ETV Bharat / bharat

'ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಜಲ ಸಮಾಧಿಯಾಗಲಿದ್ದೇನೆ' - ಮಹಂತ್ ಪರಮಹನ್ಸ್ ದಾಸ್ ಸುದ್ದಿ 2021

ಅಲ್ಪಸಂಖ್ಯಾತರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿರುವ ರೀತಿಯಲ್ಲಿಯೇ ಈ ದೇಶದ ಬಹುಸಂಖ್ಯಾತ ಸಮಾಜವು ಒಂದು ನಿರ್ದಿಷ್ಟ ವರ್ಗ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮುಂದೆ ದುರ್ಬಲವಾಗುತ್ತದೆ. ಮುಂದೆ ದೇಶದ ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ ಎಂದು ಮಹಾಂತ ಪರಮಹಂಸ ದಾಸ್ ಎಚ್ಚರಿಸಿದ್ದಾರೆ.

Mahant Paramhans Das
ಮಹಂತ್ ಪರಮಹನ್ಸ್ ದಾಸ್
author img

By

Published : Sep 29, 2021, 7:25 PM IST

ಉತ್ತರಪ್ರದೇಶ: ಅಯೋಧ್ಯೆಯ ತಪಸ್ವಿ ಚವಾನಿಯ ಉತ್ತರಾಧಿಕಾರಿ ಮಹಾಂತ ಪರಮಹಂಸ ದಾಸ್ ಅವರು ಹಿಂದುತ್ವ ಮತ್ತು ಇತರ ಧಾರ್ಮಿಕ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಭಾರತವನ್ನು 'ಹಿಂದೂ ರಾಷ್ಟ್ರ'ವೆಂದು ಘೋಷಿಸದಿದ್ದರೆ ಜಲ ಸಮಾಧಿ ಆಗುವುದಾಗಿ ಎಚ್ಚರಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಅಕ್ಟೋಬರ್ 2ರೊಳಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಅಕ್ಟೋಬರ್ 1 ರಂದು ಧಾರ್ಮಿಕ ಸಮ್ಮೇಳನ ಏರ್ಪಡಿಸಲಾಗುತ್ತದೆ. ಮರುದಿನ ಮಧ್ಯಾಹ್ನ ಸರಯೂ ನದಿಯಲ್ಲಿ ಜಲ ಸಮಾಧಿಯಾಗುತ್ತೇನೆ' ಎಂದಿದ್ದಾರೆ.

'ಸಾವಿನ ನಂತರ ಯಾವ ಆಚರಣೆಯನ್ನು ಮಾಡಲಾಗುತ್ತದೆಯೋ, ಅದನ್ನು ನಾನು ಸಾವಿನ ಮುಂಚಿತವಾಗಿಯೇ ಮಾಡಿದ್ದೇನೆ. ವೇದ ಮಂತ್ರಗಳ ಮೂಲಕ ನಾನು ನನ್ನನ್ನು ಬಂಧಿಸಿಕೊಳ್ಳುವ ಕವಚವನ್ನು ಶುದ್ಧೀಕರಿಸಿದ್ದೇನೆ. ಈ ಕವಚವನ್ನು ನನ್ನ ಮೇಲೆ ಹಾಕಿಕೊಂಡು ಜಲಸಮಾಧಿ ಆಗಲಿದ್ದೇನೆ' ಎಂದು ಹೇಳಿದರು.

'ಅಲ್ಪಸಂಖ್ಯಾತರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿರುವ ರೀತಿಯಲ್ಲಿಯೇ ಈ ದೇಶದ ಬಹುಸಂಖ್ಯಾತ ಸಮಾಜವು ಒಂದು ನಿರ್ದಿಷ್ಟ ವರ್ಗ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮುಂದೆ ದುರ್ಬಲವಾಗುತ್ತದೆ. ಮುಂದೆ ದೇಶದ ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ' ಎಂದು ಅವರು ಎಚ್ಚರಿಸಿದ್ದಾರೆ.

ಜನರ ಹಿತಾಸಕ್ತಿ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೇಡಿಕೆ ಇಟ್ಟಿರುವುದಾಗಿ ಮಹಾಂತ ಪರಮಹಂಸ ದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಗುಲಾಬ್​ ಅಬ್ಬರಕ್ಕೆ 25 ಬಲಿ: ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವುನೋವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.