ಅಸ್ಸೋಂ: ಬಿಜೆಪಿ ನೇತೃತ್ವದ ಸರ್ಕಾರ ಇಂದು 2021 ರಲ್ಲಿ ಜಾನುವಾರು ಸಂರಕ್ಷಣಾ ಮಸೂದೆಯನ್ನು ಶಾಸಕಾಂಗದ ಬಜೆಟ್ ಅಧಿವೇಶನದ ಮೊದಲ ದಿನದಂದು ಮಂಡಿಸಿದೆ. ಇದು ಜಾನುವಾರು ವಧೆ, ಬಳಕೆ, ಜಾನುವಾರುಗಳ ಅಕ್ರಮ ಸಾಗಣೆಯನ್ನು ನಿಯಂತ್ರಿಸುವ ಭಾಗವಾಗಿದೆ.
ಈ ಮಸೂದೆಯಡಿಯಲ್ಲಿ ಉಲ್ಲಂಘನೆ ಮಾಡುವವರಿಗೆ ವಿರುದ್ಧ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ರೂ. 3 ಲಕ್ಷ. ದಂಡ ಹಾಕಲಾಗುತ್ತದೆ. ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಸೂದೆಯನ್ನು ಸದನದ ಮುಂದೆ ಮಂಡಿಸಿದ್ದಾರೆ.
ಅಸ್ಸೋಂನಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಸಾಯಿಖಾನೆ ಮತ್ತು ಅಕ್ರಮ ಸಾಗಣೆಯನ್ನು ನಿಷೇಧಿಸುವ ಶಾಸನವಿಲ್ಲದಿದ್ದರೂ, ರಾಜ್ಯಪಾಲ ಜಗದೀಶ್ ಮುಖಿ ಈ ವರ್ಷದ ಮೇ ತಿಂಗಳಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ತಮ್ಮ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಜಾನುವಾರು ಸಂರಕ್ಷಣಾ ಮಸೂದೆಯನ್ನು ಮಂಡಿಸಲು ಯೋಜಿಸಿದೆ ಎಂದು ಹೇಳಿದ್ದರು.
ಮಸೂದೆಯ ಪ್ರಕಾರ ಬೀಪ್ ಎಂದರೆ ಯಾವುದೇ ರೂಪದಲ್ಲಿ ಹತ್ಯೆಯನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯು ಪ್ರಾಧಿಕಾರದಿಂದ ಅನುಮತಿ ಪಡೆದ ಸ್ಥಳಗಳನ್ನು ಹೊರತುಪಡಿಸಿ, ಯಾವುದೇ ರೂಪದಲ್ಲಿ ಖರೀದಿಸುವ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡಬಾರದು ಅಥವಾ ನೀಡಬಾರದು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.
ಹಿಂದೂ, ಜೈನ, ಸಿಖ್ಖರು ಮತ್ತು ಇತರ ಗೋಮಾಂಸ ರಹಿತ ಸಮುದಾಯಗಳು ಹೆಚ್ಚಾಗಿ ವಾಸಿಸುವ ಅಥವಾ ಯಾವುದೇ ದೇವಾಲಯ, ಸತ್ರ, ಅಥವಾ ಹಿಂದೂ ಧರ್ಮಕ್ಕೆ ಸೇರಿದ ಇತರ ಧಾರ್ಮಿಕ ಸಂಸ್ಥೆಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಅಂತಹ ಪ್ರದೇಶಗಳಲ್ಲಿ ಗೋ ಹತ್ಯೆಗೆ ಯಾವುದೇ ಅನುಮತಿಯನ್ನು ನೀಡಬಾರದು ಎಂದು ತಿಳಿಸಲಾಗಿದೆ.
ಕಾಯಿದೆಯಡಿ ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ ದಂಡದ ಪ್ರಯೋಗವನ್ನು ತಿಳಿಸಲಾಗಿದೆ. ಪ್ರಮುಖ ವಿಷಯ ಎಂದರೆ ರಾಜ್ಯದಲ್ಲಿ ಜಾನುವಾರು ವಧೆಯನ್ನು ಕಠಿಣವಾಗಿ ನಿಷೇಧಿಸಲಾಗಿಲ್ಲ. ಜಾನುವಾರು ಹತ್ಯೆಯನ್ನು ಜಾನುವಾರು ಸಂರಕ್ಷಣಾ ಕಾಯ್ದೆ 1950 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಇಲ್ಲಿಯವರೆಗೆ ಲಭ್ಯವಿರುವ ನಿಯಮಗಳ ಪ್ರಕಾರ, ಜಾನುವಾರುಗಳು 14 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಅಥವಾ ಕೆಲಸಕ್ಕೆ ಬಾರದವಾಗಿರಬೇಕು. ಆದ ಮಾತ್ರ ಅವು ವಧೆ ಮಾಡಲು ಯೋಗ್ಯವಾಗಿದೆ. ಅದಕ್ಕೂ ಮುನ್ನ ಪಶು ವೈದ್ಯರು ಈ ಸಂಬಂಧ ಸರ್ಟಿಫಿಕೇಟ್ ಕೂಡ ನೀಡಬೇಕಾಗುತ್ತದೆ.