ETV Bharat / bharat

ಎನ್​ಸಿಬಿ ಅಧಿಕಾರಿಗಳ ಮುಂದೆ ಹಾಜರಾದ ಶಾರುಖ್​ ಪುತ್ರ ಆರ್ಯನ್​ - ಡ್ರಗ್ಸ್​ ಪ್ರಕರಣ

ಪ್ರತಿ ಶುಕ್ರವಾರ ಎನ್​ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು. ವಿದೇಶಕ್ಕೆ ಹೋಗುವಂತಿಲ್ಲ. ಅಧಿಕಾರಿಗಳಿಗೆ ಪಾಸ್​ಪೋರ್ಟ್​ ಅನ್ನು ವಶಕ್ಕೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್​ ಸೂಚಿಸಿತ್ತು.

aryan khan
ಶಾರೂಕ್ ಪುತ್ರ ಆರ್ಯನ್​
author img

By

Published : Nov 5, 2021, 3:38 PM IST

ಮುಂಬೈ: ಡ್ರಗ್ಸ್​ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದಿರುವ ಬಾಲಿವುಡ್​ ನಟ ಶಾರುಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಶುಕ್ರವಾರ ಎನ್​ಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಮಾದಕ ವಸ್ತು ಸೇವನೆ ಆರೋಪದ ಮೇಲೆ ಶಾರುಕ್​ ಪುತ್ರನನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರ್ಯನ್​ ಜೈಲು ಪಾಲಾಗಿದ್ದರು. ಬಳಿಕ, ಅಕ್ಟೋಬರ್​ 29ರಂದು ಬಾಂಬೆ ಹೈಕೋರ್ಟ್​ನಿಂದ ಜಾಮೀನು ಮಂಜೂರಾಗಿತ್ತು.

ಈ ವೇಳೆ ಪ್ರತಿ ಶುಕ್ರವಾರ ಎನ್​ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಬೇಕು. ವಿದೇಶಕ್ಕೆ ಹೋಗುವಂತಿಲ್ಲ. ಅಧಿಕಾರಿಗಳಿಗೆ ತಮ್ಮ ಪಾಸ್​ಪೋರ್ಟ್​ ಅನ್ನು ವಶಕ್ಕೆ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಇದರಂತೆ ಆರ್ಯನ್​ ಖಾನ್​ ಬಾಂಬೆ ಎನ್​ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಆರ್ಯನ್​ ಜತೆ ಇನ್ನಿಬ್ಬರು ಆರೋಪಿಗಳಾದ ಅರ್ಬಾಜ್​ ಮರ್ಚೆಂಟ್​, ಮುನ್ಮುಮ್ ಧಮೇಚಾ ಕೂಡ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.