ನವದೆಹಲಿ: ಸೈಕ್ಲೋನ್ ಗುಲಾಬ್ ತೀವ್ರತೆ ಕಡಿಮೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶದಲ್ಲಿ ಸೆಪ್ಟೆಂಬರ್ 24ರಂದು ಸೃಷ್ಟಿಯಾಗಿದ್ದ, ಸಾಕಷ್ಟು ಪರಿಣಾಮ ಬೀರಿತ್ತು. ಈಗ ಮತ್ತೊಂದು ಸೈಕ್ಲೋನ್ ಸೃಷ್ಟಿಯಾಗುವ ಸಾಧ್ಯತೆಯಿದೆ.
ಶನಿವಾರದ ವೇಳೆಗೆ ತೀವ್ರವಾದ ಚಂಡಮಾರುತ ದಕ್ಷಿಣ ಒಡಿಶಾ - ಉತ್ತರ ಆಂಧ್ರಪ್ರದೇಶದ ಕರಾವಳಿಯನ್ನು ಭಾನುವಾರ ಸಂಜೆ ದಾಟಿತ್ತು. ಸೋಮವಾರದ ವೇಳೆ ವಾಯುಬಾರ ಕುಸಿತದಿಂದಾಗಿ ದುರ್ಬಲಗೊಂಡ ಸೈಕ್ಲೋನ್ ಈಗ ದೇಶದ ಪಶ್ಚಿಮದ ಕಡೆಗೆ ನಿಧಾನವಾಗಿ ಚಲಿಸುತ್ತಿದೆ.
ಸೋಮವಾರ ಸಂಜೆ ವೇಳೆಗೆ ಉತ್ತರ ತೆಲಂಗಾಣ ಮತ್ತು ಪಕ್ಕದ ದಕ್ಷಿಣ ಛತ್ತೀಸ್‌ಗಢದಲ್ಲಿ ದುರ್ಬಲಗೊಂಡ ಸೈಕ್ಲೋನ್ ಮಂಗಳವಾರ ಸಂಜೆಯ ವೇಳೆಗೆ ಮತ್ತಷ್ಟು ದುರ್ಬಲವಾಗುವ ಸಾಧ್ಯತೆಯಿದೆ.
ಅಂತಿಮವಾಗಿ ಸೆಪ್ಟೆಂಬರ್ 30ರಂದು ಗುಜರಾತ್ ಕರಾವಳಿಯ ಬಳಿ ಈಶಾನ್ಯ ಅರಬ್ಬಿ ಸಮುದ್ರದ ಬಳಿಗೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರಿಂದಾಗಿ ಮತ್ತೊಂದು ಸೈಕ್ಲೋನ್ ಸೃಷ್ಟಿಯಾಗುವ ಸಾಧ್ಯತೆಯಿದೆ.
ಗುಲಾಬ್ ಹೊಸ ಸೈಕ್ಲೋನ್ ಆಗಿ ಮಾರ್ಪಟ್ಟರೆ ಅದಕ್ಕೆ ಹೊಸ ಹೆಸರನ್ನು ನೀಡಲಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತದಲ್ಲಿ ಎರಡು ಬಾರಿ ಸೈಕ್ಲೋನ್ ಕಾಣಿಸಿಕೊಳ್ಳಲಿದ್ದು, ಮಾರ್ಚ್ನಿಂದ ಮೇ (ಮಾನ್ಸೂನ್ ಪೂರ್ವ) ಮತ್ತು ಅಕ್ಟೋಬರ್ನಿಂದ ಡಿಸೆಂಬರ್ (ಮಾನ್ಸೂನ್ ನಂತರ) ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಒಂದು ಸೈಕ್ಲೋನ್ ಮತ್ತೊಂದು ಸೈಕ್ಲೋನ್ ಅನ್ನು ಸೃಷ್ಟಿ ಮಾಡುವುದು ಅಪರೂಪವೇನಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ರಜೆ..
ತೆಲಂಗಾಣದಲ್ಲಿ ಗುಲಾಬ್ ಚಂಡಮಾರುತವು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಮಂಗಳವಾರ ರಜೆ ಘೋಷಿಸಿದೆ.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಚೀನಾ ಕುತಂತ್ರ: ಗಡಿ ಮೇಲೆ ಅಧಿಪತ್ಯಕ್ಕೆ ಕ್ಸಿಯೋಕಾಂಗ್ ಗ್ರಾಮ ಯೋಜನೆ!