ETV Bharat / bharat

ರಾಮೋಜಿ ಫಿಲ್ಮ್​ಸಿಟಿಗೆ ಮತ್ತೊಂದು ಗರಿಮೆ; ಎಫ್​ಎಸ್​ಎಸ್​ಎಐಯಿಂದ 'ಈಟ್​ ರೈಟ್​ ಕ್ಯಾಂಪಸ್'​ ಪ್ರಮಾಣಪತ್ರ - ರಾಮೋಜಿ ಫಿಲ್ಮ್​ ಸಿಟಿಯಲ್ಲಿ 15 ರೆಸ್ಟೋರೆಂಟ್​ ಇದೆ

1666 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ರಾಮೋಜಿ ಫಿಲ್ಮ್​ ಸಿಟಿಯಲ್ಲಿ 15 ರೆಸ್ಟೋರೆಂಟ್​ ಇದೆ. ಇದರಲ್ಲಿ ತ್ರಿ ಮತ್ತು ಫೈ ಸ್ಟಾರ್​ ದರ್ಜೆ ಹೋಟೆಲ್​ಗಳು ಇದೆ

Ramoji Film City as an 'Eat Right Campus
ರಾಮೋಜಿ ಫಿಲ್ಮ್​ಸಿಟಿಗೆ ಮತ್ತೊಂದು ಗರಿಮೆ
author img

By

Published : Dec 22, 2022, 10:36 AM IST

ಹೈದ್ರಾಬಾದ್ : ಜಗತ್ತಿನ ಅತ್ಯಂತ ದೊಡ್ಡ ಫಿಲ್ಮ್​ ಸಿಟಿ ಎಂಬ ಹೆಗ್ಗಳಿಕೆ ರಾಮೋಜಿ ಫಿಲಂ ಸಿಟಿಗೆ ಇದೆ. ಇದರ ಜೊತೆ ಮತ್ತೊಂದು ಗರಿಮೆ ಇದೀಗ ರಾಮೋಜಿ ಫಿಲ್ಮ್​ ಸಿಟಿಗೆ ಲಭಿಸಿದೆ. ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆ (ಎಫ್​ಎಸ್​ಎಸ್​ಎಐ) ಫಿಲ್ಮ್‌ಸಿಟಿಗೆ ಅತ್ಯುನ್ನತ ರೇಟಿಂಗ್ ಅಡಿ 'ಈಟ್ ರೈಟ್ ಕ್ಯಾಂಪಸ್' (ತಿನ್ನಲು ಉತ್ತಮ ಆಹಾರ ಹೊಂದಿರುವ ಕ್ಯಾಂಪಸ್​) ಎಂದು ಪ್ರಮಾಣೀಕರಿಸಿದೆ. ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಪ್ರಕಾರ ಫಿಲ್ಮ್​ ಸಿಟಿಗೆ ಭೇಟಿ ನೀಡುವ ಅತಿಥಿಗಳು ಮತ್ತು ಪ್ರವಾಸಿಗರಿಗೆ ಸುರಕ್ಷಿತ, ನೈರ್ಮಲ್ಯ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ ಎಂದು ತಿಳಿಸಿದೆ.

1666 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ರಾಮೋಜಿ ಫಿಲ್ಮ್​ ಸಿಟಿಯಲ್ಲಿ 15 ರೆಸ್ಟೋರೆಂಟ್​ ಇದೆ. ಇದರಲ್ಲಿ ತ್ರಿ ಮತ್ತು ಫೈವ್​ ಸ್ಟಾರ್​ ದರ್ಜೆ ಹೋಟೆಲ್​ಗಳು ಇದೆ. ಈ ಎಲ್ಲವನ್ನೂ ಎಫ್​ಎಸ್​ಎಸ್​ಎಐ ಪರಿಶೋಧನೆಗೆ ಒಳಪಡಿಸಿದ್ದು, ಗುಣಮಟ್ಟ ಪೂರೈಸಿದ ಹಿನ್ನೆಲೆ 'ಈಟ್ ರೈಟ್ ಕ್ಯಾಂಪಸ್' ಎಂದು ಪ್ರಮಾಣೀಕರಿಸಿದೆ.

ಫೈ-ಸ್ಟಾರ್​ ದರ್ಜೆಯಲ್ಲಿ ಬರುವ ಸ್ಟಾರ್​ ಹೋಟೆಲ್​ಗಳು ಶುಚಿತ್ವ ಮತ್ತು ನೈರ್ಮಲ್ಯದಿಂದ ಪ್ರಮಾಣಿಕರಿಸಲ್ಪಟ್ಟಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆ 2018ರ ಜುಲೈ 10ರಂದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಮಾರಣಾಂತಿಕ ಕಾಯಿಲೆಗಳನ್ನು ಎದುರಿಸಲು ರಾಷ್ಟ್ರೀಯ ಆರೋಗ್ಯ ನೀತಿಯ ಭಾಗವಾಗಿ ಆರೋಗ್ಯ ಗುಣಮಟ್ಟವನ್ನು ಹೆಚ್ಚಿಸಲು 'ಸಹಿ ಭೋಜನ್, ಬೇಹತರ್ ಜೀವನ' (ಸರಿಯಾದ ಊಟ, ಉತ್ತಮ ಜೀವನ) ಎಂಬ ಘೋಷಣೆಯಡಿ ದೇಶದಲ್ಲಿ 'ದಿ ಈಟ್ ರೈಟ್ ಮೂವ್‌ಮೆಂಟ್' (ಸರಿಯಾದ ಆಹಾರ ತಿನ್ನಿ ಅಭಿಯಾನ) ಅನ್ನು ಪ್ರಾರಂಭಿಸಿತು. ದೇಶದ ಎಲ್ಲ ಜನರಿಗೆ ಶುದ್ಧ ಮತ್ತು ಆರೋಗ್ಯಕರ ಊಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಕೋವಿಡ್ ಇನ್ನೂ ಮುಗಿದಿಲ್ಲ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುವುದು ಅಗತ್ಯವೆಂದ ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.