ಅಹಮದಾಬಾದ್(ಗುಜರಾತ್): ಮಾಜಿ ಸಂಸದ, ಖ್ಯಾತ ನಟ, ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ರಾಮಾಯಣದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ (83) ಮಂಗಳವಾರ ರಾತ್ರಿ 11 ಗಂಟೆಗೆ ನಿಧನ ಹೊಂದಿದರು.
ಗುಜರಾತಿ ಸಿನಿಮಾದ ಭೀಷ್ಮ ಎಂದೇ ಪ್ರಖ್ಯಾತರಾಗಿದ್ದ ಅವರು, ಸಬರ್ಕಂಟಾ ಕ್ಷೇತ್ರದ ಸಂಸದರಾಗಿ 1991ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೃತಪಟ್ಟಿದ್ದಾರೆ.
ಗುಜರಾತಿ ರಂಗಭೂಮಿಯಿಂದ ಆರಂಭವಾದ ಅವರ ವೃತ್ತಿಪರ ಬದುಕು ಸುಮಾರು 300 ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಅಭಿನಯಿಸುವಂತೆ ಮಾಡಿತ್ತು. ಸುಮಾರು 40 ವರ್ಷಗಳ ಕಾಲ ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಗುಜರಾತ್ ಸರ್ಕಾರ ನೀಡುವ ಹಲವಾರು ಪ್ರಶಸ್ತಿಗಳು ಅರವಿಂದ ತ್ರಿವೇದಿ ಅವರ ಸಾಧನೆಗೆ ಸಂದಿವೆ. ತ್ರಿವೇದಿ ಕೊನೆಯುಸಿರೆಳೆದ ಸುದ್ದಿ ತಿಳಿದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸಂಚಲನ ಸೃಷ್ಟಿಸಿದ ಉಗ್ರರ ದಾಳಿ: ಪ್ರಸಿದ್ಧ ಕೆಮಿಸ್ಟ್ ಸೇರಿ ಮೂವರ ಸಾವು
ಮೋದಿ ಸಂತಾಪ
ಕಳೆದ ಕೆಲವು ದಿನಗಳಲ್ಲಿ, ನಾವು ತಮ್ಮ ಕೆಲಸಗಳ ಮೂಲಕ ಜನರ ಹೃದಯ ಗೆದ್ದ ಇಬ್ಬರು ಪ್ರತಿಭಾವಂತ ನಟರನ್ನು ಕಳೆದುಕೊಂಡಿದ್ದೇವೆ. ಘನಶ್ಯಾಮ್ ನಾಯಕ್ ಅವರ ಬಹುಮುಖಿ ಪಾತ್ರಗಳಿಗಾಗಿ ಹೆಸರುವಾಸಿಯಾಗಿದ್ದು, ವಿನಮ್ರ ಮನೋಭಾವದವರಾಗಿದ್ದರು ಎಂದಿದ್ದಾರೆ.
-
We have lost Shri Arvind Trivedi, who was not only an exceptional actor but also was passionate about public service. For generations of Indians, he will be remembered for his work in the Ramayan TV serial. Condolences to the families and admirers of both actors. Om Shanti. pic.twitter.com/cB7VaXuKOJ
— Narendra Modi (@narendramodi) October 6, 2021 " class="align-text-top noRightClick twitterSection" data="
">We have lost Shri Arvind Trivedi, who was not only an exceptional actor but also was passionate about public service. For generations of Indians, he will be remembered for his work in the Ramayan TV serial. Condolences to the families and admirers of both actors. Om Shanti. pic.twitter.com/cB7VaXuKOJ
— Narendra Modi (@narendramodi) October 6, 2021We have lost Shri Arvind Trivedi, who was not only an exceptional actor but also was passionate about public service. For generations of Indians, he will be remembered for his work in the Ramayan TV serial. Condolences to the families and admirers of both actors. Om Shanti. pic.twitter.com/cB7VaXuKOJ
— Narendra Modi (@narendramodi) October 6, 2021
ಇದರ ಜೊತೆಗೆ ಅಸಾಧಾರಣ ನಟರಾಗಿದ್ದ ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ಉತ್ಸುಕರಾಗಿದ್ದ ಅರವಿಂದ ತ್ರಿವೇದಿ ಅವರನ್ನು ನಾವು ಕಳೆದುಕೊಂಡಿದ್ದೇವೆ. ರಾಮಾಯಣದ ಧಾರಾವಾಹಿಯ ಕಾರಣದಿಂದ ಭಾರತೀಯರು ಅವರನ್ನು ತಲೆಮಾರುಗಳವರೆಗೆ ನೆನಪಿಸಿಕೊಳ್ಳುತ್ತಾರೆ. ಇಬ್ಬರಿಗೂ ನನ್ನ ಸಂತಾಪವಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.