ETV Bharat / bharat

Assam floods: ರಕ್ಕಸ ಮಳೆಯ ಪ್ರವಾಹದಲ್ಲಿ ಸಿಲುಕಿ ಅಸ್ಸೋಂ ಜನರ ಪರದಾಟ.. 34 ಸಾವಿರ ಜನರಿಗೆ ಸಂಕಷ್ಟ

ಅಸ್ಸಾಂ ರಾಜ್ಯದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ರೆಡ್​ ಅಲರ್ಟ್​ ಘೋಷಣೆಯಾಗಿದೆ.

author img

By

Published : Jun 19, 2023, 7:21 AM IST

Assam floods
ಪ್ರವಾಹದಲ್ಲಿ ಜನರು ಸಿಲುಕಿರುವ ಚಿತ್ರ

ಗುವಾಹಟಿ(ಅಸ್ಸೋಂ) : ಎಡ ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಅಸ್ಸೋಂನಲ್ಲಿ ಪ್ರವಾಹ ಉಂಟಾಗಿದ್ದು, ಈ ಪರಿಸ್ಥಿತಿ ನಿನ್ನೆ ಭಾನುವಾರವು ಮುಂದುವರೆದಿತ್ತು. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದೆಲ್ಲೆಡೆ ಹೊಸ ಪ್ರದೇಶಗಳು ಕೂಡ ಮುಳುಗಡೆಯಾಗಿವೆ.

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ದೈನಂದಿನ ಪ್ರವಾಹ ವರದಿಯ ಪ್ರಕಾರ, ಕ್ಯಾಚಾರ್, ದರ್ರಾಂಗ್, ಧೇಮಾಜಿ, ದಿಬ್ರುಗಢ್, ಗೋಲಾಘಾಟ್, ಹೋಜೈ, ಲಖಿಂಪುರ, ನಾಗಾಂವ್, ನಲ್ಬರಿ, ಸೋನಿತ್‌ಪುರ, ತಿನ್ಸುಕಿಯಾ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ 33,400 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.

ಇನ್ನು ಶನಿವಾರದವರೆಗೆ ಅಸ್ಸಾಂನ ಎಂಟು ಜಿಲ್ಲೆಗಳಲ್ಲಿ 37,500 ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಿಲುಕಿದ್ದರು. ರಾಜ್ಯದಲ್ಲಿ ಲಖಿಂಪುರ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಇಲ್ಲಿ 25,200, ದಿಬ್ರುಗಢ್​ನಲ್ಲಿ 3,800, ಹಾಗೆ ಟಿನ್ಸುಕಿಯಾದಲ್ಲಿ ಸುಮಾರು 2,700 ಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ನೇಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿ, ಎನ್‌ಎಚ್ ರೋಡ್ ಕ್ರಾಸಿಂಗ್‌ನಲ್ಲಿ ಅದರ ಉಪನದಿಗಳಾದ ಪುತಿಮರಿ ಮತ್ತು ಕಂಪುರದ ಕೊಪಿಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ವರದಿ ತಿಳಿಸಿದೆ.

ರಾಜ್ಯ ಆಡಳಿತವು ಮೂರು ಜಿಲ್ಲೆಗಳಲ್ಲಿ 16 ಪರಿಹಾರ ವಿತರಣಾ ಕೇಂದ್ರಗಳ ಜೊತೆಗೆ ಪ್ರಸ್ತುತ ಒಂಬತ್ತು ಜನರು ತಂಗಿರುವ ಒಂದು ಪರಿಹಾರ ಶಿಬಿರವನ್ನು ರಚಿಸಿದ್ದು ಪೀಡಿತ ಜನರನ್ನು ನಿರ್ವಹಿಸುತ್ತಿದೆ. ಪ್ರಸ್ತುತ 142 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸೋಂನಾದ್ಯಂತ 1,510.98 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬಿಸ್ವನಾಥ್, ಬೊಂಗೈಗಾಂವ್, ದಿಬ್ರುಗಢ್, ಕೊಕ್ರಜಾರ್, ಲಖಿಂಪುರ, ಮಜುಲಿ, ಮೋರಿಗಾಂವ್, ನಾಗಾಂವ್, ಶಿವಸಾಗರ್, ಸೋನಿತ್‌ಪುರ, ದಕ್ಷಿಣ ಸಲ್ಮಾರಾ ಮತ್ತು ಉದಲ್‌ಗುರಿ ಜಿಲ್ಲೆಗಳಲ್ಲಿ ಭಾರಿ ಸವೆತ ಸಂಭವಿಸಿದೆ ಎಂದು ASDMA ತಿಳಿಸಿದೆ.

ಭಾರೀ ಮಳೆಯಿಂದಾಗಿ ಭೂಕುಸಿತದ ಘಟನೆಗಳು ದಿಮಾ ಹಸಾವೊ ಮತ್ತು ಕರೀಂಗಂಜ್‌ನಿಂದ ವರದಿಯಾಗಿವೆ. ಜೊತೆಗೆ ಪ್ರವಾಹದ ನೀರಿನಿಂದ ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಜಿಲ್ಲೆಗಳಾದ ಸೋನಿತ್‌ಪುರ್, ಲಖಿಂಪುರ, ಕ್ಯಾಚಾರ್, ಧೇಮಾಜಿ, ಗೋಲ್‌ಪಾರಾ, ನಾಗಾಂವ್, ಉದಲ್‌ಗುರಿ, ಚಿರಾಂಗ್, ದಿಬ್ರುಗಢ, ಕಾಮ್ರೂಪ್, ಕರ್ಬಿ ಆಂಗ್ಲಾಂಗ್, ಕರೀಂಗಂಜ್, ಬೊಂಗೈಗಾಂವ್, ಮಜುಲಿ, ಮೊರಿಗಾಂವ್ ಮತ್ತು ದಕ್ಷಿಣ ಸಲ್ಮಾರಾ, ಶಿವಸಾಗರ್‌ನಲ್ಲಿ ಹಾನಿಗೊಳಗಾಗಿದೆ.

ಭಾರತೀಯ ಹವಾಮಾನ ಇಲಾಖೆ ಭಾನುವಾರ 'ರೆಡ್' ಅಲರ್ಟ್ ನೀಡಿದ್ದು, ಮುಂದಿನ ಐದು ದಿನಗಳಲ್ಲಿ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಗುವಾಹಟಿಯಲ್ಲಿರುವ IMD ಯ ಪ್ರಾದೇಶಿಕ ಹವಾಮಾನ ಕೇಂದ್ರ (RMC) ಭಾನುವಾರದಂದು 'ರೆಡ್' ಅಲರ್ಟ್ ಮತ್ತು ಸೋಮವಾರ ಅಸ್ಸೋಂ ಜಿಲ್ಲೆಗಳಾದ ಕೊಕ್ರಜಾರ್, ಚಿರಾಂಗ್ , ಬಕ್ಸಾ, ಬರ್ಪೇಟಾ ಮತ್ತು ಬೊಂಗೈಗಾಂ ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ 7-11 ಸೆ.ಮೀ, 11-20 ಸೆ.ಮೀ, 20 ಸೆ.ಮೀ ನಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ಅಲ್ಲದೇ, ಧುಬ್ರಿ, ಕಾಮ್ರೂಪ್, ಕಾಮ್ರೂಪ್ ಮೆಟ್ರೋಪಾಲಿಟನ್, ನಲ್ಬರಿ, ದಿಮಾ ಹಸಾವೊ, ಕ್ಯಾಚಾರ್, ಗೋಲ್ಪಾರಾ ಮತ್ತು ಕರೀಮ್‌ಗಂಜ್ ಜಿಲ್ಲೆಗಳಲ್ಲಿಯೂ ಕೂಡ ಮಳೆಯಾಗುವ ಸಾಧ್ಯತೆಯಿದ್ದು, ಪ್ರಾದೇಶಿಕ ಹವಾಮಾನ ಕೇಂದ್ರ ನಾಳೆಯ ಮಂಗಳವಾರಕ್ಕೆ ಆರೆಂಜ್​ ಅಲರ್ಟ್​, ನಂತರದ ದಿನಗಳಿಗೆ 'ಎಲ್ಲೊ' ಅಲರ್ಟ್​, ನೀಡಿದೆ.

ಇದನ್ನೂ ಓದಿ: Odisha Train Accident: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವು... ಮೃತರ ಸಂಖ್ಯೆ 292ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.