ETV Bharat / bharat

ಅಗ್ನಿ ಅನಾಹುತಕ್ಕೆ ಎಂಟು ತಿಂಗಳ ಮಗು ಸೇರಿ ಐವರು ಸಜೀವ ದಹನ - ಕೇರಳದಲ್ಲಿ ಐವರು ಸಜೀವ ದಹನ

ಕೇರಳ ವರ್ಕಳ ಸಮೀಪದ ಗ್ರಾಮವೊಂದರಲ್ಲಿ ಮನೆಗೆ ಬೆಂಕಿ ತಗುಲಿ, ಮಗು ಸೇರಿ ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Baby among five charred to death as house catches fire in Varkala
ಅಗ್ನಿ ಅನಾಹುತಕ್ಕೆ ಎಂಟು ತಿಂಗಳ ಮಗು ಸೇರಿ ಐವರು ಸಜೀವ ದಹನ
author img

By

Published : Mar 8, 2022, 10:31 AM IST

Updated : Mar 8, 2022, 12:17 PM IST

ತಿರುವನಂತಪುರಂ(ಕೇರಳ): ಮನೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ, ಮಗು ಸೇರಿ ಐವರು ಸಜೀವವಾಗಿ ದಹನಗೊಂಡಿರುವ ಘಟನೆ ಕೇರಳದ ದವಳಪುರಂನಲ್ಲಿ ಮುಂಜಾನೆ ನಡೆದಿದೆ ನಡೆದಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳವಾರ ನಸುಕಿನ 1.45ರ ವೇಳೆಗೆ ವರ್ಕಳ ಸಮೀಪದ ಚೆರುನ್ನಿಯೂರಿನ ದವಳಪುರಂನಲ್ಲಿ ಪ್ರತಾ​ಪನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸೃಷ್ಟಿಸಿದೆ. ಈ ವೇಳೆ, ಐವರು ಮೃತಪಟ್ಟಿದ್ದಾರೆ. ಮೃತರನ್ನು ಪ್ರತಾಪನ್ (64), ಅವರ ಪತ್ನಿ ಶೇರ್ಲಿ (53), ಕಿರಿಯ ಮಗ ಅಖಿಲ್ (25), ಹಿರಿಯ ಮಗನ ಪತ್ನಿ ಅಭಿರಾಮಿ (24) ಮತ್ತು ಎಂಟು ತಿಂಗಳ ಮೊಮ್ಮಗ ರಾಯನ್ ಎಂದು ಗುರುತಿಸಲಾಗಿದೆ. ಮತ್ತೋರ್ವ ವ್ಯಕ್ತಿ ನಿಖಿಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯ ಹೊರಗೆ ನಿಲ್ಲಿಸಿದ್ದ ಕನಿಷ್ಠ ಐದು ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯು ಮನೆಯನ್ನು ಸಂಪೂರ್ಣವಾಗಿ ಆವರಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಅಗ್ನಿ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕಲ್ಲಿದ್ದಲು ಗಣಿಯಲ್ಲಿ ಛಾವಣಿ ಕುಸಿತ: ಅವಶೇಷಗಳಡಿ ಸಿಲುಕಿದ ನಾಲ್ವರು

Last Updated : Mar 8, 2022, 12:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.