ಪಡೆಗಳು ಸಹಾಯ ಮಾಡಿದವು. ಶೇಖ್ ಮುಜಿಬುರ್ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯ ಘೋಷಿಸಿದ ನಂತರ ಒಂಬತ್ತು ತಿಂಗಳ ಅವಧಿಯ ಹೋರಾಟ ಪ್ರಾರಂಭಿಸಲಾಯಿತು. 20 ಲಕ್ಷಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಸರ್ವೋಚ್ಚ ತ್ಯಾಗವನ್ನು ಕಂಡ ದೀರ್ಘಕಾಲದ ಹೋರಾಟವು ಬಾಂಗ್ಲಾದೇಶವನ್ನು ಸಾರ್ವಭೌಮ ರಾಷ್ಟ್ರವಾಗಿ ವಿಶ್ವ ಭೂಪಟದಲ್ಲಿ ತಂದಿತು.
ಮಾರ್ಚ್ 28 ರಂದು ತಮ್ಮ ಕಚೇರಿಯಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುವುದು ಎಂದು ಹೊಸೈನ್ ಹೇಳಿದರು.