ಅಮರಾವತಿ(ಆಂಧ್ರಪ್ರದೇಶ) : ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ 'ಮಿಷನ್ ಗಂಗಾ' ಯೋಜನೆಯಡಿ ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಶನಿವಾರದಿಂದ ಈವರೆಗೆ ನೂರಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ. ತಮ್ಮ ಊರಿಗೆ ವಾಪಸ್ ಆಗಿರುವ ಆಂಧ್ರ ಮೂಲದ 23 ವಿದ್ಯಾರ್ಥಿಗಳು ಅಲ್ಲಿ ಅನುಭವಿಸಿದ ಯಾತನೆಯನ್ನು ಬಿಚ್ಚಿಟ್ಟಿದ್ದಾರೆ.
ಉಕ್ರೇನ್‌ನಲ್ಲಿ ವ್ಯಾಸಂಗಕ್ಕಾಗಿ ಹೋಗಿದ್ದ ಕಾವ್ಯಾಶ್ರೀ ಎಂಬ ವಿದ್ಯಾರ್ಥಿನಿ ಮಾತನಾಡಿ, ಅಲ್ಲಿನ ಪರಿಸ್ಥಿತಿ ತುಂಬಾ ಚಿಂತಾಜನವಾಗಿದೆ. ಇನ್ನೂ ಹಲವಾರು ತೆಲುಗು ವಿದ್ಯಾರ್ಥಿಗಳು ಬಂಕರ್‌ಗಳಲ್ಲೇ ಇದ್ದಾರೆ. ಇವರನ್ನೂ ಕೇಂದ್ರ ಸರ್ಕಾರ ಹಾಗೂ ರಾಯಭಾರ ಕಚೇರಿ ಅತ್ಯಂತ ಸುರಕ್ಷಿತವಾಗಿ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಆಂಧ್ರಕ್ಕೆ ವಾಪಸ್ ಆದ 23 ವಿದ್ಯಾರ್ಥಿಗಳಲ್ಲಿ ಒಬ್ಬರಾದ ಸಾಯಿ ಪ್ರವೀಣ್, ಯುದ್ಧದಿಂದ ತುಂಬಾ ಗಾಬರಿಗೊಂಡಿದ್ದೆ. ಆಹಾರಕ್ಕೆ ಅಗತ್ಯ ವಸ್ತುಗಳು ಸಹ ಲಭ್ಯ ಇರಲಿಲ್ಲ. ಬದುಕಲು ಈರುಳ್ಳಿ ತಿನ್ನಬೇಕಾಯಿತು.
ಆದರೆ, ಅದು ಕೂಡ ಸಾಕಾಗಲಿಲ್ಲ. ನಂತರ ಹೇಗಾದರೂ ದೇಶದ ಗಡಿಯಾಚೆಗಿನ ವಿಮಾನ ನಿಲ್ದಾಣವನ್ನು ತಲುಪುವ ಮೂಲಕ ಇತರೆ ವಿದ್ಯಾರ್ಥಿಗಳನ್ನು ಸೇರಿಕೊಳ್ಳುವಲ್ಲಿ ಯಶಸ್ವಿಯಾದೆವು ಎಂದು ಉಕ್ರೇನ್‌ನಲ್ಲಿ ಅನುಭವಿಸಿದ ಸಂಕಷ್ಟವನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಬೇಗ ನಮ್ಮನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಮಾಡಿ: ಖಾರ್ಕೀವ್‌ನಲ್ಲಿರುವ ಅಥಣಿ, ದಾವಣಗೆರೆ ವಿದ್ಯಾರ್ಥಿಗಳ ಮನವಿ