ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಸ್ಫೋಟಕಗಳಿಂದ ತುಂಬಿದ ವಾಹನ ಮತ್ತು ವಾಹನ ಮಾಲೀಕ ಮನ್ಸುಖ್ ಹಿರೇನ್ ಸಾವಿನ ಪ್ರಕರಣ ಸಂಬಂಧ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಸಹಚರ ಪೊಲೀಸ್ ಅಧಿಕಾರಿ ರಿಯಾಜ್ ಕಾಜಿ ಅವರನ್ನು ಏಪ್ರಿಲ್ 23ರ ತನಕ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗುತ್ತಿದೆ.
ಕೇಂದ್ರ ತನಿಖಾ ಸಂಸ್ಥೆ ಆತನಿಂದ ಮತ್ತಷ್ಟು ಮಾಹಿತಿ ಪಡೆಯಬೇಕಾದ ಕಾರಣ ನ್ಯಾಯಾಲಯ ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.
ಈ ಪ್ರಕರಣದ ಪಿತೂರಿಯಲ್ಲಿ ಕಾಜಿ ಭಾಗಿಯಾಗಿದ್ದಾನೆ ಎಂದು ಎನ್ಐಎ ಆರೋಪಿಸಿದೆ. ಜೊತೆಗೆ ಪ್ರಮುಖ ಆರೋಪಿ ವಾಜಿ, ಸಾಕ್ಷ್ಯಗಳನ್ನು ನಾಶಮಾಡುವಲ್ಲಿ ಕಾಜಿ ಭಾಗಿಯಾಗಿದ್ದೇನೆ ಎಂದಿದೆ.
ಫೆಬ್ರವರಿ 25 ರಂದು ಸ್ಫೋಟಕಗಳಿಂದ ತುಂಬಿದ ವಾಹನ ಪತ್ತೆಯಾದ ಕೂಡಲೇ ತನ್ನ ತನಿಖೆ ಚುರುಗೊಳಿಸಿದ ತನಿಖಾ ಸಂಸ್ಥೆ, ಆ ವಾಹನ ಹೊಂದಿದ್ದ ಹಿರೇನ್ ಅವರನ್ನು ಅವರು ಹತ್ಯೆ ಮಾಡಿರಬಹುದು ಎಂಬುದು ತಿಳಿದು ಬಂದಿದೆ. ಎಲ್ಲಿ ಆತ ತಮ್ಮ ಯೋಜನೆ ಬಹಿರಂಗಪಡಿಸುತ್ತಾರೆ ಎಂಬ ಭಯದಿಂದ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಿದೆ.
ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಿದ ನಂತರ ಆರೋಪಿಗಳು ಸಿಪಿಯು ಮತ್ತು ಡಿವಿಆರ್‌ನಂತಹ ಸಾಕ್ಷ್ಯ ನಾಶಮಾಡಲು ಪ್ರಾರಂಭಿಸಿದರು ಎಂದು ಹೇಳಿದೆ.
ಅಂಬಾನಿಯ ನಿವಾಸದ ಬಳಿ ವಾಹನ ಪತ್ತೆಯಾದ ಕೆಲ ದಿನಗಳ ನಂತರ, ಮಾರ್ಚ್ 5ರಂದು ಥಾಣೆ ಪ್ರದೇಶದ ಕೊಲ್ಲಿಯಲ್ಲಿ ಹಿರೇನ್ ಶವವಾಗಿ ಪತ್ತೆಯಾಗಿದ್ದಾನೆ. ಈ ಪ್ರಕರಣದ ತನಿಖೆಗೆ ಸಂಬಂಧ ಮಾರ್ಚ್ 13ರಂದು ಎನ್ಐಎ ವಾಜೆ ಅವರನ್ನು ಬಂಧಿಸಿತ್ತು. ಇವರಿಬ್ಬರಲ್ಲದೇ ಮಾಜಿ ಪೊಲೀಸ್ ವಿನಾಯಕ್ ಶಿಂಧೆ ಮತ್ತು ಬುಕ್ಕಿ ನರೇಶ್ ಗೋರ್ ಅವರನ್ನು ಬಂಧಿಸಿದೆ. ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.