ETV Bharat / bharat

ಕೆಟಿಆರ್​​​​​​​ಗಾರು ಬೆಂಗಳೂರಿನೊಂದಿಗೆ ಸ್ಪರ್ಧಿಸುವುದನ್ನ ಬಿಡಿ, ಕರಾಚಿ - ಲಾಹೋರದೊಂದಿಗೆ ನೀವು ಸ್ಪರ್ಧಿಸಬಹುದು: ಬಿಜೆಪಿ ವ್ಯಂಗ್ಯ

author img

By

Published : Apr 6, 2022, 2:18 PM IST

ಹೈದ್ರಾಬಾದ್​ನ ಬೋಲಕ್​ಪುರದಲ್ಲಿ ಪೊಲೀಸರೊಂದಿಗೆ ಕೆಲವರು ಅನುಚಿತವಾಗಿ ವರ್ತಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವಿಡಿಯೋಗಳನ್ನು ಕರ್ನಾಟಕ ಬಿಜೆಪಿ ಹಂಚಿಕೊಂಡು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್​​ ಪುತ್ರರೂ ಆದ ಸಚಿವ ಕೆ.ಟಿ.ಆರ್​. ಅವರಿಗೆ ತಿರುಗೇಟು ನೀಡಿದೆ.

karnataka state bjp and Telangana Minister KTR

ಹೈದರಾಬಾದ್​​: ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿನ ಕೆಲ ಘಟನೆಗಳು ಎರಡೂ ರಾಜ್ಯಗಳ ರಾಜಕೀಯಕ್ಕೆ ಬಳಕೆಯಾಗುತ್ತಿವೆ. ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಕೆಲ ದಿನಗಳ ಹಿಂದೆ ರವೀಶ್​ ನರೇಶ್​ ಎಂಬುವವರು ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ತೆಲಂಗಾಣದ ಸಚಿವ ಕೆ.ಟಿ.ರಾಮರಾವ್ ( ಕೆ.ಟಿ.ಆರ್) ಬೆಂಗಳೂರು ಬಿಟ್ಟು ಹೈದರಾಬಾದ್​​ಗೆ ಬನ್ನಿ ಎಂದು ಕರೆ ನೀಡಿದ್ದರು.​ ಇದಕ್ಕೆ ಅವತ್ತೇ ಕರ್ನಾಟಕದ ಸಚಿವ ಸಿ.ಎನ್​. ಅಶ್ವಥ್​ ನಾರಾಯಣ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿರುಗೇಟು ನೀಡಿದ್ದರು.

ಇದೀಗ ಹೈದರಾಬಾದ್​ನಲ್ಲಿ ನಡೆದ ಘಟನೆಯೊಂದರ ಸಂಬಂಧ ಕರ್ನಾಟಕ ರಾಜ್ಯ ಬಿಜೆಪಿ ಘಟಕವು ತೆಲಂಗಾಣದ ಸಚಿವ ಕೆ.ಟಿ.ಆರ್​. ಅವರ ಕಾಲೆಳೆದು ಮತ್ತೊಮ್ಮೆ ತಿರುಗೇಟು ಕೊಟ್ಟಿದೆ. 'ಕೆ.ಟಿ.ಆರ್. ಗಾರು ನಮ್ಮ ಬೆಂಗಳೂರಿನೊಂದಿಗೆ ಸ್ಪರ್ಧೆ ಮಾಡುವುದನ್ನು ಬಿಟ್ಟು ಬಿಡಿ, ಕರಾಚಿ ಅಥವಾ ಲಾಹೋರದೊಂದಿಗೆ ನೀವು ಸ್ಪರ್ಧಿಸಬಹುದು' ಎಂದು ಕರ್ನಾಟಕ ಬಿಜೆಪಿ ಟ್ವೀಟ್​​ ಮಾಡಿ ಟಾಂಗ್​ ಕೊಟ್ಟಿದೆ.

  • Dear @KTRTRS Garu,

    If you allow Fundamentalists to dictate @hydcitypolice, forget competing with Namma Bengaluru, you can at best compete with Karachi or Lahore.

    Stop your "appeasement politics" and show these Jihadis the real power of the law.

    Will you accept our challenge? pic.twitter.com/pfUpRd4Y89

    — BJP Karnataka (@BJP4Karnataka) April 6, 2022 " class="align-text-top noRightClick twitterSection" data=" ">

ಅಲ್ಲದೇ, 'ನಿಮ್ಮ ತುಷ್ಟೀಕರಣ ನೀತಿ ನಿಲ್ಲಿಸಿ ಮತ್ತು ಈ ಜಿಹಾದಿಗಳಿಗೆ ಕಾನೂನಿನ ನಿಜವಾದ ಶಕ್ತಿಯನ್ನು ತೋರಿಸಿ... ನೀವು ನಮ್ಮ ಸವಾಲನ್ನು ಸ್ವೀಕರಿಸುತ್ತೀರಾ ಎಂದು ಟ್ವೀಟ್​ ಮೂಲಕ ತೆಲಂಗಾಣದ ಸಚಿವ ಕೆ.ಟಿ.ಆರ್​. ಅವರಿಗೆ ಮರು ಸವಾಲು ಹಾಕಿದೆ.

ಏನಿದು ಘಟನೆ?: ಹೈದರಾಬಾದ್​ನ ಬೋಲಕ್​ಪುರದಲ್ಲಿ ಪೊಲೀಸರೊಂದಿಗೆ ಕೆಲವರು ಅನುಚಿತವಾಗಿ ವರ್ತಿಸಿದ್ದರು. ರಾತ್ರಿ ತೆರೆದಿದ್ದ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಅಂಗಡಿಯವರಿಗೆ ಸೂಚಿಸಿದ್ದರು. ಆದರೆ, ವಿಶೇಷ ಆಚರಣೆ ಕಾರಣ ಅಂಗಡಿಗಳ್ನು ತೆರೆಯಲಾಗಿದೆ ಎಂದು ಅಂಗಡಿಯವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಈ ವೇಳೆ, ಸ್ಥಳಕ್ಕೆ ಬಂದಿದ್ದ ಕಾರ್ಪೊರೇಟರ್ ಒಬ್ಬರು ಪೊಲೀಸರಿಗೆ ನಿಂದಿಸಿದ್ದಾರೆ ಎನ್ನಲಾಗಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದೇ ವಿಡಿಯೋಗಳನ್ನು ಕರ್ನಾಟಕ ಬಿಜೆಪಿ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ ಪುತ್ರರೂ ಆದ ಸಚಿವ ಕೆ.ಟಿ.ಆರ್​. ಅವರಿಗೆ ತಿರುಗೇಟು ನೀಡಲಾಗಿದೆ. ಇತ್ತ, ಬೋಲಕ್​ಪುರದಲ್ಲಿ ನಡೆದ ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ಕೆ.ಟಿ.ಆರ್ ಕೂಡ ಡಿಜಿಪಿಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಾಂಸಾಹಾರ, ಮದ್ಯಪಾನಕ್ಕೆ ಸ್ವಯಂಪ್ರೇರಿತ ನಿರ್ಬಂಧ.. ಇಲ್ಲಿದೆ ಸಂಪೂರ್ಣ ಸಸ್ಯಾಹಾರ ಗ್ರಾಮ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.