ಮುಂಬೈ, ಮಹಾರಾಷ್ಟ್ರ: ಭಾರತದ ಅತ್ಯಂತ ಮಾನ್ಯತೆ ಪಡೆದ ಜೈಲುಗಳಲ್ಲಿ ಒಂದಾದ ಮುಂಬೈನ ಆರ್ಥರ್ ರೋಡ್ ಜೈಲು 804 ಕೈದಿಗಳ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈಗ ಇಲ್ಲಿ 3 ಸಾವಿರಕ್ಕೂ ಹೆಚ್ಚು ಕೈದಿಗಳು ಇರುವುದು ತಿಳಿದು ಬಂದಿದೆ. 2018 ರಲ್ಲಿ ಸರ್ಕಾರವು ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರಲು ಬಯಸಿದಾಗ ಅವರ ರಕ್ಷಣಾ ತಂಡವು ದೇಶದ ಜೈಲುಗಳ ಕಳಪೆ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಅವರನ್ನು ಹಸ್ತಾಂತರಿಸಬಾರದು ಎಂದು ವಾದಿಸಿತು. ನಂತರ ಆ ಜೈಲನ್ನು ಬ್ಯಾರಕ್ ಸಂಖ್ಯೆ 12 ವಿಶೇಷ ಸೌಲಭ್ಯಗಳೊಂದಿಗೆ ಸಜ್ಜು ಪಡಿಸಲಾಯಿತು.
ಬ್ಯಾರಕ್ ಸಂಖ್ಯೆ 12ರಲ್ಲಿ ಐಷಾರಾಮಿ ಸೌಲಭ್ಯ: ಗಂಭೀರ ಆರೋಪ ಕೇಳಿ ಬಂದಾಗ ಸರ್ಕಾರವು ಮುಂಬೈ ಸೆಂಟ್ರಲ್ ಜೈಲ್ನ್ ಬ್ಯಾರಕ್ ಸಂಖ್ಯೆ 12ರ ನವೀಕರಣ ಕಾರ್ಯ ಕೈಗೊಂಡಿತು. ಬಳಿಕ ಭಾರತೀಯ ಜೈಲುಗಳು ನಿಜವಾಗಿಯೂ ಉತ್ತಮವಾಗಿವೆ ಎಂದು ಸಾಬೀತುಪಡಿಸಿತು.
1925 ರಲ್ಲಿ ಚಿಂಚಪೋಕ್ಲಿಯಲ್ಲಿ ಆರು ಎಕರೆ ಪ್ರದೇಶದಲ್ಲಿ ಅರ್ಥರ್ ರೋಡ್ ಜೈಲು (ಮುಂಬೈ ಸೆಂಟ್ರಲ್ ಜೈಲ್) ಅನ್ನು ನಿರ್ಮಿಸಲಾಯಿತು. ಈ ಜೈಲಿನ ಒಳಭಾಗದಲ್ಲಿರುವ ಬ್ಯಾರಕ್ ಸಂಖ್ಯೆ 12 ಅತ್ಯಂತ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
ಬ್ಯಾರಕ್ ಸಂಖ್ಯೆ 12 ವಿಭಾಗವು ಗ್ರೌಂಡ್ ಪ್ಲಸ್ ಒನ್ ಹಳೆಯ ಕಟ್ಟಡದಲ್ಲಿದೆ. ಹಿಂದಿನ ಕೈದಿಗಳಲ್ಲಿ 26/11 ಅಪರಾಧಿ ಅಜ್ಮಲ್ ಕಸಬ್, ಬಾಲಿವುಡ್ ನಟ ಸಂಜಯ್ ದತ್, ಸ್ಟಾರ್ ಟಿವಿ ಸಿಇಒ ಪೀಟರ್ ಮುಖರ್ಜಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಆರೋಪಿಗಳಾದ ವಿಪುಲ್ ಅಂಬಾನಿ ಮತ್ತು ವಾಧವಾನ್ ಸಹೋದರರಾದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಕಪಿಲ್ ಮತ್ತು ಧೀರಜ್ ಸಹ ಇಲ್ಲೇ ಶಿಕ್ಷೆ ಅನುಭವಿಸಿದರು.
ಮಹಾರಾಷ್ಟ್ರದ ರಾಜಕೀಯ ಕದನ ಬಿರುಸುಗೊಂಡಂತೆ ಹಲವಾರು ವಿರೋಧ ಪಕ್ಷದ ನಾಯಕರು ವಂಚನೆ ಮತ್ತು ಭ್ರಷ್ಟಾಚಾರದ ವಿವಿಧ ಆರೋಪಗಳ ಮೇಲೆ ಜೈಲು ಪಾಲಾಗಿದ್ದಾರೆ. ಎನ್‌ಸಿಪಿ ನಾಯಕ ಮತ್ತು ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಅಲ್ಪಸಂಖ್ಯಾತರ ಸಚಿವ ನವಾಬ್ ಮಲಿಕ್ ಹಾಗೂ ಇತ್ತೀಚೆಗಷ್ಟೇ ಶಿವಸೇನೆಯ ಖದರ್ ಸಂಜಯ್ ರಾವತ್ ಸೇರಿದಂತೆ ಇತರರನ್ನು ಬ್ಯಾರಕ್ ನಂಬರ್ 12 ವಿಭಾಗದಲ್ಲಿ ಇರಿಸಲಾಗಿದೆ.
9,000 ಕೋಟಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಹೊತ್ತಿರುವ ವಿಜಯ್ ಮಲ್ಯ ಮತ್ತು 2020 ರಲ್ಲಿ ಪರಾರಿಯಾದ ವಜ್ರದ ವ್ಯಾಪಾರಿ ನೀರವ್ ಮೋದಿ ವಿಷಯದಲ್ಲಿ ಮುಜುಗರಕ್ಕೊಳಗಾದ ಸರ್ಕಾರವು ಬ್ಯಾರಕ್ ಸಂಖ್ಯೆ 12 ಅನ್ನು ಉನ್ನತ ಮಟ್ಟದ ಕೈದಿಗಳನ್ನು ಇರಿಸಲು ವಿನ್ಯಾಸಗೊಳಿಸಲಾಗಿದೆ.
ಬ್ಯಾರಕ್‌ಗಳು ವಿಭಿನ್ನವಾಗಿದ್ದು, ನೈಸರ್ಗಿಕ ಬೆಳಕು ಮತ್ತು ಗಾಳಿ, ಪಾಶ್ಚಿಮಾತ್ಯ ಶೈಲಿಯ ಶೌಚಾಲಯ (ಕಮೋಡ್) ಮತ್ತು 40-ಇಂಚಿನ ಎಲ್‌ಇಡಿ ಟಿವಿ ಸಹ ಇದೆ. ಕೈದಿಗಳಿಗೆ ಹಾಸಿಗೆ, ದಿಂಬು ಮತ್ತು ಬೆಡ್‌ಶೀಟ್‌ಗಳನ್ನು ನೀಡಲಾಗುತ್ತದೆ. ಇಲ್ಲಿ ಬಂಧಿಯಾಗಿರುವ ಕೈದಿಗಳಿಗೆ ಜೈಲಿನ ಗ್ರಂಥಾಲಯ ಹಾಗೂ ಪತ್ರಿಕೆಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಓದಿ: ಸನ್ನಡತೆ ತೋರಿದ ಒಂದೇ ಕುಟುಂಬದ ನಾಲ್ವರು ಸೇರಿ ವಿಜಯಪುರದ 10 ಕೈದಿಗಳಿಗೆ ಬಿಡುಗಡೆ ಭಾಗ್ಯ