ETV Bharat / bharat

ಬಾಲಕೋಟ್ ವಾಯುದಾಳಿಗೆ ಮೂರು ವರ್ಷ: ವೀರ ಯೋಧರ ಸ್ಮರಣೆ

Balakot Airstrike anniversary- ಜೈಷ್​​-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಕಾರ್ಯಾಚರಣೆ ನಡೆಸಿ, ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಬಾಲಕೋಟ್ ವಾಯುದಾಳಿಗೆ ಮೂರುವರ್ಷ ತುಂಬಿದೆ.

Balakot airstrike 3rd anniversary
ಬಾಲಕೋಟ್ ವಾಯುದಾಳಿಗೆ ಮೂರು ವರ್ಷ: ವೀರ ಯೋಧರ ಸ್ಮರಣೆ
author img

By

Published : Feb 26, 2022, 10:15 AM IST

ನವದೆಹಲಿ : ಭಾರತೀಯ ಸೇನೆ ಅಸಾಧಾರಣ ಶೌರ್ಯ, ಸಾಹಸವನ್ನು ಮೆರೆದ ಬಾಲಕೋಟ್ ವೈಮಾನಿಕ ಕಾರ್ಯಾಚರಣೆಗೆ ಮೂರು ವರ್ಷ ತುಂಬಿದೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಸೇನೆಯನ್ನು ಇಂದು ದೇಶ ಸ್ಮರಿಸುತ್ತದೆ.

ಜಮ್ಮು ಕಾಶ್ಮೀರದ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಜಮ್ಮು - ಶ್ರೀನಗರ ಹೆದ್ದಾರಿಯಲ್ಲಿ 2019ರ ಫೆಬ್ರವರಿ 14ರಂದು ಸಿಆರ್​ಪಿಎಫ್ ತುಕಡಿಗಳು ತೆರಳುತ್ತಿದ್ದ ವಾಹನದ ಮೇಲೆ ಪಾಕಿಸ್ತಾನದ ಜೈಷ್​​-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 40 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಅತ್ಯಂತ ಘೋರವಾಗಿದ್ದು, ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು.

ಇದಾದ ಕೆಲವೇ ದಿನಗಳಲ್ಲಿ ಅಂದರೆ ಫೆಬ್ರವರಿ 26ರಂದು ಮುಂಜಾನೆ ಭಾರತೀಯ ವಾಯುಪಡೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದು, ಲೈನ್ ಆಫ್ ಕಂಟ್ರೋಲ್ (ಎಲ್​ಒಸಿ) ನುಗ್ಗಿ ಪಾಕಿಸ್ತಾನದೊಳಗಿನ ಭಯೋತ್ಪಾದಕರನ್ನು ಸದೆಬಡೆದಿತ್ತು. ಬಾಲಕೋಟ್​​ನಲ್ಲಿದ್ದ ಜೈಷ್ ಸಂಘಟನೆಯ ಶಿಬಿರದ ಮೇಲೆ ವಾಯುಪಡೆ ದಾಳಿ ನಡೆಸಿತ್ತು. ಈ ವೇಳೆ ಸಾಕಷ್ಟು ಭಯೋತ್ಪಾದಕರನ್ನು ಬೇಟೆಯಾಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲಾಯಿತು.

ಇದಾದ ನಂತರ ಪಾಕಿಸ್ತಾನವೂ ಕೂಡಾ ಗಡಿಯಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಆಕ್ರಮಣ ನಡೆಸಲು ಯತ್ನಿಸಿತ್ತು. ಆದರೆ ಭಾರತೀಯ ಯೋಧರ ಕಾರ್ಯಾಚರಣೆಯಿಂದಾಗಿ ಪಾಕ್ ವಿಫಲವಾಯಿತು.

ಇದನ್ನೂ ಓದಿ: ಅಸ್ಸೋಂ ಪೊಲೀಸರ ಭರ್ಜರಿ ಕಾರ್ಯಾಚರಣೆ: 7 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ

ಈ ವೇಳೆ ಭಾರತದ ಗಡಿಯೊಳಗೆ ನುಸುಳಿದ್ದ ಪಾಕ್ ಜೆಟ್ ವಿಮಾನಗಳನ್ನು ಮಿಗ್ -21 ಬೈಸನ್ ಯುದ್ಧ ವಿಮಾನದ ಮೂಲಕ ಬೆನ್ನತ್ತಿದ್ದ ಅಭಿನಂದನ್ ವರ್ಧಮಾನ್ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ದಾಟಿದ್ದರು. ಆಗ ಕ್ಷಿಪಣಿ ದಾಳಿಯಾಗಿ ವರ್ದಮಾನ್ ಪಾಕಿಸ್ತಾನಕ್ಕೆ ಸಿಕ್ಕಿಬಿದ್ದಿದ್ದರು. ನಂತರ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡಗಳನ್ನು ಹೇರಿ, ವರ್ದಮಾನ್ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.