ಇಡುಕ್ಕಿ(ಕೇರಳ): 75ರ ಇಳಿ ವಯಸ್ಸಿನಲ್ಲೂ ಫುಲ್ ಆ್ಯಕ್ಟಿವ್ ಆಗಿರುವ ವ್ಯಕ್ತಿ ಕರಾಟೆಯಲ್ಲಿ 2ನೇ 'ಡಾನ್ ಬ್ಲಾಕ್ಬೆಲ್ಟ್' ಪಡೆದುಕೊಂಡಿದ್ದಾರೆ. ಈ ಮೂಲಕ ಸಾಧನೆ ಮಾಡಲು ವಯಸ್ಸು ಅಡ್ಡಿಯಾಗಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. 58ನೇ ವಯಸ್ಸಿನಲ್ಲಿ ಕರಾಟೆ ಕಲಿಯಲು ಆರಂಭಿಸಿದ ಚೆಟ್ಟನ್, ಇಡುಕ್ಕಿಯ ಕಾಮಾಕ್ಷಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸಹ ಈ ಹಿಂದೆ ಕೆಲಸ ಮಾಡಿದ್ದಾರೆ.
ಯುವಕರು ನಾಚುವ ರೀತಿ ದೇಹಕಟ್ಟು ಹೊಂದಿರುವ ಚೆಟ್ಟನ್, ಪ್ರತಿದಿನ ಒಂದು ಗಂಟೆಗೂ ಅಧಿಕ ಕಾಲ ವ್ಯಾಯಾಮ ಮಾಡ್ತಾರೆ. ಕಷ್ಟಪಟ್ಟು ಕರಾಟೆ ಕಲಿತಿರುವ ಇವರು 75ನೇ ವಯಸ್ಸಿನಲ್ಲಿ ಎರಡನೇ ಡಾನ್ ಬ್ಲಾಕ್ಬೆಲ್ಟ್ ಪಡೆದುಕೊಂಡಿದ್ದಾರೆ. ಅಚೋಯಿ ಚೆಟ್ಟನ್ ಇಷ್ಟೊಂದು ಆರೋಗ್ಯವಾಗಿರಲು ಕಾರಣವಾಗಿರುವುದು ಅವರು ಪ್ರತಿದಿನ ಮಾಡುವ ವ್ಯಾಯಾಮವಾಗಿದೆ.
ಇದನ್ನೂ ಓದಿ: ನೋಡಿ! ವಯನಾಡು ಘಾಟ್ನಲ್ಲಿ ಯಮನಂತೆ ಬಂದು ಬೈಕ್ಗೆ ಅಪ್ಪಳಿಸಿದ ಬಂಡೆ; ಸವಾರ ಸಾವು
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೆಟ್ಟನ್, ನನ್ನ ಮಕ್ಕಳು ಕರಾಟೆ ತರಗತಿಗೆ ಹೋದಾಗ ಅಲ್ಲಿಗೆ ನಾನು ಸೇರಿಕೊಳ್ಳಬೇಕು ಎಂಬ ಆಸಕ್ತಿ ಬಂತು. ಹೀಗಾಗಿ, 58ನೇ ವಯಸ್ಸಿನಲ್ಲಿ ಕವಲಕ್ಕಟ್ ಜೋಸ್ ಎಂಬುವವರ ಬಳಿ ಈ ವಿದ್ಯೆ ಕಲಿಯರು ಆರಂಭಿಸಿದ್ದೆ. 62ನೇ ವಯಸ್ಸಿನಲ್ಲಿ ನಾನು ಮೊದಲು ಡಾನ್ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದೇನೆ. ಇದೀಗ ಎರಡನೇ ಬ್ಲಾಕ್ ಬೆಲ್ಟ್ ಪಡೆದುಕೊಂಡಿರುವುದು ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಾಳಿ ನಡೆಯುತ್ತಿದ್ದು, ಅವುಗಳಿಂದ ರಕ್ಷಣೆ ಪಡೆದುಕೊಳ್ಳಲು ಈ ಸಮರ ಕಲೆ ಅವಶ್ಯವಾಗಿದೆ ಎಂದಿದ್ದಾರೆ.