ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸೋಂನಲ್ಲಿ ಇಂದು ಮೊದಲ ಹಂತದ ಮತದಾನ ಆರಂಭವಾಗಿದ್ದು, ದಾಖಲೆಯ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
-
Today, Phase 1 of the West Bengal Assembly elections begin. I would request all those who are voters in the seats polling today to exercise their franchise in record numbers.
— Narendra Modi (@narendramodi) March 27, 2021 " class="align-text-top noRightClick twitterSection" data="
">Today, Phase 1 of the West Bengal Assembly elections begin. I would request all those who are voters in the seats polling today to exercise their franchise in record numbers.
— Narendra Modi (@narendramodi) March 27, 2021Today, Phase 1 of the West Bengal Assembly elections begin. I would request all those who are voters in the seats polling today to exercise their franchise in record numbers.
— Narendra Modi (@narendramodi) March 27, 2021
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳ ಮತ್ತು ಅಸ್ಸೋಂನಲ್ಲಿ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅರ್ಹ ಮತದಾರರು ಮತದಾನ ಮಾಡಬೇಕು. ವಿಶೇಷವಾಗಿ ಯುವ ಜನತೆ ಹೆಚ್ಚಿನ ಆಸಕ್ತಿಯಿಂದ ಮತಗಟ್ಟೆಗೆ ಆಗಮಿಸಿ ಹಕ್ಕನ್ನು ಚಲಾಯಿಸುವಂತೆ ವಿನಂತಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವ 30 ಕ್ಷೇತ್ರಗಳ ಪೈಕಿ 27ರಲ್ಲಿ ಪ್ರಸಕ್ತ ಟಿಎಂಸಿ ಶಾಸಕರಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಇನ್ನೊಂದು ಕ್ಷೇತ್ರದಲ್ಲಿ ಆರ್‌ಎಸ್‌ಪಿ ಶಾಸಕರು ಸ್ಪರ್ಧೆ ನಡೆಸುತ್ತಿದ್ದಾರೆ.
-
The first phase of elections begin in Assam. Urging those eligible to vote in record numbers. I particularly call upon my young friends to vote.
— Narendra Modi (@narendramodi) March 27, 2021 " class="align-text-top noRightClick twitterSection" data="
">The first phase of elections begin in Assam. Urging those eligible to vote in record numbers. I particularly call upon my young friends to vote.
— Narendra Modi (@narendramodi) March 27, 2021The first phase of elections begin in Assam. Urging those eligible to vote in record numbers. I particularly call upon my young friends to vote.
— Narendra Modi (@narendramodi) March 27, 2021
ಓದಿ: ಬಂಗಾಳ ಚುನಾವಣೆ ಆರಂಭ: ಉತ್ಸಾಹದಲ್ಲಿ ಬಿಜೆಪಿ, ಅಧಿಕಾರ ಉಳಿಸಿಕೊಳ್ಳಲು ಟಿಎಂಸಿ ಕಸರತ್ತು
ಅಸ್ಸೋಂನಲ್ಲಿ, ರಾಜ್ಯದ 12 ಜಿಲ್ಲೆಗಳಿಂದ 47 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 47 ಸ್ಥಾನಗಳಿಗೆ ಒಟ್ಟು 264 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಸ್ಸೋಂ ಮತ್ತು ಉತ್ತರ ಅಸ್ಸೋಂ ಪ್ರದೇಶದ 11 ಜಿಲ್ಲೆಗಳಿಂದ 42 ಸ್ಥಾನಗಳು ಮತ್ತು ಕೇಂದ್ರ ಅಸ್ಸೋಂನ ನಾಗಾನ್ ಜಿಲ್ಲೆಯಿಂದ ಐದು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಈ ಪೈಕಿ 37 ಮಂದಿ ಬಿಜೆಪಿ ಶಾಸಕರು, 24 ಜನ ಕಾಂಗ್ರೆಸ್ ಮತ್ತು ಅಸ್ಸಾಂ ಗಣ ಪರಿಷತ್ (ಎಜಿಪಿ)ಯಿಂದ ತಲಾ ಆರು ಮತ್ತು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನಿಂದ ಒಬ್ಬರು ಸೇರಿದಂತೆ ಸ್ಪರ್ಧೆ ನಡೆಸುತ್ತಿದ್ದಾರೆ.