ETV Bharat / bharat

5,696 ಸಹಾಯಕ ಲೋಕೋ ಪೈಲಟ್​​ ಹುದ್ದೆಗಳ ನೇಮಕಾತಿ

author img

By ETV Bharat Karnataka Team

Published : Jan 19, 2024, 12:19 PM IST

Updated : Jan 19, 2024, 12:53 PM IST

ರೈಲ್ವೆ ನೇಮಕಾತಿ ಮಂಡಳಿಯಿಂದ ನಡೆಯಲಿರುವ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Assistant Loco Pilot job Notification by RRB

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ದೇಶಾದ್ಯಂತ ಅಸಿಸ್ಟೆಂಟ್​ ಲೋಕೋ ಪೈಲಟ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 5,696 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: 10ನೇ ತರಗತಿ ಜೊತೆಗೆ ಐಟಿಐ ಪದವಿ ಪಡೆದಿರಬೇಕು ಅಥವಾ 10ನೇ ತರಗತಿ ಜೊತೆಗೆ ಡಿಪ್ಲೊಮಾ ಪದವಿ/10+2 ಅನ್ನು ಭೌತಶಾಸ್ತ್ರ/ಗಣಿತದೊಂದಿಗೆ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಕನಿಷ್ಠ 18ರಿಂದ ಗರಿಷ್ಠ 30 ವರ್ಷ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್​ ಆಧಾರಿತ ಪರೀಕ್ಷೆ.

ವೇತನ: ಮಾಸಿಕ 19,900 ರೂ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250 ರೂ ಶುಲ್ಕ ನಿಗದಿಸಲಾಗಿದೆ. ಇತರೆ ಅಭ್ಯರ್ಥಿಗಳಿಗೆ 500 ರೂ ಶುಲ್ಕ ಪಾವತಿಸಬೇಕಿದೆ. ಅಭ್ಯರ್ಥಿಗಳು ಆರ್​ಆರ್​ಬಿಯ ಸಿಇಎನ್​ ನಂ ಆಧಾರಿತವಾಗಿ ಆ ರಾಜ್ಯಗಳಿಗೆ ನೀಡಿರುವ ಅಧಿಕೃತ ವೆಬ್​ಸೈಟ್​ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅದರನುಸಾರ ಕರ್ನಾಟಕದ ಅಭ್ಯರ್ಥಿಗಳು www.rrbbnc.gov.in ಇಲ್ಲಿ ಅರ್ಜಿ ಸಲ್ಲಿಸಬೇಕಿದೆ.

ಈ ಹುದ್ದೆಗಳಿಗೆ ಜನವರಿ 20ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಫೆಬ್ರವರಿ 19 ಕೊನೇಯ ದಿನ. ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಗೆ indianrailways.gov.in ಇಲ್ಲಿಗೆ ಭೇಟಿ ನೀಡಿ.

ರೈಲ್ವೆ ಕಾನ್ಸ್​ಟೆಬಲ್​ ಹುದ್ದೆಗಳು: ರೈಲ್ವೆ ಭದ್ರತಾ ಪಡೆಯಿಂದ 2,250 ಸಬ್​ ಇನ್ಸ್​​ಪೆಕ್ಟರ್​​ ಮತ್ತು ಕಾನ್ಸ್​ಟೆಬಲ್​ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕಾನ್ಸ್​ಟೆಬಲ್​ ಹುದ್ದೆಗೆ ಎಸ್​ಎಸ್​ಎಲ್​ಸಿ ಮತ್ತು ಸಬ್‌ ಇನ್ಸ್​ಪೆಕ್ಟರ್​ ಹುದ್ದೆಗೆ ಪದವಿ ಪೂರ್ಣಗೊಳಿಸರಬೇಕು.

ವಯೋಮಿತಿ: ಕಾನ್ಸ್​ಟೆಬಲ್​ ಹುದ್ದೆಗೆ ಕನಿಷ್ಟ 18 ಮತ್ತು ಗರಿಷ್ಠ 25 ವರ್ಷ. ಸಬ್​ ಇನ್ಸ್​ಪೆಕ್ಟರ್​​ ಕನಿಷ್ಠ 20ರಿಂದ ಗರಿಷ್ಠ 25 ವರ್ಷ ಪೂರ್ಣಗೊಂಡಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನ ಜನವರಿ 31. ಈ ಕುರಿತ ಸಂಪೂರ್ಣ ಮಾಹಿತಿಗೆ indianrailways.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: 5,124 ಹುದ್ದೆಗಳ ಭರ್ತಿಗೆ KEA ಅಧಿಸೂಚನೆ; BMTC ಸೇರಿದಂತೆ ಹಲವು ನಿಗಮದಲ್ಲಿ ನೇಮಕಾತಿ

Last Updated : Jan 19, 2024, 12:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.