ETV Bharat / bharat

21ನೇ ವಯಸ್ಸಿಗೇ ಬಿಹಾರದ ಗ್ರಾ. ಪಂ ಅಧ್ಯಕ್ಷೆ.. ಹೊಸ ದಾಖಲೆ ಬರೆದ ಆಯೇಷಾ - ಫತೇಪುರ್​ ಪಂಚಾಯತ್​ ಮುಖ್ಯಸ್ಥೆ ಆಯೇಷಾ

ಬಿಹಾರ ಸ್ಥಳೀಯ ಪಂಚಾಯತ್​ ಚುನಾವಣೆ ಫಲಿತಾಂಶದಲ್ಲಿ ಮಹತ್ವದ ಬದಲಾವಣೆ ಕಂಡು ಬರುತ್ತಿದ್ದು, ಅಧ್ಯಕ್ಷೆ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ 21 ವರ್ಷದ ಯುವತಿಯೋರ್ವಳು ಜಯಭೇರಿ ಬಾರಿಸಿದ್ದಾಳೆ.

Youngest Female president In Bhagalpur
Youngest Female president In Bhagalpur
author img

By

Published : Nov 27, 2021, 3:35 PM IST

Updated : Nov 27, 2021, 3:54 PM IST

ಭಾಗಲ್ಪುರ್​(ಬಿಹಾರ): ಬಿಹಾರದ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಹೊಸ ಹೊಸ ಬದಲಾವಣೆ ಕಂಡು ಬರುತ್ತಿದ್ದು, ಮತದಾರರು ಯುವ ಪ್ರತಿಭೆಗಳಿಗೆ ಮಣೆ ಹಾಕುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಹಿರಂಗಗೊಂಡಿದ್ದ ಫಲಿತಾಂಶದಲ್ಲಿ ಬಿಹಾರದ ಶಿಯೋಹರ್​​ ಪಂಚಾಯತ್​ಗೆ 21 ವರ್ಷದ ಕುಶಾಹರ್​​​ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹ ಘಟನೆ ನಡೆದಿದೆ.

21ನೇ ವಯಸ್ಸಿಗೇ ಬಿಹಾರದ ಗ್ರಾ. ಪಂ ಅಧ್ಯಕ್ಷೆ

ಭಾಗಲ್ಪುರ್​​​ ಜಿಲ್ಲೆಯ ಗ್ರಾಮ ಪಂಚಾಯತ್​ ಮತ ಎಣಿಕೆ ಫಲಿತಾಂಶ ಬಹಿರಂಗಗೊಂಡಿದ್ದು, ಇದರಲ್ಲೂ 21 ವರ್ಷದ ಆಯೇಷಾ ಖಾತನ್​​ ಗ್ರಾಮ ಪಂಚಾಯತ್​ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದು, ಸಾಬೂರ್​ ಬ್ಲಾಕ್​ನ ಫತೇಪುರ್​ ಪಂಚಾಯತ್​ ಮುಖ್ಯಸ್ಥೆ ಆಗಲಿದ್ದಾರೆ.

ಇದನ್ನೂ ಓದಿರಿ: 21 ವರ್ಷಕ್ಕೆ ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆ: ಈಕೆ ಪದವಿ ಪಡೆದಿದ್ದು ಕರ್ನಾಟಕದಲ್ಲಿ

ಆಯೇಷಾ ವಯಸ್ಸು ಕೇವಲ 21 ವರ್ಷ 2 ತಿಂಗಳಾಗಿದ್ದು, ಇದೇ ಮೊದಲ ಸಲ ಅವರು ಗ್ರಾಮ ಪಂಚಾಯತ್​ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಗೆಲುವು ಸಾಧಿಸಿರುವುದು ಖಚಿತಗೊಳ್ಳುತ್ತಿದ್ದಂತೆ ಫತೇಪುರ್​​ ಪಂಚಾಯ್ತಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ. ಈ ವೇಳೆ ಮಾತನಾಡಿರುವ ನೂತನ ಅಧ್ಯಕ್ಷೆ ಗ್ರಾಮ ಪಂಚಾಯತ್​ ಹಾಗೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಸಲ ಸ್ಪರ್ಧಿಸಿರುವ ಆಯೇಷಾ ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಎಲ್ಲೆಡೆಯಿಂದ ಇವರಿಗೆ ಶುಭಾಶಯಗಳ ಮಳೆ ಹರಿದು ಬರುತ್ತಿದೆ.

Last Updated : Nov 27, 2021, 3:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.