ETV Bharat / bharat

Margadarsi Chit Fund: ನೋಟಿಸ್​ ಕೊಡದೇ ಹೇಗೆ ಕ್ರಮ ತೆಗೆದುಕೊಳ್ಳುತ್ತೀರಿ?

Margadarsi Chit Fund case: ಆಂಧ್ರಪ್ರದೇಶ ಸರ್ಕಾರದ ವೆಬ್​ಸೈಟ್​ನಲ್ಲಿ ಚಿಟ್ಸ್​​ ರಿಜಿಸ್ಟ್ರಾರ್​ ಪ್ರಕಟಿಸಿದ ಸಾರ್ವಜನಿಕ ನೋಟಿಸ್​ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆಂಧ್ರಪ್ರದೇಶ ಹೈಕೋರ್ಟ್​ ಕೈಗೆತ್ತಿಕೊಂಡಿದೆ.

Etv Bharat
Etv Bharat
author img

By

Published : Aug 8, 2023, 5:57 PM IST

Updated : Aug 9, 2023, 10:05 AM IST

ಅಮರಾವತಿ (ಆಂಧ್ರಪ್ರದೇಶ): ಚಿಟ್​ಫಂಡ್​​ ಗ್ರೂಪ್​ಗಳ ಬಗ್ಗೆ ಚಂದಾದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿ ಆಂಧ್ರಪ್ರದೇಶ ಸರ್ಕಾರದ ವೆಬ್​ಸೈಟ್​ನಲ್ಲಿ ಜುಲೈ 30ರಂದು ಚಿಟ್ಸ್​​ ರಿಜಿಸ್ಟ್ರಾರ್​ ಸಾರ್ವಜನಿಕ ನೋಟಿಸ್​ಗಳನ್ನು ಪ್ರಕಟಿಸಿದ್ದಾರೆ. ಇದನ್ನು ಪ್ರಶ್ನಿಸಿ ಮಾರ್ಗದರ್ಶಿ ಚಿಟ್​ಫಂಡ್​ ಕಂಪನಿಯ ಅಧಿಕೃತ ಪ್ರತಿನಿಧಿ ಪಿ.ರಾಜಾಜಿ ಅವರು ಆಂಧ್ರಪ್ರದೇಶದ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆಂಧ್ರದ ಗುಂಟೂರು, ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳ ಚಿಟ್​ ಗ್ರೂಪ್​ಗಳ ಪ್ರಕರಣದಲ್ಲಿ ನೀಡಲಾದ ಸಾರ್ವಜನಿಕ ನೋಟಿಸ್​ಗಳನ್ನು ಪ್ರಶ್ನಿಸಿ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಸೋಮವಾರ ಕೃಷ್ಣಾ ಮತ್ತು ಪ್ರಕಾಶಂ ಜಿಲ್ಲೆಗಳ ಚಿಟ್​ ಗ್ರೂಪ್​ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ನಾಗಮುತ್ತು ಹಾಗೂ ದಮ್ಮಲಪತಿ ಶ್ರೀನಿವಾಸ್​ ವಾದ ಮಂಡಿಸಿದರು.

''ಚಿಟ್​​ಫಂಡ್​ ಕಾಯ್ದೆ ನಿಬಂಧನೆಗಳ ಪ್ರಕಾರ, ಚಿಟ್​ ನಿರ್ವಹಣೆಯಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಲು ಫೋರ್​ಮನ್​ಗೆ ಅಧಿಕಾರ ಇರುತ್ತದೆ. ಚಿಟ್​ ಫಂಡ್​​​​ ಶಾಖೆಗಳಲ್ಲಿ ತಪಾಸಣೆ ನಡೆಸಿದ ಸಹಾಯಕ ರಿಜಿಸ್ಟ್ರಾರ್​ ಅವರಿಗೆ ವ್ಯವಹಾರದಲ್ಲಿ ದೋಷ ಕಂಡುಬಂದಲ್ಲಿ ಚಿಟ್​​ ಕಾಯ್ದೆಯ ಸೆಕ್ಷನ್​ 46 (3)ರ ಅನ್ವಯ ಸರಿಪಡಿಸಲು ನೋಟಿಸ್ ನೀಡಬೇಕಿತ್ತು'' ಎಂದು ವಕೀಲರು ವಿವರಿಸಿದರು.

''ಇದಾದ ಮೇಲೂ ದೋಷಗಳನ್ನು ಸರಿಪಡಿಸದಿದ್ದರೆ ಸೆಕ್ಷನ್​ 48 (ಹೆಚ್​) ಅಡಿ ಚಿಟ್​​ಗ್ರೂಪ್​ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬಹುದು. ಆದರೆ, ಸಹಾಯಕ ರಿಜಿಸ್ಟ್ರಾರ್​ ಮೇಲ್ವಿಚಾರಕರಿಗೆ ನೋಟಿಸ್​ ನೀಡಿಲ್ಲ. ಹೀಗಾಗಿ ಚಿಟ್​ ಗ್ರೂಪ್​​ಗಳ ಅಮಾನತು ಕುರಿತು ರಿಜಿಸ್ಟ್ರಾರ್​ ಅಥವಾ ಡೆಪ್ಯುಟಿ ರಿಜಿಸ್ಟ್ರಾರ್​​ ಆಕ್ಷೇಪಣೆ ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಚಿಟ್ಸ್​ ರಿಜಿಸ್ಟ್ರಾರ್​​ ಪ್ರಕಟಿಸಿದ ಸಾರ್ವಜನಿಕ ನೋಟಿಸ್​ ಅಮಾನ್ಯ'' ಎಂದು ವಾದಿಸಿದರು.

''ಚಿಟ್​ಫಂಡ್​ ಕಾಯ್ದೆ ಪ್ರಕಾರ, ಸಹಾಯಕ ರಿಜಿಸ್ಟ್ರಾರ್​ ಮತ್ತು ಡೆಪ್ಯುಟಿ ರಿಜಿಸ್ಟ್ರಾರ್​​ ಕೂಡ ರಿಜಿಸ್ಟ್ರಾರ್​ ಎಂಬ ವ್ಯಾಖ್ಯಾನದಡಿ ಬರುತ್ತಾರೆ. ಪರಿಶೀಲನೆ ನಡೆಸಿದ ಸಹಾಯಕ ನೋಂದಣಾಧಿಕಾರಿ ಮಾತ್ರ ದೋಷಗಳನ್ನು ಸರಿಪಡಿಸಲು ಮೇಲ್ವಿಚಾರಕರಿಗೆ ನೋಟಿಸ್​ ನೀಡಬೇಕು. ಮತ್ತೊಂದೆಡೆ, ಸಹಾಯಕ ರಿಜಿಸ್ಟ್ರಾರ್​​ ಶಿಫಾರಸಿನಂತೆ ಚಿಟ್​ಗ್ರೂಪ್​ಗಳನ್ನು ಅಮಾನತು ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸುತ್ತಿರುವುದಾಗಿ ಚಿಟ್ಸ್​ ರಿಜಿಸ್ಟ್ರಾರ್​ ಸಾರ್ವಜನಿಕ ನೋಟಿಸ್​ ನೀಡಿದ್ದಾರೆ. ನೋಟಿಸ್​ ನೀಡುವುದು ರಿಜಿಸ್ಟ್ರಾರ್​​ ಅಧಿಕಾರದ ಪರಿಧಿಗೆ ಬರುವುದಿಲ್ಲ'' ಎಂದು ತಿಳಿಸಿದರು.

ಮುಂದುವರೆದು, ''ಚಿಟ್ ​ಗ್ರೂಪ್​ಗಳ ಅಮಾನತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಕಾನೂನು ನೀಡಿಲ್ಲ. ಆದರೆ, ಚಿಟ್ ಗುಂಪುಗಳನ್ನು ನಿಲ್ಲಿಸಿ ಮಾರ್ಗದರ್ಶಿಗೆ ಹಾನಿ ಮಾಡುವ ದುರುದ್ದೇಶದಿಂದಲೇ ಸಾರ್ವಜನಿಕ ನೋಟಿಸ್‌ ನೀಡಲಾಗಿದೆ'' ಎಂದು ವಕೀಲರು ನ್ಯಾಯಾಲಯದ ಗಮನ ಸೆಳೆದರು.

ಇದನ್ನೂ ಓದಿ: Margadarsi Chit Fund: ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದ ವರ್ಗಾವಣೆ ಸಾಧ್ಯವಿಲ್ಲ- ಸುಪ್ರೀಂ ಕೋರ್ಟ್

ಸಾರ್ವಜನಿಕ ನೋಟಿಸ್​ಗೆ ತಡೆ ನೀಡಿ: ಸಾರ್ವಜನಿಕ ನೋಟಿಸ್​ ಜಾರಿ ಮಾಡುವುದನ್ನು ನಿಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ ಹಿರಿಯ ವಕೀಲ ನಾಗಮುತ್ತು, ಚಂದಾದಾರರ ಹಿತಾಸಕ್ತಿ ಕಾಪಾಡಲು ಚಿಟ್​ ಫಂಡ್​ ಕಾಯ್ದೆಯಲ್ಲಿ ಅವಕಾಶಗಳಿಗೆ ಎಂದು ಹೇಳಿದರು.

''ಚಿಟ್​ ಗುಂಪುಗಳನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಲೆಂದು ಚಿಟ್​ ಫಂಡ್​ ಕಾಯ್ದೆ ಇದೆ. ಇದಕ್ಕೆ ಸೆಕ್ಷನ್ 46(3) ಅವಕಾಶ ನೀಡುತ್ತದೆ. ದೋಷಗಳು ಕಂಡು ಬಂದಲ್ಲಿ ಸರಿಪಡಿಸಲು ನೋಟಿಸ್​ ನೀಡುವ ಹೊಣೆ ರಿಜಿಸ್ಟ್ರಾರ್​ಗೆ ಇದೆ. ಆದರೆ, ಇಲ್ಲಿ ತಪಾಸಣೆ ನಡೆಸಿದ ಸಹಾಯಕ ನೋಂದಣಾಧಿಕಾರಿ ದೋಷಗಳನ್ನು ಸರಿಪಡಿಸಲು ನೋಟಿಸ್​ ನೀಡಿಲ್ಲ. ಕಾನೂನಿನ ಪ್ರಕಾರ ಚಂದಾದಾರರ ಹಣಕ್ಕೆ ಶೇ.100ರಷ್ಟು ಭದ್ರತೆ ಒದಗಿಸಲಾಗುತ್ತಿದೆ. ಆದ್ದರಿಂದ ಚಂದಾದಾರರ ಹಿತಾಸಕ್ತಿಗೆ ಯಾವುದೇ ಸಮಸ್ಯೆ ಆಗಿಲ್ಲ'' ಎಂದು ಸ್ಪಷ್ಟನೆ ನೀಡಿದರು.

ಮತ್ತೊಬ್ಬ ಹಿರಿಯ ವಕೀಲ ದಮ್ಮಲಪತಿ ಶ್ರೀನಿವಾಸ್ ವಾದ ಮಂಡಿಸಿ, ''ಪ್ರಕಾಶಂ ಜಿಲ್ಲಾ ಚಿಟ್​ ಗುಂಪುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ನೋಟಿಸ್​ ನೀಡುವ ಮುನ್ನವೇ ಕೆಲ ಗುಂಪುಗಳನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಅಧಿಕಾರಿಗಳು ನಂತರ ಆದೇಶ ಹೊರಡಿಸಿದ್ದಾರೆ. ಆಕ್ಷೇಪಣೆಗಳನ್ನು ನಂತರ ಆಹ್ವಾನಿಸಲಾಗಿದೆ'' ಎಂದು ನ್ಯಾಯಾಲಯದ ಗಮನಕ್ಕೆ ತಂದರು.

''ಇದು ಕಾನೂನಿನ ನಿಬಂಧನೆಗಳಿಗೆ ವಿರುದ್ಧವಾಗಿದೆ. ಇದೇ ರೀತಿಯ ಆರೋಪಗಳೊಂದಿಗೆ ಪಡಿಯಚ್ಚು ಮಾದರಿಯಲ್ಲಿ ಆದೇಶಗಳನ್ನು ಹೊರಡಿಸಲಾಗಿದೆ. ತಪಾಸಣೆ ನಡೆಸಿದ ಅಧಿಕಾರಿಗಳು ದೋಷಗಳು ಕಂಡು ಬಂದಲ್ಲಿ ಅದರ ಮಾಹಿತಿ ನೀಡಿ ಸರಿಪಡಿಸಲು ಮತ್ತೊಮ್ಮೆ ನೋಟಿಸ್​ ನೀಡಬೇಕು. ಈ ನೀತಿಯನ್ನು ಅನುಸರಿಸದೇ ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ'' ಎಂದರು.

''ಚಿಟ್​ ಗ್ರೂಪ್​​ಗಳನ್ನು ಉಳಿಸಿಕೊಳ್ಳುವುದೇ ತುಂಬಾ ಗಂಭೀರ ವಿಷಯ. ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮುನ್ನ ಮೇಲ್ವಿಚಾರಕರ ಗಮನಕ್ಕೆ ತರಬೇಕು ಎಂದು ಕಾನೂನು ಹೇಳುತ್ತದೆ. ಹಣಕಾಸು ವಿಚಾರದಲ್ಲಿ ನೋಟಿಸ್​ ನೀಡದೇ ನೇರವಾಗಿ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್​ ಆದೇಶ ಇದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ನೋಟಿಸ್​ ಮೇರೆಗೆ ಕೈಗೊಳ್ಳವ ಕ್ರಮಗಳನ್ನು ನಿಲ್ಲಿಸಬೇಕು'' ಎಂದು ಮನವಿ ಮಾಡಿದರು. ಇಂದು ಮಾರ್ಗದರ್ಶಿ ಪರ ಇಬ್ಬರು ಹಿರಿಯ ವಕೀಲರ ವಾದ ಮಂಡನೆ ಬಳಿಕ ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆ. ನಾಳೆ ರಾಜ್ಯ ಸರ್ಕಾರದ ಪರವಾಗಿ ಎಜಿ ಶ್ರೀರಾಮ್​ ವಾದ ಮಂಡಿಸಲಿದ್ದಾರೆ.

Last Updated : Aug 9, 2023, 10:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.