ETV Bharat / bharat

ಕಣಿವೆ ರಾಜ್ಯದಲ್ಲಿದೆ ಅತೀ ದೊಡ್ಡ ರೈನ್​ಬೋ ಫಿಶ್​ ಸಾಕಣೆ ಕೇಂದ್ರ.. ಮೀನಿನ ಮೊಟ್ಟೆಗೆ ವಿದೇಶದಲ್ಲೂ ಬೇಡಿಕೆ

ಟ್ರೌಟ್ ಮೀನುಗಳ ಮಾರಾಟದಿಂದಾಗಿ 2020ರಲ್ಲಿ ಇಲಾಖೆ 1.75 ಕೋಟಿ ರೂ. ಆದಾಯ ಗಳಿಸಿದೆ, ಅದೇ ಈ ವರ್ಷ ಅಂದಾಜು 2 ಕೋಟಿ ರೂ. ಆದಾಯ ಬಂದಿದೆ ಎನ್ನುತ್ತಾರೆ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ಮುಜಾಫರ್ ಬಜಾಜ್

ರೈನ್​ಬೋ ಫಿಶ್​ ಸಾಕಣೆ ಕೇಂದ್ರ
ರೈನ್​ಬೋ ಫಿಶ್​ ಸಾಕಣೆ ಕೇಂದ್ರ
author img

By

Published : May 20, 2021, 6:02 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆಗಳ ರಾಜ್ಯದಲ್ಲಿ ಹರಿಯುವ ಹತ್ತಾರು ನದಿಗಳು ವೈವಿದ್ಯಮಯ ಜೀವಸಂಕುಲದ ಆವಾಸ ಸ್ಥಾನವಾಗಿದೆ. ಇಲ್ಲಿ ಗಾಜಿನಂತೆ ಹೊಳೆಯುವ ಪರಿಶುದ್ಧ ನೀರು ಹರಿಯುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಹಲವು ನದಿಗಳಲ್ಲಿ ವಿಶಿಷ್ಟ ಪ್ರಭೇದದ ಮೀನುಗಳು ಕಂಡು ಬರುತ್ತವೆ. ದೇಶದ ಬೇರೆ ಯಾವುದೇ ಭಾಗದಲ್ಲಿ ಕಂಡು ಬರದ ಮೀನುಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ. ಇದಕ್ಕೆ ಬಹುಮುಖ್ಯ ಕಾರಣ ಈ ಮೀನುಗಳ ಸಂತಾನೋತ್ಪತ್ತಿಗೆ ಬೇಕಾದ ವಿಶಿಷ್ಟ ಹವಮಾನ ಇಲ್ಲಿ ಅಡಗಿದೆ.

ಈ ವಿಶಿಷ್ಟ ಮೀನುಗಳ ಪೈಕಿ ರೈನ್​​ಬೋ ಟ್ರೌಟ್​ ಜಾತಿಯ ಮೀನು ಹೆಚ್ಚಾಗಿ ಕಂಡು ಬರುತ್ತದೆ. ವಿಶೇಷ ಅಂದ್ರೆ ಈ ಮೀನುಗಳು ವಿಭಿನ್ನ ಮಾದರಿಯ ಪರಿಮಳ ಹೊರ ಸೂಸುತ್ತವೆ. 1889ರಲ್ಲಿ ಬ್ರಿಟಿಷ್ ನಿವಾಸಿ ಫ್ರಾಂಕ್ ಜಾನ್​ ಮಿಚೆಲ್​​ ಮೊದಲ ಬಾರಿಗೆ ಈ ಮೀನಿಗೆ ಟ್ರೌಟ್ ಫಿಶ್ ಎಂದು ಹೆಸರಿಸಿದ್ದ ಎನ್ನಲಾಗುತ್ತದೆ. ಇದಲ್ಲದೇ ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಟ್ರೌಟ್ ಫಿಶ್ ಸಾಕಣೆ ಕೇಂದ್ರವಿದೆ. ಸುಮಾರು 38 ಎಕರೆ ಪ್ರದೇಶ ವಿಸ್ತಾರವಾಗಿರುವ ಈ ಸಾಕಣೆ ಕೇಂದ್ರದಲ್ಲಿ ಲಕ್ಷಾಂತರ ಮೀನುಗಳು ಬೆಳೆಯುತ್ತಿವೆ.

ಕಣಿವೆ ರಾಜ್ಯದಲ್ಲಿದೆ ಅತೀ ದೊಡ್ಡ ರೈನ್​ಬೋ ಫಿಶ್​ ಸಾಕಣೆ ಕೇಂದ್ರ

ಈ ಸಂತಾನೋತ್ಪತ್ತಿ ಕೇಂದ್ರವನ್ನು ಯುರೋಪಿಯನ್ ಕಂಪನಿಯ ಸಹಯೋಗದೊಂದಿಗೆ 1984ರಲ್ಲಿ ಸ್ಥಾಪಿಸಲಾಯಿತು. ಇದನ್ನು ಈಗ ಏಷ್ಯಾದ ಅತಿದೊಡ್ಡ ಟ್ರೌಟ್ ಮೀನು ಫಾರ್ಮ್ ಎಂದು ಪರಿಗಣಿಸಲಾಗಿದೆ.

ಟ್ರೌಟ್ ಮೀನುಗಳ ಮಾರಾಟದಿಂದಾಗಿ 2020ರಲ್ಲಿ ಇಲಾಖೆ 1.75 ಕೋಟಿ ರೂ. ಆದಾಯ ಗಳಿಸಿದೆ, ಅದೇ ಈ ವರ್ಷ ಅಂದಾಜು 2 ಕೋಟಿ ರೂ. ಆದಾಯ ಬಂದಿದೆ ಎಂದು ಮೊಹಮ್ಮದ್ ಮುಜಾಫರ್ ಬಜಾಜ್ ಹೇಳುತ್ತಾರೆ.

ಇದಿಷ್ಟೇ ಅಲ್ಲ ಪ್ರತಿ ವರ್ಷ 18 ರಿಂದ 20 ಮಂದಿಗೆ ಟ್ರೌಟ್ ಮೀನುಗಳ ಸಂತಾನೋತ್ಪತ್ತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ಇಲಾಖೆ 6 ತಿಂಗಳ ತರಬೇತಿ ಕೋರ್ಸ್ ನಡೆಸುತ್ತಿದೆ. ಅಲ್ಲದೇ ಕಾಶ್ಮೀರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಯೋಜನೆ ಮುಂದುವರಿಸಲು ಈ ಕೇಂದ್ರದಲ್ಲಿ ಅಧ್ಯಯನ ನಡೆಸುತ್ತಾರೆ.

ಈ ಮೀನು ಸಾಕಣೆ ಕೇಂದ್ರದಿಂದ ಮೊಟ್ಟೆಗಳನ್ನು ದೇಶದ ನಾನಾ ಭಾಗಗಳೂ ಸೇರಿ, ವಿದೇಶಕ್ಕೂ ರಫ್ತು ಮಾಡಲಾಗುತ್ತದೆ. ಈ ವರ್ಷವಷ್ಟೇ ಸುಮಾರು 7 ಲಕ್ಷ ಮೊಟ್ಟೆಗಳನ್ನು ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ್ ಮತ್ತು ಭೂತಾನ್​​ಗೆ ರಫ್ತು ಮಾಡಲಾಗಿದೆ. ಇದರಿಂದ ಮೀನುಗಾರಿಕೆ ಇಲಾಖೆಗೆ 1.4 ಕೋಟಿ ರೂ. ಆದಾಯ ಬಂದಂತಾಗಿದೆ. ಅಲ್ಲದೇ ಕಾಶ್ಮೀರ ಒಂದರಲ್ಲೇ 37ಕ್ಕೂ ಹೆಚ್ಚು ಈ ಟ್ರೌಟ್ ಫಿಶ್​ಗಳ ಸಾಕಾಣಿಕಾ ಕೇಂದ್ರಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.