ETV Bharat / bharat

ದೇಶದ ವಿಮಾನಯಾನ ಉದ್ಯಮಕ್ಕೆ 3 ವರ್ಷಗಳಲ್ಲಿ ₹28 ಸಾವಿರ ಕೋಟಿ ನಷ್ಟ - ವಿಮಾನಯಾನ ಉದ್ಯಮದ ಆರ್ಥಿಕ ಸ್ಥಿತಿ

ವಿಮಾನಯಾನ ಉದ್ಯಮವು ಕಳೆದ 3 ವರ್ಷಗಳಲ್ಲಿ 28 ಸಾವಿರ ಕೋಟಿ ನಷ್ಟ ಅನುಭವಿಸಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. ಅಲ್ಲದೆ ಕಳೆದ 2 ವರ್ಷಗಳಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ 1,090 ತಾಂತ್ರಿಕ ದೋಷಗಳು ವರದಿಯಾಗಿವೆ ಎಂದು ಸಚಿವಾಲಯ ಹೇಳಿದೆ.

Aviation Industry lost Rs 28 907 crore in last three years  Govt

author img

By

Published : Feb 3, 2023, 2:12 AM IST

ನವದೆಹಲಿ: ವಿಮಾನಯಾನ ಉದ್ಯಮವು ಕಳೆದ ಮೂರು ವರ್ಷಗಳಲ್ಲಿ 28,907 ಕೋಟಿ ರೂಪಾಯಿ ನಷ್ಟ ಕಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಲೋಕಸಭೆಗೆ ತಿಳಿಸಿದೆ. 2019 ರಲ್ಲಿ 4,770 ಕೋಟಿ ರೂಪಾಯಿ, 2020 ರಲ್ಲಿ 12,479 ಕೋಟಿ ರೂಪಾಯಿ ಮತ್ತು 2021 ರಲ್ಲಿ 11,658 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ನಾಗರಿಕ ವಿಮಾನಯಾನ ಉದ್ಯಮಕ್ಕೆ ಉಂಟಾದ ನಷ್ಟದ ಕುರಿತು ಕಾಂಗ್ರೆಸ್ ಸಂಸದ ಅನುಮುಲಾ ರೇವಂತ್ ರೆಡ್ಡಿ ಅವರ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ಉತ್ತರಿಸಿದ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯಸಚಿವ ಜನರಲ್ ಡಾ.ವಿ.ಕೆ.ಸಿಂಗ್ (ನಿವೃತ್ತ) ಈ ವಿವರ ಕೊಟ್ಟರು.

ದೇಶದಲ್ಲಿ ವಿಮಾನಯಾನ ಉದ್ಯಮದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇದೇ ರೀತಿಯ ವಿಶ್ಲೇಷಣೆಯನ್ನು ನಡೆಸಲು ಸರ್ಕಾರವು ಯಾವುದೇ ಸಮಯವನ್ನು ನಿಗದಿಪಡಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಗ್, ವಿಮಾನಯಾನ ಸಂಸ್ಥೆಗಳನ್ನು ಖಾಸಗಿ ನಿರ್ವಾಹಕರು ನಡೆಸುತ್ತಾರೆ ಮತ್ತು ಸರ್ಕಾರವು ವಿಮಾನಯಾನ ದರಗಳನ್ನು ನಿಯಂತ್ರಣ ಮುಕ್ತಗೊಳಿಸಿದೆ. ಹಾಗಾಗಿ, ಸರ್ಕಾರವು ವಿಮಾನಯಾನ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸುವುದಿಲ್ಲ ಎಂದರು.

ವಿಮಾನಯಾನ ಉದ್ಯಮದ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಸರ್ಕಾರವು ಕೈಗೊಂಡ ಉಪಕ್ರಮಗಳ ಕುರಿತು ಮಾಹಿತಿ ನೀಡಿದ ಸಚಿವ ಸಿಂಗ್, ಏವಿಯೇಷನ್ ಟರ್ಬೈನ್ ಇಂಧನ (ATF) ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಖ್, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ಇತರೆ ಸೇರಿದಂತೆ 17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕಡಿಮೆಗೊಳಿಸಿವೆ ಎಂದು ಹೇಳಿದರು.

ಅಸ್ತಿತ್ವದಲ್ಲಿರುವ ಟರ್ಮಿನಲ್‌ಗಳು, ಹೊಸ ಟರ್ಮಿನಲ್‌ಗಳು ಮತ್ತು ರನ್‌ವೇಗಳ ಬಲಪಡಿಸುವಿಕೆ ಮತ್ತು ಇತರ ಚಟುವಟಿಕೆಗಳ ವಿಸ್ತರಣೆ ಮತ್ತು ಮಾರ್ಪಾಡುಗಳಿಗಾಗಿ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಮತ್ತು ಇತರ ಏರ್‌ಪೋರ್ಟ್ ಡೆವಲಪರ್‌ಗಳು ಮುಂದಿನ ಐದು ವರ್ಷಗಳಲ್ಲಿ ವಿಮಾನ ನಿಲ್ದಾಣ ವಲಯದಲ್ಲಿ 98,000 ಕೋಟಿ ರೂ. ಹೂಡಿಕೆಯ ಯೋಜನೆಗಳನ್ನು ಹೊಂದಿವೆ ಎಂದು ಅವರು ಮಾಹಿತಿ ಒದಗಿಸಿದರು.

2 ವರ್ಷದಲ್ಲಿ 1,090 ತಾಂತ್ರಿಕ ದೋಷ: ಕಳೆದ ಎರಡು ವರ್ಷಗಳಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ 1,090 ತಾಂತ್ರಿಕ ದೋಷಗಳು ವರದಿಯಾಗಿವೆ. 2021 ರಲ್ಲಿ 544 ಮತ್ತು 2022 ರಲ್ಲಿ 546 ದೋಷಗಳು ವರದಿಯಾಗಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ (MoS) ವಿ.ಕೆ.ಸಿಂಗ್ ಗುರುವಾರ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇಂಡಿಗೋ 2022 ರಲ್ಲಿ 215, 2021 ರಲ್ಲಿ 179, ಸ್ಪೈಸ್‌ಜೆಟ್ 2022 ರಲ್ಲಿ 143 ಮತ್ತು 170 ಮತ್ತು 2021 ರಲ್ಲಿ 170 ಮತ್ತು ವಿಸ್ತಾರಾ 2022 ರಲ್ಲಿ 97 ತಾಂತ್ರಿಕ ದೋಷಗಳನ್ನು ವರದಿ ಮಾಡಿವೆ.

ಏತನ್ಮಧ್ಯೆ, 2022 ರಲ್ಲಿ ವಿಮಾನ ಹಾರಾಟ ತರಬೇತಿ ಸಂಸ್ಥೆಗಳ ವಿಮಾನವನ್ನು ಒಳಗೊಂಡ ಒಟ್ಟು 8 ಅಪಘಾತಗಳು ದಾಖಲಾಗಿವೆ. 7 ಪ್ರಕರಣಗಳಲ್ಲಿ ತನಿಖೆ ಪ್ರಗತಿಯಲ್ಲಿದೆ. ತರಬೇತಿ ವಿಮಾನಗಳನ್ನು ಒಳಗೊಂಡ ದೇಶಾದ್ಯಂತ ಸಂಭವಿಸುವ ಅಪಘಾತಗಳ ಸಂಖ್ಯೆಯ ಕುರಿತು ಡಿಎಂಪಿ ಸಂಸದ ಡಾ.ಗೌತಮ್ ಸಿಗಮಣಿ ಪೊನ್ ಅವರ ಪ್ರಶ್ನೆಗೆ ಸಿಂಗ್ ಉತ್ತರಿಸಿದ್ದಾರೆ.

ಇದನ್ನೂ ಓದಿ: ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಮಾನದಲ್ಲಿ ಅನುಚಿತ ವರ್ತನೆ.. ಸಿಬ್ಬಂದಿಗೆ ಥಳಿಸಿ, ಅರಬೆತ್ತಲಾಗಿ ಓಡಾಡಿದ ಮಹಿಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.