ಆಂಧ್ರಪ್ರದೇಶ : ಮಾವೋವಾದಿಗಳ ಹೆಸರಿನಲ್ಲಿ ಹಣಕ್ಕಾಗಿ ಒತ್ತಾಯಿಸಿದ್ದಕ್ಕಾಗಿ ಸೇನಾ ವ್ಯಕ್ತಿಯನ್ನು ವಿಜಯನಗರಂ ಎಸ್ಪಿ ಬಂಧಿಸಿದ್ದಾರೆ.
ಸೇನಾ ನೌಕರನಾಗಿ ಕೆಲಸ ಮಾಡುತ್ತಿರುವ ರಾಜೇಶ್ವರ ರಾವ್ ಎಂಬುವರು ಭೂಸ್ವಾಧೀನದಲ್ಲಿ ಭಾರಿ ನಷ್ಟ ಅನುಭವಿಸಿದ್ದರಂತೆ. ಈ ಕಾರಣಕ್ಕೆ ಸುಲಿಗೆ ಮಾಡುವ ಆಲೋಚನೆಗೆ ಮುಂದಾಗಿದ್ದಾರೆ. ರಜೆಯ ಮೇಲೆ ಮನೆಗೆ ಬಂದಿರುವ ಇವರು ತಾವು ಉತ್ತರದೇಶದಲ್ಲಿ ತಯಾರಿಸಿದ ಗನ್ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಏನಿದು ಘಟನೆ? : ಪಾರ್ವತಿಪುರಂನ ಚಿನ್ನದ ವ್ಯಾಪಾರಿಗಳಿಂದ 5 ಕೋಟಿ ರೂ. ಬೇಡಿಕೆ ಇಟ್ಟಿದ್ದ ಇವರು, ಕೋಮರದ ಮಂಡಲದ ವಿಕ್ರಂಪುರಂನಲ್ಲಿ ಈ ಹಣವನ್ನು ತಲುಪಿಸಲು ಸೂಚಿಸಿದ್ದರು. ಇದರ ಬಗ್ಗೆ ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ರಾಜಕುಮಾರಿ ಮಾಹಿತಿ ನೀಡಿದ್ದಾರೆ.