ETV Bharat / bharat

ಕಳೆದ 2 ವರ್ಷ ರಾಜ್ಯಸಭಾ ಸಂಸದರ ವೇತನ, ಭತ್ಯೆಗಳಿಗೆ 200 ಕೋಟಿ ರೂ ಖರ್ಚು - ಸಂಸದರ ವೇತನ

ಕಳೆದ ಎರಡು ವರ್ಷಗಳಲ್ಲಿ ಸಂಸದರ ವೇತನ ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಕೇಂದ್ರ ಸರ್ಕಾರ 200 ಕೋಟಿ ರೂಪಾಯಿ ವ್ಯಯಿಸಿದೆ.

ಸಂಸದರ ವೇತನ, ಭತ್ಯೆ ಖರ್ಚು
ಸಂಸದರ ವೇತನ, ಭತ್ಯೆ ಖರ್ಚು
author img

By

Published : May 23, 2023, 1:25 PM IST

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭಾ ಸಂಸದರ ವೇತನ, ಭತ್ಯೆ ಮತ್ತು ಸೌಲಭ್ಯಗಳಿಗಾಗಿ ಸುಮಾರು 200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿಗೆ ರಾಜ್ಯಸಭಾ ಸಚಿವಾಲಯ ಉತ್ತರಿಸಿದೆ. 2021- 22ರಲ್ಲಿ ರಾಜ್ಯಸಭಾ ಸದಸ್ಯರಿಗಾಗಿ ಬೊಕ್ಕಸವು 97 ಕೋಟಿ ರೂ. ವ್ಯಯಿಸಿದೆ. ಇದರಲ್ಲಿ ದೇಶೀಯ ಪ್ರಯಾಣದ ಮೇಲೆ 28.5 ಕೋಟಿ ರೂ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ 1.28 ಕೋಟಿ ರೂ. ವೇತನ 57.6 ಕೋಟಿ ರೂ., ವೈದ್ಯಕೀಯ ಬಿಲ್ 17 ಲಕ್ಷ ರೂ ಮತ್ತು ಕಚೇರಿ ವೆಚ್ಚ 7.5 ಕೋಟಿ ರೂ. ಸಂಸದರಿಗೆ ಮಾಹಿತಿ ತಂತ್ರಜ್ಞಾನದ ನೆರವಿಗಾಗಿ 1.2 ಕೋಟಿ ರೂ. ವ್ಯಯಿಸಿದ ಲೆಕ್ಕವಿದೆ.

2022- 23ರ ಅವಧಿಯಲ್ಲಿ ಸದಸ್ಯರ ವೇತನಕ್ಕೆ 58.5 ಕೋಟಿ ರೂ., ದೇಶೀಯ ಪ್ರಯಾಣಕ್ಕೆ 30.9 ಕೋಟಿ ರೂ ಹಾಗೂ ವಿದೇಶಿ ಪ್ರಯಾಣಕ್ಕೆ 2.6 ಕೋಟಿ ರೂ. ವೈದ್ಯಕೀಯ ಬಿಲ್​ ರೂ. 65 ಲಕ್ಷ, ಕಛೇರಿ ನಿರ್ವಹಣೆಗೆ 7 ಕೋಟಿ ರೂ ಮತ್ತು ಐಟಿ ಸೇವೆಗಳಿಗಾಗಿ 1.5 ಕೋಟಿ ರೂ. ಖರ್ಚು ಮಾಡಲಾಗಿದೆ.

2021 ರ ದಾಖಲೆಗಳ ಪ್ರಕಾರ, ರಾಜ್ಯಸಭೆಯ ಉತ್ಪಾದಕತೆ ದರವು ಚಳಿಗಾಲದ ಅಧಿವೇಶನದಲ್ಲಿ 43 ಪ್ರತಿಶತದಷ್ಟಿದ್ದರೆ, ಮುಂಗಾರು ಅಧಿವೇಶನದಲ್ಲಿ 29 ಪ್ರತಿಶತ ಮತ್ತು ಬಜೆಟ್ ಅಧಿವೇಶನದಲ್ಲಿ 90 ಪ್ರತಿಶತದಷ್ಟಿತ್ತು. 2022ರಲ್ಲಿ ಚಳಿಗಾಲದ ಅಧಿವೇಶನದಲ್ಲಿ ಶೇಕಡಾ 94 ರಷ್ಟಿದ್ದ ರಾಜ್ಯಸಭೆಯ ಉತ್ಪಾದಕತೆ ದರ, ಮುಂಗಾರು ಅಧಿವೇಶನದಲ್ಲಿ ಶೇ. 42 ಮತ್ತು ಬಜೆಟ್ ಅಧಿವೇಶನದಲ್ಲಿ ಶೇ 90 ರಷ್ಟಿತ್ತು. ಆದರೆ ಈ ವರ್ಷದ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯ ಉತ್ಪಾದಕತೆ ಶೇ. 24 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿವಾದ: ಪ್ರಧಾನಿಯೇ ಸರ್ಕಾರದ ಮುಖ್ಯಸ್ಥರು- ಬಿಜೆಪಿ ಸಮರ್ಥನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.