ETV Bharat / bharat

ಕೋವಿಡ್​ ಇಳಿಮುಖ: 2 ತಿಂಗಳ ನಂತರ ಪ್ರವಾಸಿಗರಿಗೆ ಒಲಿದು ಬಂತು 'ತಾಜ್​ಮಹಲ್'​ ದರ್ಶನ ಭಾಗ್ಯ ..

ಭಾರತದ ಪುರಾತತ್ವ ಇಲಾಖೆ ಜೂನ್ 16 ರಿಂದ ಸ್ಮಾರಕಗಳನ್ನು ಪುನಃ ತೆರೆಯುವುದಾಗಿ ಸುತ್ತೋಲೆಯಲ್ಲಿ ಪ್ರಕಟಿಸಿದೆ. ಆಗ್ರಾದ ಪ್ರವಾಸೋದ್ಯಮ ಉದ್ಯಮದ ಮಾಲೀಕರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಹಾಗೆಯೇ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವಂತೆ ಕೋರಿದ್ದಾರೆ.

Taj Mahal
ತಾಜ್​ಮಹಲ್
author img

By

Published : Jun 15, 2021, 10:55 PM IST

ಆಗ್ರಾ/ನವದೆಹಲಿ: ಎರಡು ತಿಂಗಳ ಹಿಂದೆ ದೇಶಾದ್ಯಂತ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕಂಡು ಬಂದ ಹಿನ್ನೆಲೆ ತಾಜ್ ಮಹಲ್​ ಮತ್ತು ಇತರ ಸ್ಮಾರಕಗಳನ್ನು ಮುಚ್ಚಲಾಗಿತ್ತು. ಇದೀಗ ಪ್ರಕರಣಗಳಲ್ಲಿ ಕೊಂಚ ಮಟ್ಟಿಗೆ ಕುಸಿತ ಕಂಡು ಬಂದಿರುವುದರಿಂದ ದೇಶೀಯ ಪ್ರವಾಸಿಗರನ್ನು ಸ್ವಾಗತಿಸಲು ಜಿಲ್ಲಾಧಿಕಾರಿಗಳು ಸಜ್ಜಾಗಿದ್ದಾರೆ.

ಭಾರತದ ಪುರಾತತ್ವ ಇಲಾಖೆ ಜೂನ್ 16 ರಿಂದ ಸ್ಮಾರಕಗಳನ್ನು ಪುನಃ ತೆರೆಯುವುದಾಗಿ ಸುತ್ತೋಲೆಯಲ್ಲಿ ಪ್ರಕಟಿಸಿದೆ. ಆಗ್ರಾದ ಪ್ರವಾಸೋದ್ಯಮ ಉದ್ಯಮದ ಮಾಲೀಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವಂತೆ ಕೋರಿದ್ದಾರೆ. ಮುಖ್ಯವಾಗಿ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುವಂತೆ ಹೋಟೆಲ್​ ಮಾಲೀಕರು ವಿಶೇಷ ಪ್ಯಾಕೇಜ್ ಸಹ ಕೋರಿದ್ದಾರೆ.

ಕೊರೊನಾ ಪ್ರಕರಣಗಳ ಏರಿಕೆಯಿಂದಾಗಿ ಆಗ್ರಾದಲ್ಲಿನ ಹೋಟೆಲ್‌ಗಳನ್ನು ಮಾರ್ಚ್ 2020 ರಿಂದ ಮುಚ್ಚಲಾಗಿತ್ತು. ಸಾಂಕ್ರಾಮಿಕವು ಪ್ರವಾಸಿಗರ ಆತಿಥ್ಯ ಮತ್ತು ಪ್ರವಾಸೋದ್ಯಮ ವಾಸ್ತವಿಕವಾಗಿ ಕುಂಠಿತಗೊಳಿಸಿದೆ. ಸ್ಮಾರಕಗಳನ್ನು ಪುನಃ ತೆರೆಯುವುದು ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಹುದಾದರೂ, ಅಂತಾರಾಷ್ಟ್ರೀಯ ವಿಮಾನಯಾನಗಳು ಪುನಾರಂಭಗೊಳ್ಳುವವರೆಗೂ, ಯಾವುದೇ ಸಕಾರಾತ್ಮಕ ತಿರುವು ಸಿಗುವುದಿಲ್ಲ ಎಂದು ಹೋಟೆಲ್‌ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.

ಸ್ಮಾರಕಗಳಿಗೆ ಭೇಟಿ ನೀಡುವವರಿಗೆ ಪ್ರವೇಶಕ್ಕೆ ಅನುಮತಿ ನೀಡುವ ಮೊದಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಜನಸಂದಣಿ ಇರದಂತೆ ನೋಡಿಕೊಳ್ಳಲಾಗುವುದು. ಆರಂಭದಲ್ಲಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ. 17ನೇ ಶತಮಾನದಲ್ಲಿ ನಿರ್ಮಾಣವಾದ ಸ್ಮಾರಕ ತಾಜ್​ಮಹಲ್​​ ಸಾಂಕ್ರಾಮಿಕ ರೋಗದ ಮೊದಲು ವಾರ್ಷಿಕವಾಗಿ ಏಳು ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು ಎಂಬುದು ತಿಳಿದುಬಂದಿದೆ.

ಓದಿ: ಗಲ್ವಾನ್ ಘರ್ಷಣೆಯ ಬಳಿಕ ಎಚ್ಚೆತ್ತ ಭಾರತ: ಚೀನಾದೊಂದಿಗೆ ಎಚ್ಚರಿಕೆಯ ಆರ್ಥಿಕ ಹೆಜ್ಜೆ ಇಟ್ಟ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.