ETV Bharat / bharat

13 ವರ್ಷದ ಬಾಲಕನ ಬೈಕ್​ ಸವಾರಿಗೆ ಬಾಲಕಿ ಬಲಿ: ಮಗನೊಂದಿಗೆ ತಂದೆ ಕೂಡ ಅರೆಸ್ಟ್​ - ತಮಿಳುನಾಡಿನ ಕಡಲೂರು ಜಿಲ್ಲೆ

ತಮಿಳುನಾಡಿನಲ್ಲಿ ಬೈಕ್​ ಸವಾರಿ ಮಾಡುತ್ತಿದ್ದ ಬಾಲಕನೋರ್ವ ಡಿಕ್ಕಿ ಹೊಡೆದು ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕನಿಗೆ ಬೈಕ್​ ಕೊಟ್ಟ ಕಾರಣಕ್ಕೆ ತಂದೆ ಕೂಡ ಜೈಲು ಸೇರಿದ್ದಾನೆ.

a-baby-girl-death-of-13-years-old-boys-bike-drive-in-tamilnadu
13 ವರ್ಷದ ಬಾಲಕನ ಬೈಕ್​ ಸವಾರಿಗೆ ಬಾಲಕಿ ಬಲಿ: ಮಗನೊಂದಿಗೆ ತಂದೆ ಕೂಡ ಅರೆಸ್ಟ್​
author img

By

Published : Aug 9, 2022, 8:42 PM IST

ಕಡಲೂರು (ತಮಿಳುನಾಡು): 13 ವರ್ಷದ ಬಾಲಕನೋರ್ವ ಬೈಕ್​ ಚಲಾಯಿಸುವಾಗ 3 ವರ್ಷದ ಬಾಲಕಿಗೆ ಗುದ್ದಿ, ಆಕೆಯ ಸಾವಿಗೆ ಕಾರಣವಾಗಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಆರೋಪಿ ಬಾಲಕ ಮತ್ತು ಆತನ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ವಿಜಯಮಾ ನಗರಂ ಗ್ರಾಮದ ನಿವಾಸಿ ಶಿವಗುರು ಎಂಬುವವರ ಪುತ್ರ ಇಂದು ಬೆಳಗ್ಗೆ ಹೊಲದಲ್ಲಿ ಬೈಕ್​ ಸವಾರಿ ಮಾಡುತ್ತಿದ್ದ. ಈ ವೇಳೆ ಮಲಾರ್​ವಿಝಿ ಎಂಬ ಬಾಲಕಿಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾನೆ. ಪರಿಣಾಮ ಬಾಲಕಿ ಮೃತಪಟ್ಟಿದ್ದಳು.

ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಂದೆ ಶಿವಗುರು ಹಾಗೂ ಬಾಲಕ ಇಬ್ಬರನ್ನೂ ಬಂಧಿಸಿದ್ದಾರೆ. ತಂದೆಯನ್ನು ವಿರುಧಾಚಲಂ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದ್ದರೆ, ಆರೋಪಿ ಬಾಲಕವನ್ನು ಕಡಲೂರಿನ ಬಾಲ ಮಂದಿರಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಬಸ್​​-ಆಟೋ ಅಪಘಾತ: 8 ಮಹಿಳೆಯರು ಸೇರಿ 9 ಜನರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.