ಗುವಾಹಟಿ(ಅಸ್ಸೋಂ): ಅಸ್ಸೋಂ ಮತ್ತು ತ್ರಿಪುರಾದಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟದ ಪಾಲುದಾರರು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಬಿತ್ರಾ ಮಾರ್ಗರಿಟಾ ಅಸ್ಸೋಂನ ಎರಡು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಗೆದ್ದಿದ್ದಾರೆ.
ಮೈತ್ರಿಕೂಟದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL) ನಾಯಕ ರುಂಗ್ವ್ರಾ ನರ್ಜಾರಿ ದಿಸ್ಪುರದಲ್ಲಿ ಮೇಲ್ಮನೆಯ ಎರಡನೇ ಸ್ಥಾನವನ್ನು ಗೆದ್ದಿದ್ದಾರೆ. ಅದೇ ರೀತಿ ಬಿಜೆಪಿಯ ಡಾ.ಮಾಣಿಕ್ ಸಹಾ ತ್ರಿಪುರಾದಿಂದ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆದ್ದಿದ್ದಾರೆ. ಸಹಾ ಅವರು ಸಿಪಿಐಎಂ ಅಭ್ಯರ್ಥಿ ಭಾನು ಲಾಲ್ ಸಹಾ ಅವರನ್ನು ಸೋಲಿಸಿದರು.
-
Assam has reposed its faith in PM Sri @narendramodi ji by electing two NDA candidates to the Rajya Sabha by huge margins - BJP's Sri Pabitra Margherita (won by 11 votes) & UPPL's Sri Rwngwra Narzary (won by 9 votes).
— Himanta Biswa Sarma (@himantabiswa) March 31, 2022 " class="align-text-top noRightClick twitterSection" data="
My compliments to winners @AmitShah @JPNadda @blsanthosh pic.twitter.com/Lozn8hkNGg
">Assam has reposed its faith in PM Sri @narendramodi ji by electing two NDA candidates to the Rajya Sabha by huge margins - BJP's Sri Pabitra Margherita (won by 11 votes) & UPPL's Sri Rwngwra Narzary (won by 9 votes).
— Himanta Biswa Sarma (@himantabiswa) March 31, 2022
My compliments to winners @AmitShah @JPNadda @blsanthosh pic.twitter.com/Lozn8hkNGgAssam has reposed its faith in PM Sri @narendramodi ji by electing two NDA candidates to the Rajya Sabha by huge margins - BJP's Sri Pabitra Margherita (won by 11 votes) & UPPL's Sri Rwngwra Narzary (won by 9 votes).
— Himanta Biswa Sarma (@himantabiswa) March 31, 2022
My compliments to winners @AmitShah @JPNadda @blsanthosh pic.twitter.com/Lozn8hkNGg
ಕಾಂಗ್ರೆಸ್‌ನ ರಾನೀ ನಾರಾ ಮತ್ತು ರಿಪುನ್ ಬೋರಾ ಅವರ ರಾಜ್ಯಸಭಾ ಅವಧಿ ಏ.2ರಂದು ಮುಗಿಯಲಿದೆ. ಈ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ಬಿಜೆಪಿ ಅಭ್ಯರ್ಥಿ ಪಬಿತ್ರಾ ಮಾರ್ಗರಿಟಾ 46 ಮತಗಳನ್ನು ಪಡೆದ್ರೆ, ಯುಪಿಪಿಎಲ್‌ನ ರ್ವಾಂಗ್ವಾರಾ ನರ್ಜಾರಿ 44 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಓರ್ವ ಅಭ್ಯರ್ಥಿ ರಿಪುನ್ ಬೋರಾ ಮಾತ್ರ 35 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಶಾಸಕ ಸಿದ್ದಿಕ್ ಅಹಮದ್ ಮತಪತ್ರದಲ್ಲಿ 'ಒಂದು' ಎಂದು ಬರೆದಿದ್ದರಿಂದ ಅವರ ಮತ ರದ್ದಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನ ಗಳಿಸಿಕೊಡಲು ನಾಯಕರೆಲ್ಲಾ ಒಗ್ಗಟ್ಟಾಗಿ ಶ್ರಮಿಸಿ : ರಾಹುಲ್ ಗಾಂಧಿ
ಗುರುವಾರ ನಡೆದ ಚುನಾವಣೆಯಲ್ಲಿ ಎರಡು ರಾಜ್ಯಸಭಾ ಸ್ಥಾನಗಳನ್ನು ಬಿಜೆಪಿ ಮತ್ತು ಅದರ ಮೈತ್ರಿ ಪಾಲುದಾರರು ಗೆದ್ದಿದ್ದಾರೆ. ಈ ಫಲಿತಾಂಶದ ನಂತರ ಈಗ ಅಸ್ಸೋಂನ ಮೇಲ್ಮನೆಯಲ್ಲಿ ಕಾಂಗ್ರೆಸ್ ಸಂಸದರೇ ಇಲ್ಲದಂತಾಗಿದೆ. ರಿಪುನ್ ಬೋರಾ ಮತ್ತು ರಾಣಿ ನಾರಾ ಅವರ ಅಧಿಕಾರಾವಧಿಯು ಏಪ್ರಿಲ್ 2ಕ್ಕೆ ಕೊನೆಗೊಳ್ಳಲಿದೆ.
ಅಸ್ಸೋಂನ ಒಟ್ಟು ಏಳು ರಾಜ್ಯಸಭಾ ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಈಗ ಅಸ್ಸೋಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋ ವಾಲ್, ಕಾಮಾಖ್ಯ ಪ್ರಸಾದ್ ತಾಸಾ, ಭುವನೇಶ್ವರ್ ಕಲಿತಾ, ಪಬಿತ್ರಾ ಮಾರ್ಗರಿಟಾ ಹೊಂದಿದ್ದಾರೆ. ಎಲ್ಲಾ ಸ್ಥಾನಗಳನ್ನು ಬಿಜೆಪಿ ನಾಯಕರು ಗೆದ್ದಿದ್ದಾರೆ ಮತ್ತು ಎರಡು ಸ್ಥಾನಗಳನ್ನು ಬಿಜೆಪಿಯ ಮೈತ್ರಿ ಪಾಲುದಾರರಾದ ಎಜಿಪಿಯ ಬೀರೇಂದ್ರ ಪ್ರಸಾದ್ ಬೈಶ್ಯಾ ಮತ್ತು ಯುಪಿಪಿಎಲ್‌ನ ರಂಗವ್ರಾ ನರ್ಜಾರಿ ವಶಪಡಿಸಿಕೊಂಡಿದ್ದಾರೆ. ಒಂದು ಸ್ಥಾನವನ್ನು ಕಾಂಗ್ರೆಸ್ ಮತ್ತು ಎಐಯುಡಿಎಫ್ ಬೆಂಬಲಿಸಿದ ಸ್ವತಂತ್ರ ಅಭ್ಯರ್ಥಿ ಅಜಿತ್ ಕುಮಾರ್ ಭುಯಾನ್ ಹೊಂದಿದ್ದಾರೆ.