ETV Bharat / bharat

ಸಲಿಂಗಿಗಳ ಪ್ರೈಡ್​ ಪ್ಲಾಗ್​ ಬಗ್ಗೆ ಗಮನ ಸೆಳೆದ ಆಯುಷ್ಮಾನ್ ಖುರಾನ್​ - ಶುಭ ಮಂಗಲ ಜೈದಾ ಸಾವಧಾನ್

ಬಾಲಿವುಡ್ ನಟ ಆಯುಷ್ಮಾನ್ ಖುರಾನ್​ ಹೊಸ ವಿನ್ಯಾಸದ ಪ್ರೈಡ್ ಧ್ವಜದತ್ತ ಗಮನ ಸೆಳೆದಿದ್ದಾರೆ. 2012 ರ 'ವಿಕ್ಕಿ ದಾನಿ' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ ಆಯುಷ್ಮಾನ್, ಕಳೆದ ಎರಡು ವರ್ಷಗಳಲ್ಲಿ ಹಿಟ್ ಸರಣಿ ನೀಡಿದ್ದಾರೆ.

ayushmann-khurrana-brings-attention-to-new-more-gender-inclusive-pride-flag

author img

By

Published : Jun 14, 2021, 8:30 PM IST

ನವದೆಹಲಿ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ತಮ್ಮ ಚಲನಚಿತ್ರಗಳ ಬಗ್ಗೆ ಉತ್ತೇಜನ ನೀಡಲು ಸಾಮಾಜಿಕ ಜಾಲತಾಣಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹಾಗೆ ಅವರು ಹೊಸ ಪ್ರೈಡ್​ ಪ್ಲಾಗ್​ ಬಗ್ಗೆ ಗಮನ ಸೆಳೆದಿದ್ದಾರೆ.

'ಶುಭ ಮಂಗಳ ಜೈದಾ ಸಾವಧಾನ್' ಎಂಬ ಚಿತ್ರದಲ್ಲಿ ಸಲಿಂಗಕಾಮಿ ಪಾತ್ರದಲ್ಲಿ ನಟಿಸಿರುವ ಅವರು, ಪ್ರೈಡ್​ ಪ್ಲಾಗ್​ ಬಗ್ಗೆ ತಮ್ಮದೇ ಆದ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನಾನು ಆ ಸಂಬಂಧ ಓದಿ ತಿಳಿದುಕೊಂಡಿದ್ದೇನೆ. ಪ್ರೈಡ್ ಧ್ವಜದ ಹೊಸ ವಿನ್ಯಾಸವನ್ನು ಅನಾವರಣಗೊಳಿಸಿದ ಉದ್ದೇಶ ಮತ್ತು ಈ ಪ್ರಮುಖ ಸಂಭಾಷಣೆಯತ್ತ ಗಮನ ಸೆಳೆಯಲು ನಾನು ಬಯಸುತ್ತೇನೆ ಎಂದಿರುವ ಅವರು, ಸಲಿಂಗಿ ಸಮಾನತೆ ಹಕ್ಕುಗಳ ಚಳವಳಿಯಲ್ಲಿ ಈ ಹೊಸ ವಿನ್ಯಾಸದ ಧ್ವಜವು ಜನರನ್ನು ಚಳವಳಿಯಲ್ಲಿ ಸಂಯೋಜಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಲಿಂಗಿ ಚಳವಳಿಯ ಬಗ್ಗೆ ಮಾತನಾಡಿದ ಅವರು, ನನ್ನ ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಸಾಧ್ಯವಾದಷ್ಟು ಜಾಗೃತಿ ಮೂಡಿಸುವ ಕಡೆ ಗಮನ ಹರಿಸುತ್ತೇನೆ ಮತ್ತು ಜನರು ಸಲಿಂಗಿ ಚಳವಳಿಯ ಬಗ್ಗೆ ಜಾಗೃತರಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಈ ಹಿನ್ನೆಲೆ ನಟರಾದ ನಾವು ಅದೃಷ್ಟವಂತರು. ನಾವು ಪ್ರಮುಖ ವಿಷಯಗಳಿಗೆ ಜಾಗೃತಿ ಮೂಡಿಸಬಹುದು ಈ ಹಿನ್ನೆಲೆ ನಾನು ಪ್ರೈಡ್ ತಿಂಗಳ ಬಗ್ಗೆ ಮಾತನಾಡುವ ಮೂಲಕ ನನ್ನ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಏನಿದು ಪ್ರೈಡ್​ ಪ್ಲಾಗ್:

ಮಳೆಬಿಲ್ಲು ಬಣ್ಣದ ಧ್ವಜವು ಈವರೆಗೆ ಹಲವಾರು ವರ್ಷಗಳಲ್ಲಿ ಅನೇಕ ಮಾರ್ಪಾಡುಗಳನ್ನು ಕಂಡಿದೆ. ಇದನ್ನು ಮೂಲತಃ ಅಮೆರಿಕನ್ ಕಲಾವಿದ ಮತ್ತು ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತ ಗಿಲ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ್ದರು. ಇದರಲ್ಲಿ LGBTQ+ ಸಮುದಾಯದ ವೈವಿದ್ಯತೆ ಪ್ರತಿನಿಧಿಸುವ ಬಣ್ಣಗಳಿವೆ. ಜೂನ್ 25, 1978 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಲಿಂಗಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜ ಹಾರಿಸಲಾಯಿತು.

ಬೇಕರ್ ಅವರು, ಆಕಾಶದಲ್ಲಿ ಮೂಡಿದ ಮಳೆಬಿಲ್ಲನ್ನು ನೈಸರ್ಗಿಕ ಧ್ವಜವಾಗಿ ನೋಡಿ, ಅಲ್ಲಿನ ಎಂಟು ಬಣ್ಣಗಳನ್ನು ಆರಿಸಿಕೊಂಡರು. ಪ್ರತಿಯೊಂದೂ ಬಣ್ಣವು ಒಂದೊಂದು ಸಂಕೇತವನ್ನು ಸೂಚಿಸುತ್ತದೆ. ಲೈಂಗಿಕತೆಗೆ ಗುಲಾಬಿ ಬಣ್ಣ, ಜೀವನಕ್ಕೆ ಕೆಂಪು, ಸಮಾಧಾನಕ್ಕೆ ಕಿತ್ತಳೆ, ಸೂರ್ಯನ ಬೆಳಕಿಗೆ ಹಳದಿ, ಪ್ರಕೃತಿಗೆ ಹಸಿರು, ಕಲೆಗೆ ಹಸಿರು ಮಿಶ್ರಿತ ನೀಲಿ ಬಣ್ಣ, ಸಾಮರಸ್ಯಕ್ಕಾಗಿ ಇಂಡಿಗೊ ಬಣ್ಣ ಮತ್ತು ಚೈತನ್ಯಕ್ಕೆ ನೇರಳೆ ಬಣ್ಣ ಆಯ್ಕೆ ಮಾಡಲಾಗಿದೆ .

ನಂತರದ ದಿನಗಳಲ್ಲಿ ತಯಾರಿಕಾ ಸಮಸ್ಯೆಗಳಿಂದಾಗಿ, ಗುಲಾಬಿ ಮತ್ತು ಹಸಿರು ಮಿಶ್ರಿತ ನೀಲಿ ಬಣ್ಣದ ಪಟ್ಟೆಗಳನ್ನು ತೆಗೆದುಹಾಕಲಾಯಿತು ಮತ್ತು ಇಂಡಿಗೊ ಬಣ್ಣವನ್ನು ನೀಲಿ ಬಣ್ಣದಿಂದ ಬದಲಾಯಿಸಲಾಯಿತು. ಹೀಗಾಗಿ ಆರು - ಪಟ್ಟಿ ಧ್ವಜವಾಯಿತು. 1994 ರವರೆಗೆ ಧ್ವಜವು ಸಮುದಾಯದ ಪ್ರಮುಖ ಸಂಕೇತವಾಗಿತ್ತು. 2017 ರಲ್ಲಿ, ಧ್ವಜದಲ್ಲಿ ಕಪ್ಪು ಮತ್ತು ಕಂದು ಬಣ್ಣದ ಪಟ್ಟೆಗಳನ್ನು ಸೇರಿಸಲಾಯಿತು. ಇದಾದ ನಂತರ ಅಮೆರಿಕದ ನಾಗರಿಕ ಹಕ್ಕುಗಳ ಕಾರ್ಯಕರ್ತ ಅಂಬರ್ ಹೈಕ್ಸ್, ಫಿಲಡೆಲ್ಫಿಯಾದ LGBT ವ್ಯವಹಾರಗಳ ಕಚೇರಿ ಅಧ್ಯಕ್ಷತೆಯಲ್ಲಿ 2018 ರಲ್ಲಿ ಧ್ವಜವನ್ನು ಡೇನಿಯಲ್ ಕ್ವಾಸರ್ ಮತ್ತೊಮ್ಮೆ ಮರುವಿನ್ಯಾಸಗೊಳಿಸಿದ್ದಾರೆ.

2012 ರ 'ವಿಕ್ಕಿ ದಾನಿ' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ ಆಯುಷ್ಮಾನ್, ಕಳೆದ ಎರಡು ವರ್ಷಗಳಲ್ಲಿ ಹಿಟ್ ಸರಣಿಯನ್ನು ನೀಡಿದ್ದಾರೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಶೂಜಿತ್ ಸಿರ್ಕಾರ್ ಅವರ 'ಗುಲಾಬೊ ಸೀತಾಬೊ' ಚಿತ್ರದಲ್ಲಿ ಈ ನಟ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.