ETV Bharat / bharat

ನಿಧಾನಗತಿಯಲ್ಲಿ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಆರ್ಯನ್ ಖಾನ್ - ಶಾರುಖ್​ ಖಾನ್ ಮಗ

ದಿನಗಳೆದಂತೆ ಶಾರುಖ್​ ಪುತ್ರ ಆರ್ಯನ್​ ಖಾನ್​ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಜತೆಗೆ ಇತರೆ ಕೈದಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ..

ಆರ್ಯನ್ ಖಾನ್
ಆರ್ಯನ್ ಖಾನ
author img

By

Published : Oct 23, 2021, 3:17 PM IST

ಮುಂಬೈ : ಕಳೆದ 19 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್​ ಖಾನ್ ಪುತ್ರ ಆರ್ಯನ್​ಖಾನ್ ನಿಧಾನವಾಗಿ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರು.

ಆದರೆ, ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿದಾಗ ಮತ್ತೆ ನಿರಾಶೆಕೊಂಡಿದ್ದರು. ಇದೀಗ ಅವರು ಇತರೆ ಕೈದಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಜೈಲಿನ ಆವರಣದಲ್ಲಿರುವ ದೇವಸ್ಥಾನದಲ್ಲಿ ಸಂಜೆ 7 ಗಂಟೆಗೆ ಆರತಿ ನಡೆಸಲಾಗುತ್ತದೆ.

ಮೂಲಗಳ ಪ್ರಕಾರ, ಅವರು ಆರತಿ ಮುಗಿಯುವವರೆಗೆ ದೇವಸ್ಥಾನದಲ್ಲಿಯೇ ಇದ್ದು, ಜೈಲಿನ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಈ ಮಧ್ಯೆ ಅವರು ಧಾರ್ಮಿಕ ಗ್ರಂಥಗಳನ್ನು ನೀಡಬೇಕೆಂದು ಜೈಲಾಡಳಿತಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಆರ್ಯನ್​ ಖಾನ್​​, ನಾಲ್ಕು ದಿನಗಳ ಕಾಲ ಸ್ನಾನ ಮಾಡಲಿಲ್ಲ, ಊಟವೂ ತಿಂದಿರಲಿಲ್ಲ. ಆರ್ಯನ್​ ಮನೆಯಿಂದಲೇ ಎರಡು ಬೆಡ್​ಶೀಟ್​ ಮತ್ತು ಕೆಲ ಬಟ್ಟೆಗಳನ್ನು ಕಳುಹಿಸಲಾಗಿದೆ.

ಆದರೂ, ಅಧಿಕಾರಿಗಳು ಅವನಿಗೆ ಜೈಲಿನ ಕಂಬಳಿ ನೀಡಿದ್ದರು. ಇಂದು ಮುಂಜಾನೆ ಕಾನ್ಸ್​ಟೇಬಲ್​​ ಆರ್ಯನ್​ಗೆ ಬಿಸ್ಕೆಟ್​ ನೀಡಿದ್ದರು ಎಂದು ತಿಳಿದು ಬಂದಿದೆ. ಆರ್ಯನ್, ಜೈಲು ಸೇರುವ ಮುನ್ನ ಡಜನ್‌ಗಟ್ಟಲೇ ವಾಟರ್ ಬಾಟಲ್ ಖರೀದಿಸಿದ್ದರು.

ಸದ್ಯ ಆತನ ಬಳಿ ಮೂರು ನೀರಿನ ಬಾಟಲ್​ ಮಾತ್ರ ಉಳಿದಿವೆ. ಅಕ್ಟೋಬರ್​​ 26ರಂದು ಬಾಂಬೆ ಹೈಕೋರ್ಟ್​​ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ಧಾರ್ಮಿಕ ಪುಸ್ತಕ ನೀಡುವಂತೆ ಜೈಲಾಧಿಕಾರಿಗಳಿಗೆ ನಟ ಶಾರುಕ್‌ ಪುತ್ರ ಆರ್ಯನ್‌ ಖಾನ್‌ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.