ETV Bharat / bharat

ಹತ್ರಾಸ್​ನಲ್ಲಿ ಮತ್ತೊಂದು ರೇಪ್​.. ಅತ್ಯಾಚಾರ ಮಾಡಿ ಯುವತಿಯ ಕೈ- ಕಾಲು ಕಟ್ಟಿ ಪಕ್ಕದ ಮನೆಗೆ ಎಸೆದು ಕ್ರೌರ್ಯ - ಯುವತಿಯನ್ನು ಎಳೆದೊಯ್ದು ರೇಪ್​

ಉತ್ತರಪ್ರದೇಶದ ಹತ್ರಾಸ್​ನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಮಲಗಿದ್ದ ಯುವತಿಯನ್ನು ಮಹಡಿ ಮೇಲೆ ಎಳೆದೊಯ್ದು ರೇಪ್​ ಮಾಡಿ ಬಳಿಕ ಅವಳ ಕೈ- ಕಾಲುಗಳನ್ನು ಕಟ್ಟಿ ಪಕ್ಕದ ಮನೆಯ ಮೇಲೆ ಎಸೆದು ಕ್ರೌರ್ಯ ಮೆರೆದಿದ್ದಾನೆ.

Another rape at uttara pradesh's Hathras
ಹತ್ರಾಸ್​ನಲ್ಲಿ ಮತ್ತೊಂದು ರೇಪ್
author img

By

Published : May 17, 2022, 4:04 PM IST

ಹತ್ರಾಸ್(ಉತ್ತರಪ್ರದೇಶ): ಹತ್ರಾಸ್​ನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಕೇಸ್​ ಇಡೀ ದೇಶದ ಗಮನ ಸೆಳೆದಿತ್ತು. ಇದೀಗ ಇದೇ ಹತ್ರಾಸ್​​ನಲ್ಲಿ ಮತ್ತೊಂದು ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಹಸಯಾನ್ ಕೊತ್ವಾಲಿ ಪ್ರದೇಶದಲ್ಲಿ ಯುವಕನೊಬ್ಬ, ಯುವತಿಯನ್ನು ಬಲವಂತವಾಗಿ ಎಳೆದೊಯ್ದು ರೇಪ್​ ಮಾಡಿದ್ದಲ್ಲದೇ, ಕೈ -ಕಾಲು ಕಟ್ಟಿ ಪಕ್ಕದ ಮನೆಯ ಛಾವಣಿ ಮೇಲೆ ಎಸೆದು ಕ್ರೂರತ್ವ ಮೆರೆದಿದ್ದಾನೆ.

ಘಟನೆ ಏನು?: ಮೇ 16 ರಂದು ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ 18 ವರ್ಷದ ಯುವತಿಯನ್ನು ಅದೇ ಗ್ರಾಮದ ಯುವಕನೊಬ್ಬ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಮಹಡಿಯ ಮೇಲೆ ಎಳೆದುಕೊಂಡು ಹೋಗಿದ್ದಾನೆ. ಬಳಿಕ ಅತ್ಯಾಚಾರ ನಡೆಸಿದ್ದಾನೆ. ಇದು ತಾನು ಮಾಡಿದ್ದು ಎಂದು ಗೊತ್ತಾಗಬಾರದೆಂದು ಯುವತಿಯ ಕೈ - ಕಾಲುಗಳನ್ನು ಕಟ್ಟಿ, ಬಾಯಿಯನ್ನು ಮುಚ್ಚಿ ಪಕ್ಕದ ಮನೆಯ ಟೆರೇಸ್​ ಮೇಲೆ ಎಸೆದಿದ್ದಾನೆ.

ಇತ್ತ ಯುವತಿ ಮನೆಯಲ್ಲಿ ಕಾಣಿಸದಿದ್ದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ಬಳಿಕ ಪಕ್ಕದ ಮನೆಯವರು ತಮ್ಮ ಮನೆಯ ಮಹಡಿಯ ಮೇಲೆ ಬಾಲಕಿ ಒದ್ದಾಡುತ್ತಿರುವುದನ್ನು ಕಂಡು ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಯುವತಿಯನ್ನು ವಿಚಾರಿಸಿದಾಗ ಗ್ರಾಮದ ನೀರಜ್​ ಎಂಬಾತ ತನ್ನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿಸಿದ್ದಾಳೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್​ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಿ ಯುವಕನ ಪತ್ತೆಗೆ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ: ದೇಶದ ವಿವಿಧೆಡೆ ಮೂರು ಪ್ರತ್ಯೇಕ ರಸ್ತೆ ಅಪಘಾತ: 13 ಜನರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.