ETV Bharat / bharat

ಕಟ್ಟಡದ ಮೇಲ್ಛಾವಣಿಯಿಂದ ಮಗು ಎಸೆದ ಕೋತಿ: 4 ತಿಂಗಳ ಕಂದಮ್ಮ ಸಾವು - ಉತ್ತರ ಪ್ರದೇಶ

ಮಂಗವೊಂದು ಮೂರು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯಿಂದ ಪುಟ್ಟ ಮಗುವನ್ನು ಎಸೆದಿದೆ. ಈ ಘಟನೆಯಲ್ಲಿ ಮಗು ಪ್ರಾಣ ಕಳೆದುಕೊಂಡಿದೆ.

Monkey Throws Baby
ಸಾಂದರ್ಭಿಕ ಚಿತ್ರ
author img

By

Published : Jul 18, 2022, 7:11 AM IST

ಬರೇಲಿ(ಉತ್ತರ ಪ್ರದೇಶ): ಮಂಗವೊಂದು ಮೂರು ಅಂತಸ್ತಿನ ಮನೆಯ ಛಾವಣಿಯಿಂದ ಮಗುವನ್ನು ಕೆಳಗೆಸೆದ ಪರಿಣಾಮ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆಯಿತು ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತನ್ನ ಪತ್ನಿ ಹಾಗೂ ನಾಲ್ಕು ತಿಂಗಳ ಮಗುವಿನೊಂದಿಗೆ ಕಟ್ಟಡದ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ ಕೋತಿಗಳ ಗುಂಪು ಛಾವಣಿಯ ಮೇಲೆ ಬಂದಿವೆ. ದಂಪತಿ ಅವುಗಳನ್ನು ದೂರ ಓಡಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮಂಗಗಳು ಅವರನ್ನು ಸುತ್ತುವರಿದಿದ್ದವು. ಮೆಟ್ಟಿಲುಗಳ ಕೆಳಗೆ ಓಡಲು ಪ್ರಯತ್ನಿಸುವಾಗ ಮಗು ಜಾರಿ ಬಿದ್ದಿದೆ. ನಿರ್ದೇಶ್ ಕೆಳಗೆ ಬಿದ್ದ ಮಗುವನ್ನು ಎತ್ತಿಕೊಳ್ಳುವ ಮೊದಲೇ ಕೋತಿ ನವಜಾತ ಶಿಶುವನ್ನು ಛಾವಣಿಯಿಂದ ಕೆಳಗೆಸೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮುರ್ಮು ಬಗ್ಗೆ ಪುಸ್ತಕ ಬರೆದ 13ರ ಬಾಲೆ: ದ್ರೌಪದಿ ಬೆಂಬಲಿಸುವಂತೆ ಸೋನಿಯಾ - ಮಮತಾಗೆ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.