ETV Bharat / bharat

ಉತ್ತರಪ್ರದೇಶ ಸಿಎಂ ಯೋಗಿ ನಿವಾಸದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ.. ಇಬ್ಬರ ಸ್ಥಿತಿ ಗಂಭೀರ

author img

By

Published : Apr 4, 2022, 4:16 PM IST

ಭದ್ರತಾ ಸಿಬ್ಬಂದಿಯ ಮೇಲೆ ದಾಳಿಗೆ ನಿಖರ ಕಾರಣ ಗೊತ್ತಾಗಿಲ್ಲ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಕೋರರಿಂದ ಲ್ಯಾಪ್​ಟಾಪ್​, ಮೊಬೈಲ್​ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭಯೋತ್ಪಾದಕ ದಾಳಿಯ ಕೋನದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣವನ್ನು ಭಯೋತ್ಪದನಾ ನಿಗ್ರಹ ದಳಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ..

Attack
ಸಿಎಂ ಯೋಗಿ

ಗೋರಖ್‌ಪುರ : ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸವಾದ ಮಹಾಯೋಗಿ ಗುರು ಗೋರಖನಾಥ ದೇವಸ್ಥಾನದ ಭದ್ರತಾ ಸಿಬ್ಬಂದಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಇದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ತಡರಾತ್ರಿಯ ವೇಳೆ ಮಹಾಯೋಗಿ ಗುರು ಗೋರಖನಾಥ ದೇವಸ್ಥಾನಕ್ಕೆ ಬಂದ ಇಬ್ಬರು ಆರೋಪಿಗಳು ಜಯಘೋಷಗಳೊಂದಿಗೆ ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ತಡೆದ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಬಲವಂತವಾಗಿ ದೇವಸ್ಥಾನ ಪ್ರವೇಶಕ್ಕೆ ಮುಂದಾದಾಗ, ಇಬ್ಬರ ಮಧ್ಯೆ ಮಾತಿಕ ಚಕಮಕಿ ನಡೆದಿದೆ. ಕ್ರುದ್ಧರಾದ ಆರೋಪಿಗಳಿಬ್ಬರು, ಇದ್ದಕ್ಕಿದ್ದಂತೆ ಭದ್ರತಾ ಸಿಬ್ಬಂದಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾರೆ.

ಘಟನೆಯಲ್ಲಿ ಗೋಪಾಲ್‌ಗೌರ್ ಮತ್ತು ಅನಿಲ್​ ಪಾಸ್ವಾನ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ಕಂಡ ಅಲ್ಲಿಯೇ ಇದ್ದ ಇನ್ನಷ್ಟು ಸಿಬ್ಬಂದಿ ಬಂದು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ತಕ್ಷಣವೇ ಗುರು ಗೋರಖನಾಥ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ದಾಳಿ ಮಾಡಿದ ಇಬ್ಬರು ಹಲ್ಲೆಕೋರರನ್ನು ಬಂಧಿಸಿದ್ದು, ಅದರಲ್ಲಿ ಒಬ್ಬಾತ ಐಐಟಿ ಪದವೀಧರನಾಗಿದ್ದಾನೆ.

ಭದ್ರತಾ ಸಿಬ್ಬಂದಿಯ ಮೇಲೆ ದಾಳಿಗೆ ನಿಖರ ಕಾರಣ ಗೊತ್ತಾಗಿಲ್ಲ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಕೋರರಿಂದ ಲ್ಯಾಪ್​ಟಾಪ್​, ಮೊಬೈಲ್​ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭಯೋತ್ಪಾದಕ ದಾಳಿಯ ಕೋನದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣವನ್ನು ಭಯೋತ್ಪದನಾ ನಿಗ್ರಹ ದಳಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಪಾಕಿಸ್ತಾನದಲ್ಲಿ ಹಂಗಾಮಿ ಪ್ರಧಾನಿ ನೇಮಕ ಪ್ರಕ್ರಿಯೆಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.