ಅಸ್ಸೋಂ,(ನಾಗಾಂವ್) : ವಶಪಡಿಸಿಕೊಳ್ಳಲಾದ ಅಕ್ರಮ ಡ್ರಗ್ಸ್‌ನ ವಿಲೇವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರೋಡ್ ರೋಲರ್ ಓಡಿಸಿದ್ದಾರೆ.
ಲಭ್ಯವಿರುವ ವಿಡಿಯೋದಲ್ಲಿ ರಾಜ್ಯ ಸರ್ಕಾರವು ಪ್ರಾರಂಭಿಸಿದ ಡ್ರಗ್ಸ್ ಮುಕ್ತ ರಾಜ್ಯದ ಅಭಿಯಾನದ ಭಾಗವಾಗಿ ರಸ್ತೆಯಲ್ಲಿ ಹರಡಿದ್ದ ಮಾದಕ ವಸ್ತುಗಳ ಮೇಲೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರೋಡ್ ರೋಲರ್ ಓಡಿಸುತ್ತಿರುವುದನ್ನು ಕಾಣಬಹುದು.
ಅಸ್ಸೋಂ ಅನ್ನು ಡ್ರಗ್ಸ್ ಮುಕ್ತಗೊಳಿಸುವ ಮತ್ತು ಯುವಕರನ್ನು ಮಾದಕ ವಸ್ತುಗಳ ವ್ಯಸನದಿಂದ ರಕ್ಷಿಸುವ ಪ್ರಯತ್ನವಾಗಿ ರಾಜ್ಯ ಸರ್ಕಾರವು ಈ ಉಪಕ್ರಮವನ್ನು ರಾಜ್ಯದ ಅನೇಕ ಭಾಗಗಳಲ್ಲಿ ಜಾರಿಗೆ ತರಲು ಯೋಜಿಸಿದೆ.