ETV Bharat / bharat

ಹಿಮದಲ್ಲಿ ಸಿಲುಕಿದ್ದ 100 ವಾಹನಗಳು: 50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ - ಸಿಕ್ಕಿಂನಲ್ಲಿ ಭಾರಿ ಹಿಮಪಾತ

ಪೂರ್ವ ಸಿಕ್ಕೀಂನಲ್ಲಿ ಭಾರಿ ಹಿಮಪಾತದಿಂದಾಗಿ 178 ಪುರುಷರು, 142 ಮಹಿಳೆಯರು ಮತ್ತು 50 ಮಕ್ಕಳು ಸೇರಿ 370 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ.

army-rescues-370-tourists-stranded-due-to-heavy-snowfall-in-east-sikkim
50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ
author img

By

Published : Mar 12, 2023, 8:29 PM IST

ತೇಜ್‌ಪುರ (ಸಿಕ್ಕೀಂ): ಉತ್ತರ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಹಿಮಪಾತ ಮುಂದುವರೆದಿದೆ. ಪೂರ್ವ ಸಿಕ್ಕೀಂನಲ್ಲಿ ಭಾರಿ ಹಿಮಪಾತದಿಂದಾಗಿ ಸಿಲುಕಿದ್ದ ಸುಮಾರು 370 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಕೂಡ ಸೇರಿದ್ದಾರೆ.

ಇಲ್ಲಿನ ನತು ಲಾ ಮತ್ತು ತ್ಸೋಮ್ಗೊ (ಚಾಂಗು) ಸರೋವರದಿಂದ ಹಿಂದಿರುಗುತ್ತಿದ್ದ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಲವಾರು ವಾಹನಗಳು ಹಿಮಪಾತದಿಂದಾಗಿ ಶನಿವಾರ ಅಲ್ಲಿಯೇ ಸ್ಥಗಿತಗೊಂಡಿದ್ದವು. ಈ ಮಾಹಿತಿ ಅರಿತ ಭಾರತೀಯ ಸೈನಿಕರು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದರು. ಇದೇ ವೇಳೆ ಗಡಿ ರಸ್ತೆಗಳ ಸಂಸ್ಥೆಯ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್‌ಇಎಫ್‌) ಜೊತೆಗೆ ಸಮನ್ವಯ ಸಾಧಿಸಿದ ರಸ್ತೆ ಸಂಚಾರವನ್ನೂ ಸುಗಮಗೊಳಿಸಲಾಗಿತ್ತು.

army-rescues-370-tourists-stranded-due-to-heavy-snowfall-in-east-sikkim
50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ

50 ಮಕ್ಕಳು ಸೇರಿ 370 ಜನರ ರಕ್ಷಣೆ: ಹಿಮಪಾತದಿಂದಾಗಿ ಪ್ರವಾಸಿಗರು ಸಿಲುಕಿಕೊಂಡವರ ರಕ್ಷಣೆಯನ್ನು ರಾತ್ರಿಯಿಡೀ ಮಾಡಲಾಗಿದೆ. 178 ಪುರುಷರು ಮತ್ತು 142 ಮಹಿಳೆಯರು ಹಾಗೂ 50 ಮಕ್ಕಳು ಸೇರಿ ಒಟ್ಟಾರೆ 370 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೇ, ಭಾನುವಾರ ಬೆಳಗ್ಗೆ ವೇಳೆಗೆ ಜಿಆರ್‌ಇಎಫ್‌ ನೆರವಿನೊಂದಿಗೆ ಹಿಮಪಾತವನ್ನು ತೆರವು ಮಾಡಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಆಪರೇಷನ್ ಹಿಮ್ರಾಹತ್: ಈ ಬಗ್ಗೆ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಮಾಹಿತಿ ನೀಡಿದ್ದು, ಮಾರ್ಚ್ 11ರಂದು ಸಿಕ್ಕಿಂನಲ್ಲಿ ಭಾರಿ ಹಿಮಪಾತ ಉಂಟಾಗಿತ್ತು. ಇದರಿಂದ ಸುಮಾರು 400 ಪ್ರವಾಸಿಗರನ್ನು ಹೊತ್ತ ಸುಮಾರು 100 ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ತಕ್ಷಣವೇ ಪೊಲೀಸರು ಮತ್ತು ಆಡಳಿತದ ಸಹಯೋಗದಲ್ಲಿ ತ್ರಿಶಕ್ತಿ ಕಾರ್ಪ್ಸ್‌ನ ಪಡೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದವು. 'ಆಪರೇಷನ್ ಹಿಮ್ರಾಹತ್' ಹೆಸರಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದವು ಎಂದು ಹೇಳಿದರು.

ಇದನ್ನೂ ಓದಿ: ಹಿಮರಾಶಿಯಲ್ಲಿ ಚಿರತೆಗಳ ತುಂಟಾಟ- ವಿಡಿಯೋ

ತಡರಾತ್ರಿಯವರೆಗೂ ಪರಿಹಾರ ಕಾರ್ಯಾಚರಣೆ ಮುಂದುವರೆದಿತ್ತು. ಮತ್ತೊಂದೆಡೆ, ರಕ್ಷಣೆ ಮಾಡಿದ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಆಶ್ರಯ, ಬೆಚ್ಚಗಿನ ಬಟ್ಟೆ, ವೈದ್ಯಕೀಯ ನೆರವು ಮತ್ತು ಬಿಸಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲ ಪ್ರವಾಸಿಗರಿಗೆ ರಕ್ಷಣಾ ಪಡೆಗಳು ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದವು. ಅಲ್ಲದೇ, ಎಲ್ಲರಿಗೂ ಆರೋಗ್ಯ ತಪಾಸಣೆ ಕೂಡ ನಡೆಸಲಾಯಿತು ಎಂದು ವಿವರಿಸಿದರು.

ಇದೇ ವೇಳೆ ಜಿಆರ್‌ಇಎಫ್​ ಡೋಜರ್‌ಗಳ ಸಹಾಯದಿಂದ ಬೆಳಗ್ಗೆ 9 ಗಂಟೆಯ ಸುಮಾರಿಗೆ ಗ್ಯಾಂಗ್‌ಟಾಕ್‌ಗೆ ವಾಹನಗಳ ಚಲನೆಯನ್ನು ಸಕ್ರಿಯಗೊಳಿಸಲು ಹಿಮವನ್ನು ತೆರವುಗೊಳಿಸಲಾಯಿತು. ಪಡೆಗಳ ತ್ವರಿತ ಪ್ರತಿಕ್ರಿಯೆಯಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸಿಕ್ಕಿಬಿದ್ದ ಪ್ರವಾಸಿಗರಿಗೆ ಪರಿಹಾರ ಹಾಗೂ ಸೌಕರ್ಯವನ್ನು ಒದಗಿಸುವಲ್ಲಿ ಸಾಧ್ಯವಾಯಿತು ಎಂದು ಲೆಫ್ಟಿನೆಂಟ್ ಕರ್ನಲ್ ರಾವತ್ ತಿಳಿಸಿದರು.

ಸಹಾಯ ಒದಗಿಸುವಲ್ಲಿ ಭಾರತೀಯ ಸೇನೆ ಮುಂದು: ಮತ್ತೊಂದೆಡೆ, ಹಿಮಪಾತದ ಅಪಾಯದಿಂದ ಪಾರಾಗಿ ಬಂದ ಎಲ್ಲ ಪ್ರವಾಸಿಗರು ಮತ್ತು ಸಿಕ್ಕಿಂ ಆಡಳಿತವು ಸೇನೆಯ ಕಾರ್ಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಇದರ ಮೂಲಕ ಹಿಮಾಲಯದ ಅತಿ ಎತ್ತರದ ಪ್ರದೇಶಗಳಲ್ಲಿ ಗಡಿಯನ್ನು ಕಾಪಾಡುವುದರ ಜೊತೆಗೆ ಭಾರತೀಯ ಸೇನೆಯು ಪ್ರವಾಸಿಗರಿಗೆ ಮತ್ತು ಸ್ಥಳೀಯ ಜನರಿಗೆ ಸಹಾಯ ಒದಗಿಸುವಲ್ಲಿ ಯಾವಾಗಲೂ ಮುಂದೆ ಕಾರ್ಯನಿರ್ವಹಿಸುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇದನ್ನೂ ಓದಿ: ಏ.25ರಿಂದ ಕೇದಾರನಾಥ ಯಾತ್ರೆ: ಭರದಿಂದ ಸಾಗುತ್ತಿದೆ ಹಿಮ ತೆರವು ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.