ETV Bharat / bharat

ನೀವು ದಿನದಲ್ಲಿ ಸಾಕಷ್ಟು ನೀರು ಕುಡಿಯುತ್ತಿದ್ದೀರಾ? - ನೀರು ಸೇವನೆಗೆ ಮಾರ್ಗದರ್ಶಿ

ನಮ್ಮ ದೇಹವು ಶೇ. 70ರಷ್ಟು ನೀರಿನಿಂದ ಮಾಡಲ್ಪಟ್ಟಿದೆ. ನೀರು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮೂತ್ರ ವಿಸರ್ಜನೆಯಿಂದ ಬೆವರುವುದರಿಂದ.. ಹೀಗೆ ವಿವಿಧ ರೀತಿಯಲ್ಲಿ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನೀರು ಸಹಕರಿಸುತ್ತದೆ.

are-you-drinking-sufficient-water-throughout-the-day
ನೀವು ದಿನದಲ್ಲಿ ಸಾಕಷ್ಟು ನೀರು ಕುಡಿಯುತ್ತಿದ್ದೀರಾ ?
author img

By

Published : May 4, 2022, 11:33 AM IST

ನೀರನ್ನು ಜೀವಜಲ ಎಂದು ಕರೆಯುತ್ತೇವೆ. ನೀರು ನಮ್ಮ ದೇಹಕ್ಕೆ ಬೇಕಾದ ಅಗತ್ಯ ವಸ್ತು. ನಮ್ಮ ದೇಹದೊಳಗೆ ತಾಪಮಾನ ನಿಯಂತ್ರಣ ಮತ್ತು ಅಗತ್ಯ ಪೌಷ್ಟಿಕಾಂಶಗಳ ಕೊರತೆಯನ್ನು ನೀರು ನಿವಾರಿಸುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ನಮ್ಮಲ್ಲಿ ಹೆಚ್ಚಿನ ಆರೋಗ್ಯಕರ ಬದಲಾವಣೆಗಳಾಗುತ್ತದೆ. ಆದರೆ ಇಂದು ಜನರು ಬಾಯಾರಿಕೆಯಾದಾಗ ಮಾತ್ರ ನೀರನ್ನು ಸೇವಿಸುತ್ತಿದ್ದು, ನೀರಿನ ಪೂರ್ಣ ಪ್ರಮಾಣದ ಲಾಭದಿಂದ ವಂಚಿತರಾಗುತ್ತಿದ್ದಾರೆ. ವೈದ್ಯರು ಸಲಹೆ ನೀಡುವಂತೆ, ಇಡೀ ದಿನದಲ್ಲಿ 2-3 ಲೀಟರ್‌ಗಳಷ್ಟು ನೀರು ಸೇವನೆ ಮಾಡುವುದರಿಂದ ಆರೋಗ್ಯಕರ ಜೀವನ ಹೊಂದಬಹುದು ಎಂದು ಹೇಳುತ್ತಾರೆ. ಇದು ನಮ್ಮ ದೇಹದಲ್ಲಿನ ನೀರಿನ ಅಂಶವನ್ನು ಕಾಪಾಡಲು ಸಹಕರಿಸುತ್ತದೆ.ಇನ್ನು ನೀರಿನ ಉಪಯೋಗಗಳ ಬಗ್ಗೆ ತಿಳಿಯೋಣ.

  • ದೇಹದ ಶಕ್ತಿಯ ಹೆಚ್ಚಿಸುತ್ತದೆ: ನಮಗೆ ಕೆಲವು ಸಮಯದಲ್ಲಿ ತುಂಬಾ ದಣಿವಾಗುತ್ತದೆ. ಪ್ರಮುಖವಾಗಿ ಬೇಸಿಗೆಯ ಸಂದರ್ಭದಲ್ಲಿ ನಿರ್ಜಲೀಕರಣದ ಅನುಭವವಾಗುತ್ತದೆ. ಇದರಿಂದ ನಮ್ಮ ದೇಹವು ಆಯಾಸಗೊಂಡಂತೆ ಭಾಸವಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ನೀರು ಸೇವನೆಯಿಂದ ನಾವು ನಮ್ಮ ದೇಹಕ್ಕೆ ಚೈತನ್ಯ ನೀಡಬಹುದು.
  • ನಿರ್ಜಲೀಕರಣ ದೂರ ಮಾಡುತ್ತದೆ: ನಾವು ದಣಿದಾಗ ನಮ್ಮ ಅನುಭವಕ್ಕೆ ಬಾರದಿದ್ದರೂ, ನಮ್ಮ ಮೆದುಳು ಅದನ್ನು ಪ್ರಾಥಮಿಕವಾಗಿ ಅನುಭವಿಸುತ್ತದೆ. ನಮ್ಮ ಜೀವಕೋಶಗಳಿಗೆ ವಿದ್ಯುತ್ ಸಂಕೇತಗಳನ್ನು ಕಳುಹಿಸಲು ಮೆದುಳಿಗೆ ನೀರು ಅತ್ಯಗತ್ಯ. ನಮ್ಮ ಮೆದುಳು ಆಯಾಸಗೊಂಡಾಗ ನಮ್ಮ ಸ್ನಾಯುಗಳ ಚಲನೆ ಕುಂಟಿತವಾಗುತ್ತದೆ, ಕಣ್ಣುಗಳು ಮಂದವಾದಂತೆ ಭಾಸವಾಗುತ್ತದೆ. ಇದು ನಿರ್ಜಲೀಕರಣದಿಂದ ಉಂಟಾಗುವುದರಿಂದ ನಮ್ಮ ಮೆದುಳಿನ ಕಾರ್ಯಕ್ಷಮತೆಗೆ ನೀರು ಅತ್ಯಗತ್ಯ.
  • ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ: ನಿರ್ಜಲೀಕರಣವು ನಮ್ಮನ್ನು ದಣಿಯುವಂತೆ ಮಾಡುತ್ತದೆ. ಪ್ರತಿಯಾಗಿ ಹೆಚ್ಚು ನೀರು ಸೇವನೆ ಮಾಡುವುದರಿಂದ ಲವಲವಿಕೆಯಿಂದ ಇರಲು ಸಹಾಯವಾಗುತ್ತದೆ.
  • ತೂಕ ನಷ್ಟ ಹೊಂದಲು ನೀರು ಸಹಕಾರಿ: ಆರೋಗ್ಯಕರ ಆಹಾರದ ಜೊತೆಗೆ, ನೀರು ಕೂಡ ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ. ನೀರು, ಕ್ಯಾಲೋರಿ ಮತ್ತು ಕೊಬ್ಬು-ಮುಕ್ತವಾಗಿರುವುದರಿಂದ ತೂಕನಷ್ಟ ಹೊಂದಲು ಸಹಕಾರಿಯಾಗುತ್ತದೆ.
  • ಕಾಂತಿಯುತ ಚರ್ಮ ಹೊಂದಲು ಸಹಾಯ: ನಮ್ಮ ಚರ್ಮವು ನೀರಿನಿಂದ ಕೂಡಿರುವುದಾಗಿದೆ. ಚರ್ಮದಲ್ಲಿರುವ ಕೊಲಾಜಿನ್ ಎಂಬ ಪ್ರೋಟೀನ್, ನಮ್ಮ ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿ. ಆದ್ದರಿಂದ ನೀರಿನ ಕೊರತೆಯು ನಿಮ್ಮ ಚರ್ಮವನ್ನು ಶುಷ್ಕ ಮತ್ತು ಸುಕ್ಕುಗಟ್ಟುವಂತೆ ಮಾಡುತ್ತದೆ. ನೀರು ಕುಡಿಯುವುದರಿಂದ ಆರೋಗ್ಯಕರ ಚರ್ಮವನ್ನು ಹೊಂದಬಹುದು.

ಇದನ್ನೂ ಓದಿ: ಬಿಸಿಲಿನ ಹೊಡೆತ ಮಾರಣಾಂತಿಕವಾಗಬಹುದು.. ಸೆಕೆ ನಿಯಂತ್ರಿಸಲು ಹೀಗೆ ಮಾಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.