ಹೈದರಾಬಾದ್: ದೇಶಾದ್ಯಂತ ಇಂದಿನಿಂದ ಎರಡನೇ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಇದೀಗ ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ.
ಜರ್ಮನಿ ಸರ್ಕಾರದ ಪ್ರಕಾರ ಸೆರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್ 64 ಮತ್ತು ಅದಕ್ಕಿಂತಲೂ ಹೆಚ್ಚಿನ ವಯಸ್ಸಿನವರಿಗೆ ಪರಿಣಾಮಕಾರಿಯಾಗಿಲ್ಲ. ಕೇವಲ 18 ರಿಂದ 64 ವಯಸ್ಸಿನ ಜನರಿಗೆ ಮಾತ್ರ ಪರಿಣಾಮಕಾರಿ ಎಂಬ ವರದಿ ಬಿತ್ತರಿಸಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿರುವುದು ಕೂಡ ಕಾಕತಾಳೀಯ ಎಂದಿದ್ದಾರೆ. ಇದೇ ವೇಳೆ ಲಸಿಕೆ ಪಡೆದುಕೊಳ್ಳುವಂತೆ ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರ ಬದ್ಧತೆಯಿಂದ 'ಪ್ರೇರಿತ' ಎಂದ ಭಾರತ್ ಬಯೋಟೆಕ್
ದೇಶದ ಪ್ರತಿಯೊಬ್ಬರು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನನಗೆ ಒಂದು ಪ್ರಶ್ನೆ ಇದೆ. ಜರ್ಮನಿ ಸರ್ಕಾರ ಕೂಡ ಕೋವಿಶೀಲ್ಡ್ ಬಗ್ಗೆ ಪ್ರಶ್ನೆ ಮಾಡಿದ್ದು, ಇದು ಕೇವಲ 18ರಿಂದ 64 ವರ್ಷದೊಳಗಿನವರಿಗೆ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದಿದೆ. ಇಂದು ಪ್ರಧಾನಿ ಮೋದಿ ಕೂಡ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದಾರೆ ಎಂದಿದ್ದಾರೆ.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಭಾರತದಲ್ಲಿ ತುರ್ತು ಬಳಕೆ ಮಾಡಲು ಈಗಾಗಲೇ ಡಿಜಿಸಿಐನಿಂದ ಅನುಮೋದನೆ ಸಿಕ್ಕಿದ್ದು, ಅನೇಕರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ.