ETV Bharat / bharat

ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್​ ಅರೆಸ್ಟ್​: 51 ಬಂದೂಕುಗಳು ವಶಕ್ಕೆ

ಇಂದೋರ್ ಅಪರಾಧ ವಿಭಾಗವು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುತ್ತಿದ್ದ ಗ್ಯಾಂಗ್​ವೊಂದನ್ನು ಬಂಧಿಸಿ, 51 ಬಂದೂಕುಗಳು ವಶಕ್ಕೆ ಪಡೆದುಕೊಂಡಿದೆ.

arrest
arrest
author img

By

Published : Feb 21, 2021, 9:42 AM IST

ಇಂದೋರ್: ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಇಂದೋರ್ ಅಪರಾಧ ವಿಭಾಗವು ಯಶಸ್ವಿಯಾಗಿದೆ.

ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ ಜನರಲ್ ಪೊಲೀಸ್ ಇನ್ಸ್‌ಪೆಕ್ಟರ್ ಮನೀಶ್ ಕಪೂರಿಯಾ

ಪ್ರಕಾಶ್ ಸಿಂಗ್, ಗೋವಿಂದ್, ರಾಜೇಂದ್ರ, ಪಿಯೂಷ್ ಸಿಂಗ್ ಮತ್ತು ರವಿ ಸೋಲಂಕಿ ಬಂಧಿತರು. ಈ ಐವರು ಆರೋಪಿಗಳಲ್ಲಿ ಒಬ್ಬ ಬಿಹಾರ್​ ಮೂಲದವನಾಗಿದ್ದು, ಉಳಿದವರು ಮಧ್ಯಪ್ರದೇಶದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು, ಕಳ್ಳಸಾಗಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬಂಧಿತರಿಂದ 51 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 22 ದೇಶೀಯಾ ಪಿಸ್ತೂಲ್‌ ಮತ್ತು 29 ಇತರೆ ಪಿಸ್ತೂಲ್‌ಗಳು ಎಂದು ಜನರಲ್ ಪೊಲೀಸ್ ಇನ್ಸ್‌ಪೆಕ್ಟರ್ ಮನೀಶ್ ಕಪೂರಿಯಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.