ETV Bharat / bharat

ಅಸ್ಸೋಂ ರಣಭೀಕರ ಪ್ರವಾಹಕ್ಕೆ 100 ಮಂದಿ ಬಲಿ: 55 ಲಕ್ಷ ಜನ ನಿರಾಶ್ರಿತ - ಅಸ್ಸೋಂ ಪ್ರವಾಹದಿಂದ 55 ಲಕ್ಷ ಜನ ನಿರಾಶ್ರಿತ

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಅಧಿಕಾರಿಗಳು, ಐದು ಜಿಲ್ಲೆಗಳಲ್ಲಿ 12 ಸಾವುಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಎಎಸ್‌ಡಿಎಂಎ ಅಧಿಕಾರಿಗಳ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದ 83 ಜನರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ ಮತ್ತು 17 ಜನರು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

Assam flood toll rises to 100, over 50 lakh affected
ಅಸ್ಸೋಂ ರಣಭೀಕರ ಪ್ರವಾಹಕ್ಕೆ 100 ಮಂದಿ ಬಲಿ: 55 ಲಕ್ಷ ಜನ ನಿರಾಶ್ರಿತ
author img

By

Published : Jun 23, 2022, 7:49 AM IST

ಗುವಾಹಟಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ನಿತ್ಯವೂ ಗಂಭೀರವಾಗುತ್ತಲೇ ಸಾಗಿದೆ. ಬುಧವಾರ ಪ್ರವಾಹಕ್ಕೆ ನಾಲ್ವರು ಮಕ್ಕಳು ಸೇರಿದಂತೆ ಇನ್ನೂ 12 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಇದುವರೆಗೂ ಮಳೆಯಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 100 ಕ್ಕೆ ತಲುಪಿದೆ. ಅಷ್ಟೇ ಅಲ್ಲ 34 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ 54.57 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Assam flood toll rises to 100, over 50 lakh affected
ಅಸ್ಸೋಂ ರಣಭೀಕರ ಪ್ರವಾಹಕ್ಕೆ 100 ಮಂದಿ ಬಲಿ: 55 ಲಕ್ಷ ಜನ ನಿರಾಶ್ರಿತ

ಶಾಶ್ವತ ಪರಿಹಾರಕ್ಕೆ ಕ್ರಮ- ಸಿಎಂ ಭರವಸೆ: ಪ್ರವಾಹದ ನೀರು ಇಳಿಮುಖವಾದ ನಂತರ, ಪ್ರವಾಹಕ್ಕೆ ಕಾರಣವಾದ ಅಂಶಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದಾರೆ.

ಇನ್ನು ನಾಗಾವ್ ಮತ್ತು ಮೋರಿಗಾಂವ್ ಜಿಲ್ಲೆಗಳ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಕೆಲವು ಸ್ಥಳಗಳಲ್ಲಿ ರೈಲು ಪ್ರಯಾಣ ಮಾಡಿ ಜನರ ಸಂಕಷ್ಟವನ್ನು ಖುದ್ದು ಆಲಿಸಿದರು. ಪ್ರವಾಹ ಪೀಡಿತ ಜನರಿಗೆ ನೆರವು ನೀಡಲು ಸೇನೆ ಮತ್ತು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಗಳು ಹಗಲು-ರಾತ್ರಿ ಕೆಲಸ ಮಾಡುತ್ತಿವೆ.

ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಅಧಿಕಾರಿಗಳು, ಐದು ಜಿಲ್ಲೆಗಳಲ್ಲಿ 12 ಸಾವುಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಎಎಸ್‌ಡಿಎಂಎ ಅಧಿಕಾರಿಗಳ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದ 83 ಜನರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ ಮತ್ತು 17 ಜನರು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಸಂತ್ರಸ್ತರ ಗೋಳು ಕೇಳೋರ್ಯಾರು?: 4,941 ಗ್ರಾಮಗಳ 11,67, 219 ಮಕ್ಕಳು ಸೇರಿದಂತೆ 54,57,601 ಜನರು ಸಂತ್ರಸ್ತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಟ್ಟು 845 ಪರಿಹಾರ ಶಿಬಿರಗಳು ಮತ್ತು 1,026 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 2,71,125 ಮಂದಿ ಪರಿಹಾರ ಶಿಬಿರಗಳಲ್ಲಿ ತಂಗಿದ್ದು, 99,026 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಬ್ರಹ್ಮಪುತ್ರ, ಕೊಪಿಲಿ ಮತ್ತು ದಿಸಾಂಗ್ ಎಂಬ ಮೂರು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ: ಭಾರಿ ಭೂಕುಸಿತದಿಂದ ಕಂಗಾಲಾದ ಕಣಿವೆ ಜನ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.