ETV Bharat / bharat

ಅಸಾನಿ ಚಂಡಮಾರುತಕ್ಕೆ ಕರಾವಳಿ ಆಂಧ್ರ ತತ್ತರ; ಭಾರಿ ಮಳೆಗೆ ಭೂಕುಸಿತ, ಕೊಚ್ಚಿ ಹೋದ ರಸ್ತೆ - ಕರಾವಳಿ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ಅಸನಿ ಚಂಡಮಾರುತ

ಅಸಾನಿ ಚಂಡಮಾರುತದಿಂದಾಗಿ ಕರಾವಳಿ ಆಂಧ್ರಪ್ರದೇಶ ತತ್ತರಿಸಿದೆ. ಜಡಿ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಮತ್ತು ಸೇತುವೆ ಕುಸಿದು ಬಿದ್ದಿದೆ. ಸಮುದ್ರದಲೆಗಳ ಹೊಡೆತಕ್ಕೆ ರಸ್ತಯೊಂದಕ್ಕೆ ತೀವ್ರ ಹಾನಿಯಾಗಿದೆ.

Asani makes landfall in coastal Andhra Pradesh, Cyclonic storm Asani made landfall in Andhra Pradesh, Asani Cyclone hit coastal Andhra Pradesh, Andhra Pradesh rain news, ಅಸಾನಿ ಚಂಡಮಾರುತದಿಂದ ಆಂಧ್ರಪ್ರದೇಶದ ಕರಾವಳಿಯಲ್ಲಿ ಭೂಕುಸಿತ, ಕರಾವಳಿ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ಅಸನಿ ಚಂಡಮಾರುತ, ಆಂಧ್ರಪ್ರದೇಶ ಮಳೆ ಸುದ್ದಿ,
ಅಸನಿ ಚಂಡಮಾರುತಕ್ಕೆ ಕರವಾಳಿ ಆಂಧ್ರ ತತ್ತರ
author img

By

Published : May 12, 2022, 9:53 AM IST

Updated : May 12, 2022, 10:02 AM IST

ಅಮರಾವತಿ: ತಡರಾತ್ರಿ ಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ನರಸಪುರಂ ಜಿಲ್ಲೆಗಳಲ್ಲಿ ಅಸಾನಿ ಚಂಡಮಾರುತದ ಪರಿಣಾಮ ಭೂಕುಸಿತದಂಥ ಘಟನೆಗಳು ಸಂಭವಿಸಿವೆ. ಈ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಯಿಂದಾಗಿ ರೈತರಿಗೆ ಬೆಳೆ ನಷ್ಟ ಉಂಟಾಗಿದೆ. ಚಂಡಮಾರುತವು ಸದ್ಯ ದುರ್ಬಲಗೊಂಡಿದ್ದು, ಯಾನಂ-ಕಾಕಿನಾಡ ಪ್ರದೇಶದ ಮೇಲೆ ಹಾದು ಹೋಗಲಿದೆ ಎಂದು ಎಸ್‌ಡಿಎಂಎ ನಿರ್ದೇಶಕ ಬಿ.ಆರ್.ಅಂಬೇಡ್ಕರ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶದ ಕರಾವಳಿ ಪ್ರದೇಶಕ್ಕೆ ಹಾನಿಯಾಗಿದೆ. ಬುಧವಾರ ಬೆಳಗ್ಗೆ ಕಾಕಿನಾಡ ಜಿಲ್ಲೆಗೆ ಅಪ್ಪಳಿಸಿದ ಅಸಾನಿ ಹಲವೆಡೆ ಭಾರಿ ಮಳೆ ಸುರಿಸಿದೆ. ಇದೀಗ ದುರ್ಬಲಗೊಂಡಿರುವ ಚಂಡಮಾರುತ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: ಅಸನಿ ಚಂಡಮಾರುತ: ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ಬಣ್ಣದ ರಥ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಜನರು ಜಾಗರೂಕರಾಗಿರಬೇಕು. ಮೀನುಗಾರರು ಸಮುದ್ರಕ್ಕಿಳಿಯಬಾರದು. ನಿನ್ನೆ ಸಂಜೆ ಅಸಾನಿ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂ ಕರಾವಳಿಯಿಂದ ಸುಮಾರು 20-30 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು ಎಂದು ಅಂಬೇಡ್ಕರ್ ಹೇಳಿದರು.

Last Updated : May 12, 2022, 10:02 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.