ETV Bharat / bharat

ಜ್ಞಾನವಾಪಿ ಮಸೀದಿ ವಿವಾದ: ಸಮೀಕ್ಷೆ ಅವಧಿ ಕಡಿತಗೊಳಿಸಿ ವರದಿ ಸಿದ್ಧತೆಯಲ್ಲಿ ಎಎಸ್​ಐ ತಂಡ - ವಾರಣಾಸಿ

ಹೈಕೋರ್ಟ್ ಆದೇಶದ ನಂತರ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸುತ್ತಿದ್ದ ಎಎಸ್​ಐ ತಂಡ ತಮ್ಮ ಸಮೀಕ್ಷೆಯ ಸಮಯವನ್ನು ಕಡಿತಗೊಳಿಸಿ ಸಾಕ್ಷ್ಯಗಳನ್ನು ಒಳಗೊಂಡ ವರದಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.

ಜ್ಞಾನವಾಪಿ ವಿವಾದ
ಜ್ಞಾನವಾಪಿ ವಿವಾದ
author img

By ETV Bharat Karnataka Team

Published : Oct 19, 2023, 5:53 PM IST

ವಾರಣಾಸಿ (ಉತ್ತರಪ್ರದೇಶ): ಇಲ್ಲಿನ ಹೈಕೋರ್ಟ್ ಆದೇಶದ ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಕ್ಯಾಂಪಸ್‌ನ ಸಮೀಕ್ಷಾ ಕಾರ್ಯ ಆಗಸ್ಟ್ 4ರಿಂದ ಪ್ರಾರಂಭವಾಗಿತ್ತು. ಇದೀಗ ಸಮೀಕ್ಷೆ ನಡೆಸುತ್ತಿದ್ದ ಎಎಸ್​ಐ (ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ) ತಂಡ ವರದಿ ಸಿದ್ಧತೆಗಾಗಿ ತಮ್ಮ ಸರ್ವೆ ಕಾರ್ಯದ ಸಮಯವನ್ನು ಕಡಿತಗೊಳಿಸಿದೆ.

ಜ್ಞಾನವಾಪಿ ಹಿಂದೂ ಮಂದಿರವೋ, ಮಸೀದಿಯೋ ಎಂಬ ವಿವಾದಕ್ಕೆ ಸಂಬಂಧಪಟ್ಟಂತೆ ಜುಲೈ 21ರಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್‌ಕೃಷ್ಣ ವಿಶ್ವೇಶ್‌ ಅವರು, ಜ್ಞಾನವಾಪಿ ಆವರಣದ ಸಮೀಕ್ಷೆಗೆ ಆದೇಶಿಸಿದ್ದರು. ಈ ಆದೇಶದಂತೆ ಜುಲೈ 24ರಿಂದ ಸಮೀಕ್ಷೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಮೊದಲ ದಿನ ಸಮೀಕ್ಷೆಯನ್ನು ತಜ್ಞರ ತಂಡವು ಮಧ್ಯಾಹ್ನ 12.00 ರಿಂದ 3.00ರ ವರೆಗೆ ನಡೆಸಿತ್ತು. ಇದಾದ ಬಳಿಕ ಸಮೀಕ್ಷಾ ಕಾರ್ಯ ಸ್ಥಗಿತಗೊಳಿಸಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ, ಆಗಸ್ಟ್ 4ರಿಂದ ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಮತ್ತೆ ಸರ್ವೆ ಕಾರ್ಯ ಪ್ರಾರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಸಮೀಕ್ಷೆ ಸಮಯ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆದಿತ್ತು. ಆದರೆ ಇದೀಗ ಭಾರತೀಯ ಪುರಾತತ್ವ ಇಲಾಖೆಯ ತಂಡ ವರದಿ ಸಿದ್ಧಪಡಿಸುವಲ್ಲಿ ನಿರತವಾಗಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಸರ್ವೆ ಕಾರ್ಯದ ವರದಿಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಇಂದಿನಿಂದ ಎಎಸ್​ಐ ತಂಡ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಸಮೀಕ್ಷೆ ನಡೆಸಬೇಕಿದೆ.

ಇದರ ಮಧ್ಯೆ ಎಎಸ್‌ಐ ಟೀಂ ಸರ್ವೆಗಾಗಿ ನೀಡುವ ಅವಧಿಯನ್ನು ವಿಸ್ತರಿಸಲು ನ್ಯಾಯಲಯದ ಬಳಿ 2 ಬಾರಿ ಕಾಲಾವಕಾಶಕ್ಕಾಗಿ ಹರಸಾಹಸಪಟ್ಟಿದೆ. ನ್ಯಾಯಾಲಯವು ಮೊದಲ ಬಾರಿಗೆ 8 ವಾರಗಳ ಸಮಯ ಕೇಳಿದಾಗ 4 ವಾರಗಳ ಸಮಯ ನೀಡಿತ್ತು. ಅಕ್ಟೋಬರ್ 6ರಂದು ವರದಿ ಸಲ್ಲಿಸುವಂತೆ ತಂಡವನ್ನು ಕೇಳಿತ್ತು. ಆದರೆ ಎಎಸ್‌ಐ ಮತ್ತೆ 4 ವಾರಗಳ ಅವಧಿ ಕೇಳಿದ್ದು ಇದೀಗ ಅಂತಿಮ ಹಂತ ತಲುಪಿದೆ. ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ನಿರ್ವಹಿಸುತ್ತಿದ್ದ ಸಮಯವನ್ನು ಕಡಿತಗೊಳಿಸಿ ಸಿಕ್ಕ ಅಂಶಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಲಿದೆ.

ಜ್ಞಾನವಾಪಿ ವಿವಾದವೇನು?: 17ನೇ ಶತಮಾನದ ಜ್ಞಾನವಾಪಿ ಮಸೀದಿಯನ್ನು ಈ ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ಪತ್ತೆ ಹಚ್ಚಲು ಹಿಂದೂ ಪರ ಸಂಘಟನೆಗಳು ಭಾರತೀಯ ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿದ್ದವು. ಅದರಂತೆ ಸಮೀಕ್ಷೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೇ ಕಾರ್ಯ ಬಾಕಿ.. 8 ವಾರ ಹೆಚ್ಚುವರಿ ಸಮಯ ಕೋರಿದ ಎಎಸ್​ಐ, ಸೆಪ್ಟೆಂಬರ್​ 8 ರಂದು ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.