ಅಸ್ಸಾಂ: ನಾಗಾಂವ್‌ನ ಬೋರ್ ಲಾಲುಂಗ್ ಪ್ರದೇಶದಲ್ಲಿ ಶನಿವಾರ ಭಯಾನಕ ಘಟನೆ ನಡೆದಿದೆ. ಸಾರ್ವಜನಿಕ ವಿಚಾರಣೆಯ ವೇಳೆ ವ್ಯಕ್ತಿಯೊಬ್ಬನನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಮೃತನನ್ನು ಬೋರ್ ಲಾಲುಂಗ್ ಗಾಂವ್ ನಿವಾಸಿ ರಂಜಿತ್ ಬೊರ್ಡೊಲೊಯ್ ಎಂದು ಗುರುತಿಸಲಾಗಿದೆ.
''ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ರಂಜಿತ್ ಎಂಬಾತ ಕೊಲೆ ಅಪರಾಧಿ ಎಂದು ಸಾಬೀತಾದ ನಂತರ ಜೀವಂತವಾಗಿ ಸುಟ್ಟು ಹಾಕಲಾಗಿದೆ. ಆತ ಸತ್ತ ನಂತರ ಶವವನ್ನು ಹೂಳಲಾಯಿತು ಎಂಬ ಮಾಹಿತಿ ನಮಗೆ ಸಿಕ್ಕಿತು. ಬಳಿಕ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ದೇಹವನ್ನು ಹೊರತೆಗೆದು ವಶಪಡಿಸಿಕೊಳ್ಳಲಾಗಿದೆ. ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ" ಎಂದು ಪೊಲೀಸ್ ಉಪ ಅಧೀಕ್ಷಕ ಎಂ.ದಾಸ್ ಹೇಳಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಿಳೆಯೊಬ್ಬರನ್ನು ರಂಜಿತ್ ಬೊರ್ಡೊಲೊಯ್ ಕೊಲೆ ಮಾಡಿದ್ದಕ್ಕಾಗಿ ಆತನಿಗೆ ಘೋರ ಶಿಕ್ಷೆ ನೀಡಿದ್ದಾರೆ.
ಇದನ್ನೂ ಓದಿ: ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆಗಾಗಿ ವಿಜಯಪುರದಲ್ಲಿ ವಿಚಿತ್ರ ಪದ್ಧತಿ