ಗುಂಟೂರು(ಆಂಧ್ರ): ಇಲ್ಲಿನ ಬಾಪಟ್ಲಾ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ತಲಶಿಲಾ ಗೋಪಾಲಕೃಷ್ಣಮೂರ್ತಿ ಅವರು ಎರಡು ಹೊಸ ಔಷಧೀಯ ಸಂಯುಕ್ತಗಳನ್ನು ತಯಾರು ಮಾಡಿದ್ದು, ಪೇಟೆಂಟ್ ಕಚೇರಿಯಿಂದ ಪೇಟೆಂಟ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.
ಅಧಿಕ ರಕ್ತದೊತ್ತಡ (ಬಿಪಿ) ಹೊಂದಿರುವ ಜನರು ಸಾಮಾನ್ಯವಾಗಿ ಟೆಲ್ಮಿಸಾರ್ಟನ್ ಅನ್ನು ಮಾತ್ರೆ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ಇದು ರಕ್ತದಲ್ಲಿ ಸಂಪೂರ್ಣವಾಗಿ ಕರಗದ ಕಾರಣ ತಡವಾಗಿ ಕೆಲಸ ಮಾಡುತ್ತದೆ. ನ್ಯಾನೊತಂತ್ರಜ್ಞಾನದ ಮೂಲಕ, ಗೋಪಾಲಕೃಷ್ಣಮೂರ್ತಿ ಔಷಧವನ್ನು ಕ್ಯಾಪ್ಸೂಲ್‌ಗಳ ರೂಪದಲ್ಲಿ ವಿನ್ಯಾಸಗೊಳಿಸಿದ್ದು, ಅದು ರಕ್ತದಲ್ಲಿ ಸಂಪೂರ್ಣವಾಗಿ ಕರಗುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಊಹಾಪೋಹಗಳಿಗೆ ತೆರೆ ಎಳೆದ ಬ್ಯಾನರ್ಜಿ: ಸೋದರಳಿಯನಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟ
ಗಾಯಗಳನ್ನು ತ್ವರಿತವಾಗಿ ವಾಸಿಮಾಡಲು ಕಾಲಜನ್, ಸ್ಟ್ಯಾಟಿನ್ ಮತ್ತು ಗೋಮೂತ್ರವನ್ನು ಬೆರೆಸಿ ಮತ್ತೊಂದು ಸಂಯುಕ್ತವನ್ನು ತಯಾರಿಸಿದ್ದಾರೆ. ಈ ಔಷಧವನ್ನು ಗಾಯಗಳಿಗೆ ಅನ್ವಯಿಸುವುದರಿಂದ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂಬುವು ಅವರ ಅಭಿಪ್ರಾಯ. ಅವರು ಈ ಹಿಂದೆ ಐದು ಔಷಧೀಯ ಸಂಯುಕ್ತಗಳಿಗೆ ಪೇಟೆಂಟ್ ಪಡೆದಿದ್ದರು.