ETV Bharat / bharat

ಅವತಾರ್ ಸಿಂಗ್ ಅವರ ತಾಯಿ.. ಸಹೋದರಿಯ ವೀಸಾ ತಿರಸ್ಕರಿಸಿದ ಬ್ರಿಟನ್​ ಸರ್ಕಾರ - ಚಂಡೀಗಢ

ಖಲಿಸ್ತಾನಿ ಬೆಂಬಲಿಗ ಅವತಾರ್ ಸಿಂಗ್ ಖಂಡಾ ಅವರ ಸಹೋದರಿ ಜಸ್ಪ್ರೀತ್ ಕೌರ್ ಯುಕೆಗೆ ಹೋಗಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂಗ್ಲೆಂಡ್ ಸರ್ಕಾರ ವೀಸಾ ನೀಡಲು ನಿರಾಕರಿಸಿದೆ.

Avtar Singh
ಅವತಾರ್ ಸಿಂಗ್
author img

By

Published : Jul 29, 2023, 1:50 PM IST

ಚಂಡೀಗಢ: ಕಳೆದ ತಿಂಗಳು ಖಲಿಸ್ತಾನಿ ಬೆಂಬಲಿಗ ಅವತಾರ್ ಸಿಂಗ್ ಖಂಡಾ ಲಂಡನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈಗ ಅವರ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ತಾಯಿ ಮತ್ತು ಸಹೋದರಿ ವೀಸಾಕ್ಕಾಗಿ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರ ವೀಸಾ ನೀಡಲು ನಿರಾಕರಿಸಿದೆ.

ಕಠಿಣ ನಿಲುವು ತೆಗೆದುಕೊಂಡ ಯುಕೆ ಸರ್ಕಾರ: ಖಾಂಡಾ ಅವರ ಸಹೋದರಿ ಜಸ್ಪ್ರೀತ್ ಕೌರ್ ಯುಕೆಗೆ ಹೋಗಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಯುಕೆ ಸರ್ಕಾರ ಅದನ್ನು ತಿರಸ್ಕರಿಸಿತು. ಖಾಂಡಾ ಅವರು ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದರು. ಘಟನೆಯ ನಂತರ ಭಾರತದೊಂದಿಗಿನ ವಿವಾದದ ಕಾರಣ ಸ್ಥಳೀಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಬ್ರಿಟನ್‌ನಲ್ಲಿರುವ ಖಾಲಿಸ್ತಾನ್ ಬೆಂಬಲಿಗರು ಹೇಳಿದ್ದಾರೆ. ಯುಕೆ ಸರ್ಕಾರದ ಈ ಕ್ರಮವು ಖಾಲಿಸ್ತಾನ್ ಚಳವಳಿಯ ಬೆಂಬಲಿಗರಿಗೆ ಆಘಾತ ನೀಡಿದೆ.

ಅವತಾರ್ ಸಿಂಗ್ ಪಂಜಾಬಿನ ಖಲಿಸ್ತಾನಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಆಪ್ತನಾಗಿದ್ದ. ಈತ ಕಳೆದ ಜೂನ್​ 15ರಂದು ಲಂಡನ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದ. ಇದಕ್ಕೂ ಮೊದಲು, ಖಾಸಗಿ ಆಸ್ಪತ್ರೆಯಲ್ಲಿ ಈತನ ಶವಪರೀಕ್ಷೆ ನಡೆಸಲು ಮತ್ತು ಖಾಂಡಾ ಸಾವಿನ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸಲು ಯುಕೆ ಸರ್ಕಾರ ನಿರಾಕರಿಸಿತ್ತು. ಅಲ್ಲದೇ ಖಾಂಡಾ ಅವರ ಕುಟುಂಬ ಮೃತ ದೇಹವನ್ನು ಮೊಗಾ ಜಿಲ್ಲೆಗೆ ತರಲು ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ಇದು ಪಂಜಾಬ್-ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಪರಿಶೀಲನೆಯಲ್ಲಿದೆ.

ಕಠಿಣ ನಿಲುವು ತೋರಿದ ಭಾರತ ಸರ್ಕಾರ: ಭಯೋತ್ಪಾದಕ ಖಾಂಡ ವಿರುದ್ಧ ಭಾರತ ಸರ್ಕಾರವೂ ಕಠಿಣ ನಿಲುವು ತಳೆದಿದೆ. ಭಾರತ ಸರ್ಕಾರದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಅವತಾರ್ ಸಿಂಗ್ ಅವರ ಮೃತದೇಹವನ್ನು ಪಂಜಾಬ್‌ಗೆ ತರಲು ಕೋರಿ ಸಲ್ಲಿಸಲಾದ ಅರ್ಜಿಯ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಪಂಜಾಬ್, ಹರಿಯಾಣ ಹೈಕೋರ್ಟ್‌ಗೆ ಕೆಲವು ದಿನಗಳ ಹಿಂದೆ ತನ್ನ ಉತ್ತರವನ್ನು ಸಲ್ಲಿಸಿತ್ತು. ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ, ಭಯೋತ್ಪಾದಕ ಖಾಂಡಾ ಭಾರತೀಯ ಪೌರತ್ವದ ಬಗ್ಗೆ ತಮ್ಮ ಬಳಿ ಯಾವುದೇ ಪುರಾವೆ ಅಥವಾ ದಾಖಲೆ ಇಲ್ಲ ಎಂದು ಹೇಳಿದೆ.

ಜೂ.15 ರಂದು ಸಾವನಪ್ಪಿದ್ದ ಖಾಂಡಾ: ಅವತಾರ್ ಸಿಂಗ್ ಖಂಡಾ ವಾರಿಸ್ ಪಂಜಾಬ್ ಮುಖ್ಯಸ್ಥ ಅಮೃತಪಾಲ್ ಆಪ್ತನಾಗಿದ್ದ. ಮಾಹಿತಿಯ ಪ್ರಕಾರ, ಕಳೆದ ತಿಂಗಳು ಜೂನ್ 15 ರಂದು ಆತ ರಕ್ತದ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿತ್ತು.

ತ್ರಿವರ್ಣ ಧ್ವಜ ಅವಮಾನಿಸಿದ ಖಂಡಾ: ಖಲಿಸ್ತಾನಿ ಬೆಂಬಲಿಗ ಅವತಾರ್ ಸಿಂಗ್ ಖಾಂಡಾ ಬ್ರಿಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದ. ಮಾ.19 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಭಾರತೀಯ ಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ಖಾಂಡಾ ಮತ್ತು ಇತರ ಮೂವರು ಪ್ರತ್ಯೇಕತಾವಾದಿಗಳನ್ನು ಪ್ರಮುಖ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುತಿಸಿದೆ.

ಇದನ್ನೂ ಓದಿ: ಲಂಡನ್‌ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನಿಗಳ ಅಟ್ಟಹಾಸ!

ಅವತಾರ್ ಸಿಂಗ್ ಖಾಂಡಾ ಯಾರು?: ಅವತಾರ್ ಸಿಂಗ್ ಖಾಂಡಾ ಪಂಜಾಬ್‌ನ ಮೊಗಾ ಜಿಲ್ಲೆಯ ನಿವಾಸಿ. 1988ರಲ್ಲಿ ರೋಡೆ ಗ್ರಾಮದಲ್ಲಿ ಜನಿಸಿದರು. ತಂದೆಯ ಹೆಸರು ಖಲಿಸ್ತಾನಿ ಚಳವಳಿಯೊಂದಿಗೆ ತಳುಕು ಹಾಕಿಕೊಂಡಿರುವುದರಿಂದ, ಭದ್ರತಾ ಏಜೆನ್ಸಿ ಆಗಾಗ ಅವತಾರ್ ಅವರ ಮನೆಗೆ ವಿಚಾರಣೆಗೆ ಬರುತ್ತಿತ್ತು. ಈ ಕಾರಣಕ್ಕಾಗಿ, ಅವರ ಕುಟುಂಬವು ಪಂಜಾಬ್‌ನಲ್ಲಿ, ಕೆಲವೊಮ್ಮೆ ಪಟಿಯಾಲಕ್ಕೆ, ಕೆಲವೊಮ್ಮೆ ಲೂಧಿಯಾನಕ್ಕೆ ಮತ್ತು ಕೆಲವೊಮ್ಮೆ ಮೊಗಾಕ್ಕೆ ಸ್ಥಳಾಂತರಗೊಳ್ಳುತ್ತಲೇ ಇತ್ತು.

ಅವತಾರ್ ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಖಲಿಸ್ತಾನಿ ಪಡೆಯ ಸಕ್ರಿಯ ಸದಸ್ಯರಾಗಿದ್ದರು. 1988ರಲ್ಲಿ ಖಾಂಡಾ ಅವರ ಚಿಕ್ಕಪ್ಪ ಬಲವಂತ್ ಸಿಂಗ್ ಖುಕ್ರಾನಾ ಅವರು ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. ಖಾಂಡಾ ಹುಟ್ಟಿದ ಮೂರು ವರ್ಷಗಳ ನಂತರ ಮಾರ್ಚ್ 3, 1991 ರಂದು ಅವರ ತಂದೆ ಕುಲ್ವಂತ್ ಸಿಂಗ್ ಖುಕ್ರಾನಾ ಕೂಡ ಭದ್ರತಾ ಪಡೆಗಳು ಎನ್ಕೌಂಟರ್​ಗೆ ಬಲಿಯಾಗಿದ್ದರು.

ಅವತಾರ್ ಅವರ ತಾಯಿಯ ಚಿಕ್ಕಪ್ಪ ಗುರ್ಜಂತ್ ಸಿಂಗ್ ಬುಧ್ಸಿಂಗ್ವಾಲಾ ಅವರು ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮುಖ್ಯಸ್ಥರಾಗಿದ್ದರು. ತನ್ನ 22ನೇ ವಯಸ್ಸಿನಲ್ಲಿ, ಖಾಂಡಾ ಅಧ್ಯಯನ ಮಾಡಲು ಬ್ರಿಟನ್‌ಗೆ ಹೋದರು. ಇಲ್ಲಿ ಅವರು ಖಲಿಸ್ತಾನಿಗಳ ಸಂಪರ್ಕಕ್ಕೆ ಬಂದರು. ನಂತರ ಖಲಿಸ್ತಾನಿ ಚಳವಳಿಯ ಸಕ್ರಿಯ ಸದಸ್ಯರಾದರು. ಅವತಾರ್ ಸಿಂಗ್ ಖಂಡಾ ಅವರು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಲಂಡನ್ ಘಟಕದ ಮುಖ್ಯಸ್ಥರಾಗಿದ್ದರು. ಯುನೈಟೆಡ್ ಕಿಂಗ್‌ಡಂನಲ್ಲಿ ಖಲಿಸ್ತಾನ್‌ನ ಗಟ್ಟಿ ಧ್ವನಿಯಾದ ಖಂಡಾ, ಖಲಿಸ್ತಾನ್‌ಗಾಗಿ ಧ್ವನಿ ಎತ್ತುವ ನಿಷೇಧಿತ ಸಂಘಟನೆಗಳನ್ನು ಒಗ್ಗೂಡಿಸಲು ಸಹ ಪ್ರಯತ್ನಿಸಿದ್ದರು. ಅಲ್ಲದೇ ಖಲಿಸ್ತಾನಿ ನಾಯಕರಾದ ಜಗತಾರ್ ಸಿಂಗ್ ತಾರಾ ಮತ್ತು ಪರಮ್‌ಜಿತ್ ಸಿಂಗ್ ಪಮ್ಮಾ ಅವರಿಗೆ ನಿಕಟರಾಗಿದ್ದರು ಎಂದು ಭದ್ರತಾ ಸಂಸ್ಥೆಗಳು ಹೇಳಿದ್ದವು.

ಇದನ್ನೂ ಓದಿ: ಖಲಿಸ್ತಾನಿಗಳ ಉದ್ಧಟತನಕ್ಕೆ ದಿಟ್ಟ ಪ್ರತಿಕ್ರಿಯೆ! ಹೈಕಮಿಷನ್ ಕಟ್ಟಡದಲ್ಲಿ ಮತ್ತೆ ಹಾರಾಡಿದ ಬೃಹತ್​ 'ತಿರಂಗಾ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.