ETV Bharat / bharat

ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ವಿವಾದ ವರ್ಗಾವಣೆ: ಸುಪ್ರೀಂ ಆದೇಶ - ಹಿಂದೂ ಸಂಘಟನೆಗಳ ವಾದ

ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ವಿಚಾರವಾಗಿ ಹಿಂದೂ ಸಂಘಟನೆಗಳು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದು, ಇದು ಬ್ರಿಟೀಷ್ ಕ್ಯಾಲೆಂಡರ್ ಪ್ರಾರಂಭವಾಗುವ ಮೊದಲೇ ಆದಿ ವಿಶೇಶ್ವರ ದೇವರಿಗೆ ಸೇರಿದ ಆಸ್ತಿಯಾಗಿದ್ದು, ಈಗಲೂ ಮುಂದುವರಿಯುತ್ತಿದೆ ಎಂದಿದೆ.

Gyanvapi not a mosque
ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ವಿಚಾರ
author img

By

Published : May 20, 2022, 4:03 PM IST

Updated : May 20, 2022, 6:11 PM IST

ನವದೆಹಲಿ: ಕಾಶಿ ವಿಶ್ವನಾಥ ಮತ್ತು ಜ್ಞಾನವಾಪಿ ಮಸೀದಿ ವಿವಾದ ಕುರಿತ ವಿಚಾರಣೆಯನ್ನು ವಾರಾಣಸಿಯ ಹಿರಿಯ ಸಿವಿಲ್​ ನ್ಯಾಯಾಲಯದಿಂದ ಜಿಲ್ಲಾ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್​​ ವರ್ಗಾವಣೆ ಮಾಡಿದೆ. ಅಲ್ಲದೇ, ಇಲ್ಲಿ ದೊರೆತ ಶಿವಲಿಂಗಕ್ಕೆ ಭದ್ರತೆ ಮತ್ತು ಮುಸ್ಲಿಮರು ನಮಾಜ್​ ಮಾಡಲು ಅವಕಾಶ ನೀಡಿದ್ದ ತನ್ನ ಮಧ್ಯಂತರ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ಮುಂದುವರಿಸಿದೆ.

ಹಿಂದೂ ಸಂಘಟನೆಗಳ ವಾದ: ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದು, ಜ್ಞಾನವಾಪಿ ಮಸೀದಿಯು ಮಸೀದಿಯೇ ಅಲ್ಲ. ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ಭೂಮಿಯನ್ನು ಹಸ್ತಾಂತರಿಸುವ ಕುರಿತು ಯಾವುದೇ ಮುಸ್ಲಿಮರು ಅಥವಾ ಮುಸ್ಲಿಮರ ಸಮಿತಿ ಅಥವಾ ವಕ್ಫ್ ರಚಿಸಲು ಆದೇಶ ನೀಡಿಲ್ಲ ಹೇಳಿವೆ.

1669ರ ಏಪ್ರಿಲ್ 9ರಂದು ಅಂದಿನ ಇಸ್ಲಾಮಿಕ್ ದೊರೆ ಔರಂಗಜೇಬ್ ವಾರಾಣಸಿಯಲ್ಲಿರುವ ಆದಿ ವಿಶೇಶ್ವರ ದೇವಾಲಯ ಕೆಡವಲು ನಿರ್ದೇಶಿಸಿ ಹೊರಡಿಸಿದೆ ಆದೇಶವನ್ನುಇತಿಹಾಸಕಾರರು ದೃಢಪಡಿಸಿದ್ದಾರೆ. ಆದರೆ, ಈ ಭೂಮಿ ಬಗ್ಗೆ ವಕ್ಫ್ ರಚಿಸಲು ಅಥವಾ ಯಾವುದೇ ಮುಸ್ಲಿಮರು ಅಥವಾ ಮುಸ್ಲಿಮರ ಸಮಿತಿಗೆ ಹಸ್ತಾಂತರಿಸುವ ಕುರಿತು ಯಾವುದೇ ದಾಖಲೆಗಳು ಇಲ್ಲ ಎಂದು ಪ್ರತಿವಾದಿಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ವಕ್ಫ್​ಗೆ ಮೀಸಲಾದ ಭೂಮಿ ಮೇಲೆ ಮಾತ್ರವೇ ವಕ್ಫ್ ರಚಿಸಬಹುದು. ಆದರೆ, ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ. ಆದ್ದರಿಂದ ಅನಾದಿ ಕಾಲದಿಂದಲೂ ಭೂಮಿ ಮತ್ತು ಆಸ್ತಿ ದೇವರಿಗೆ ಸೇರಿದೆ. ಇದರಿಂದ ಇಲ್ಲಿ ಮಸೀದಿ ಇರಬಾರದು ಎಂಬುದು ಸ್ಪಷ್ಟವಾಗಿದೆ ಎಂದು ವಾದ ಮಂಡಿಸಿದ್ದಾರೆ. ಅಲ್ಲದೇ, ಕಾಶಿಯು ಹಲವಾರು ದಾಳಿಗೆ ಗುರಿಯಾಗಿದೆ. ಆದಿ ವಿಶೇಶ್ವರನ ದೇವಾಲಯದ ಮೇಲೆ 1193ರಿಂದ 1669ರವರೆಗೆ ಅನೇಕ ಬಾರಿ ಆಕ್ರಮಣ ಮಾಡಲಾಗಿದೆ. ಅಲ್ಲದೇ, ಈ ದೇವಸ್ಥಾನ ಲೂಟಿ ಮಾಡಿ ಕೆಡವಲಾಯಿತು ಎಂದು ಪ್ರತಿಪಾದಿಸಿದ್ದಾರೆ.

ಕಾಶಿಯಲ್ಲಿರುವ ಆದಿ ವಿಶೇಶ್ವರ ಜ್ಯೋತಿರ್ಲಿಂಗವು ಉದ್ಭವ ಮೂರ್ತಿಯಾಗಿದೆ. ಇದು ತಪೋ ಭೂಮಿ ಭರತ ವರ್ಷದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾದ 12 ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪುರಾತನವಾಗಿದೆ. ಹಿಂದೂ ಪುರಾಣಗಳಲ್ಲಿ ಜ್ಯೋತಿರ್ಲಿಂಗಗಳು ಮಹತ್ತರವಾದ ಸ್ಥಾನ ಹೊಂದಿವೆ. ಅದರ ಪ್ರಾಮುಖ್ಯತೆಯನ್ನು ವೇದಗಳು, ಪುರಾಣಗಳು, ಉಪನಿಷತ್ತುಗಳು ಮತ್ತು ಶಾಸ್ತ್ರಗಳಲ್ಲಿ ವಿವರಿಸಲಾಗಿದ್ದು, ಇದನ್ನು ಸಂತನ ವೈದಿಕ ಹಿಂದೂ ಧರ್ಮದ ಭಕ್ತರು ಮತ್ತು ಆರಾಧಕರು ಪಾಲಿಸುತ್ತಿದ್ಧಾರೆ ಎಂದು ವಾದಿಸಲಾಗಿದೆ.

ಇದು ಬ್ರಿಟೀಷ್ ಕ್ಯಾಲೆಂಡರ್ ಪ್ರಾರಂಭವಾಗುವ ಮೊದಲೇ ಆದಿ ವಿಶೇಶ್ವರ ದೇವರಿಗೆ ಸೇರಿದ ಆಸ್ತಿಯಾಗಿದ್ದು, ಈಗಲೂ ಮುಂದುವರಿಯುತ್ತಿದೆ. ಔರಂಗಜೇಬ್​ 'ಹಿಂದೂ ದೇವಾಲಯಗಳ ವಿಧ್ವಂಸಕದಲ್ಲಿ ಚಾಂಪಿಯನ್' ಆಗಿದ್ದು, 1669ರಲ್ಲಿ ಹಿಂದೂಗಳು ಪ್ರಮುಖವಾಗಿ ಪೂಜಿಸುತ್ತಿದ್ದ ಕಾಶಿ ಮತ್ತು ಮಥುರಾ ಸೇರಿದಂತೆ ಅನೇಕ ದೇವಾಲಯಗಳನ್ನು ನಾಶಮಾಡಲು ಫಾರ್ಮಾನ್‌ಗಳನ್ನು ಹೊರಡಿಸಿದ್ದಎಂದು ಆರೋಪಿಸಲಾಗಿದೆ.

ಈ ಆದೇಶವನ್ನು ಅನುಸರಿಸಿಯೇ ವಾರಾಣಸಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಲಾಯಿತು. ನಂತರ ಅಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣ ಮಾಡಲಾಯಿತು. ಆದರೆ, ಶೃಂಗಾರ್ ಗೌರಿ ದೇವಿಯ ವಿಗ್ರಹ, ಗಣೇಶ ಮತ್ತು ಇತರ ದೇವತೆಗಳ ವಿಗ್ರಹಗಳು ಅದೇ ಕಟ್ಟಡದ ಸಂಕೀರ್ಣದಲ್ಲಿ ಮುಂದುವರಿದ ಕಾರಣ ಹಿಂದೂ ದೇವಾಲಯಗಳ ಧಾರ್ಮಿಕ ಹಕ್ಕುಗಳನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ವಾದಿಸಲಾಗಿದೆ.

ಇದನ್ನೂ ಓದಿ: ಜೂನ್‌ 1ಕ್ಕೆ ಅಯೋಧ್ಯೆ ರಾಮಮಂದಿರ ಗರ್ಭಗುಡಿಯ ಶಿಲಾನ್ಯಾಸ.. 2024ರಲ್ಲಿ ಮೂರ್ತಿ ಪ್ರತಿಷ್ಠಾ ಕಾರ್ಯ : ಪೇಜಾವರ ಶ್ರೀ

Last Updated : May 20, 2022, 6:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.