ETV Bharat / bharat

ರೈತರಿಗೆ ಬಂಪರ್​​​​​​​​​​: ಪ್ರತಿ ಎಕರೆಗೆ 1500 ರೂ. ಸಬ್ಸಿಡಿ ನೀಡಲು ಭಗವಂತ್​ ಮಾನ್​ ತೀರ್ಮಾನ! - ತಿ ಎಕರೆಗೆ 1500 ರೂ ಸಬ್ಸಿಡಿ ನೀಡಲು ಭಗವಂತ್​ ಮಾನ್​ ತೀರ್ಮಾನ

ಪ್ರತಿ ಎಕರೆಗೆ 1500 ರೂ. ಸಹಾಯಧನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಮಾಡಿದೆ ಎಂದು ಟ್ವೀಟ್​ನಲ್ಲಿ ಭಗವಂತ್ ಮಾನ್​ ಹೇಳಿದ್ದಾರೆ. ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೇರವಾಗಿ ಜೋಶೆನ್ ಬಿತ್ತನೆ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಿಎಂ ಮಾನ್ ಟ್ವೀಟ್ ನಲ್ಲಿ ರಾಜ್ಯದ ರೈತರಿಗೆ ಮನವಿ ಮಾಡಿದ್ದಾರೆ.

Approved 1500 rupees per acre subsidy to the farmers in cabinet meeting
ರೈತರಿಗೆ ಬಂಪರ್​​​​​​​​​​: ಪ್ರತಿ ಎಕರೆಗೆ 1500 ರೂ. ಸಬ್ಸಿಡಿ ನೀಡಲು ಭಗವಂತ್​ ಮಾನ್​ ತೀರ್ಮಾನ!
author img

By

Published : May 18, 2022, 3:54 PM IST

ಚಂಡೀಗಢ( ಪಂಜಾಬ್​): ಒಂದು ಕಡೆ ಮೊಹಾಲಿ ಚಂಡೀಗಢದಲ್ಲಿ ರೈತರ ಧರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಸಿಎಂ ಭಗವಂತ್ ಮಾನ್ ಸಂಪುಟ ಸಭೆ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಭೆಯಲ್ಲಿ ಪ್ರತಿ ಎಕರೆಗೆ 1500 ರೂ.ಗಳ ಸಹಾಯ ಧನ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಂಬಂಧ ಸಿಎಂ ಸಭೆ ಬಳಿಕ ಟ್ವೀಟ್​ ಕೂಡಾ ಮಾಡಿದ್ದಾರೆ.

  • ਅੱਜ ਮੰਤਰੀ ਸਾਹਿਬਾਨਾਂ ਨਾਲ ਅਹਿਮ ਕੈਬਨਿਟ ਮੀਟਿੰਗ ਕੀਤੀ...ਝੋਨੇ ਦੀ ਸਿੱਧੀ ਬਿਜਾਈ ਕਰਨ ਵਾਲੇ ਕਿਸਾਨਾਂ ਨੂੰ ₹1500 ਪ੍ਰਤੀ ਏਕੜ ਸਹਾਇਤਾ ਰਾਸ਼ੀ ਵਜੋਂ ਦੇਣ ਦੇ ਫ਼ੈਸਲੇ ਨੂੰ ਮਨਜ਼ੂਰੀ ਦਿੱਤੀ

    ਪਾਣੀ ਦੀ ਲੋੜ ਨੂੰ ਵੇਖਦੇ ਹੋਏ ਸਿੱਧੀ ਬਿਜਾਈ ਨੂੰ ਅਪਣਾਈਏ..ਸਾਥੀ ਕਿਸਾਨ ਭਰਾਵਾਂ ਨੂੰ ਵੀ ਪ੍ਰੇਰਿਤ ਕਰੀਏ। ਧਰਤੀ-ਪਾਣੀ ਬਚਾਉਣ ਲਈ ਹੰਭਲਾ ਮਾਰੀਏ pic.twitter.com/2tR6IXLrBc

    — Bhagwant Mann (@BhagwantMann) May 18, 2022 " class="align-text-top noRightClick twitterSection" data=" ">

ಟ್ವೀಟ್​​ನಲ್ಲಿ ಏನಿದೆ?: ಪ್ರತಿ ಎಕರೆಗೆ 1500 ರೂ. ಸಹಾಯಧನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಮಾಡಿದೆ ಎಂದು ಟ್ವೀಟ್​ನಲ್ಲಿ ಭಗವಂತ್ ಮಾನ್​ ಹೇಳಿದ್ದಾರೆ. ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೇರವಾಗಿ ಜೋಶೆನ್ ಬಿತ್ತನೆ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಿಎಂ ಮಾನ್ ಟ್ವೀಟ್ ನಲ್ಲಿ ರಾಜ್ಯದ ರೈತರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ಈ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸಬೇಕು. ನೆಲ, ಜಲ ಉಳಿಸಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿರುವ ಅವರು, ಇದರ ಜತೆಗೆ ಸಂಪುಟ ಸಭೆಯ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ರೈತರ ಧರಣಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಹಾಲಿ ಚಂಡೀಗಢ ಗಡಿಯಲ್ಲಿ ರೈತರು ಧರಣಿ ಹಮ್ಮಿಕೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಸದ್ಯ ಮುಖ್ಯಮಂತ್ರಿ ಭಗವಂತ್ ಮಾನ್ ರೈತ ಸಂಘಟನೆಗಳ ಜೊತೆ ಸಭೆ ಕೂಡಾ ನಡೆಸುತ್ತಿದ್ದಾರೆ.

ಈ ಹಿಂದಿನ ಸಚಿವ ಸಂಪುಟ ಸಭೆಯ ಮಹತ್ವದ ನಿರ್ಧಾರಗಳು: ಕಳೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ 26 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಸಿಎಂ ಅನುಮೋದನೆ ನೀಡಿದ್ದರು. ಮನೆ ಮನೆಗೆ ಪಡಿತರ ವಿತರಣೆ ಯೋಜನೆಗೆ ಅನುಮೋದನೆ ಸೇರಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.