ಚಮೋಲಿ: ದೀಪಾವಳಿಯ ಹಬ್ಬದ ಪ್ರಯುಕ್ತ ಭಗವಾನ್ ಬದ್ರಿನಾಥ್ ದೇವಾಲಯವನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಪ್ರತಿ ವರ್ಷ ದೀಪಾವಳಿ ಹಬ್ಬದಂದು ಭಗವಾನ್ ಬದ್ರಿನಾಥ್ ದೇವಾಲಯವನ್ನು ಚೆಂಡು (ಮಾರಿಗೋಲ್ಡ್) ಹೂಗಳಿಂದ ಅಲಂಕರಿಸಲಾಗುತ್ತದೆ.
ದೇವಾಲಯದ ಆವರಣದಲ್ಲಿರುವ ಮಾತಾ ಲಕ್ಷ್ಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ದೇವಸ್ಥಾನದಲ್ಲಿ ದೀಪೋತ್ಸವ ಅದ್ಧೂರಿಯಾಗಿ ಜರುಗಲಿದೆ.
ಈ ಬಾರಿ ಚಳಿಗಾಲ ಹಿನ್ನೆಲೆ ನವೆಂಬರ್ 19 ರಿಂದ ಭಗವಾನ್ ಬದ್ರಿನಾಥ್ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.