ETV Bharat / bharat

ತಂದೆ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ - ಡಿಎಸ್​ಪಿ ಶೇಷಮಣಿ ಉಪಾಧ್ಯಾಯ

ಯುವಕ ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್ ಖಾತೆಯಲ್ಲಿ ತನ್ನ ಗೆಳತಿಯೊಂದಿಗೆ ಹಲವಾರು ಫೋಟೋಗಳ ಜೊತೆಗೆ ತನ್ನ ನೋವು ಹಂಚಿಕೊಂಡ ವಿಡಿಯೋ ಅಪ್ಲೋಡ್​​ ಮಾಡಿದ್ದಾನೆ.

Sunil Mourya
ಸುನೀಲ್​ ಮೌರ್ಯ
author img

By

Published : Sep 19, 2022, 9:26 PM IST

Updated : Sep 19, 2022, 9:47 PM IST

ಬಸ್ತಿ(ಉತ್ತರಪ್ರದೇಶ): ಬಸ್ತಿಯ ಪರಸ್ರಾಂಪುರ ಪಟ್ಟಣದ ಆಟೋ ಬಿಡಿಭಾಗಗಳ ಗೋದಾಮಿನಲ್ಲಿ ಸೋಮವಾರ ಯುವಕನೊಬ್ಬ ತನ್ನ ತಂದೆಯ ಪಿಸ್ತೂಲ್‌ನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುನೀಲ್ ಮೌರ್ಯ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವವ ಎಂದು ಡಿಎಸ್​ಪಿ ಶೇಷಮಣಿ ಉಪಾಧ್ಯಾಯ ತಿಳಿಸಿದ್ದಾರೆ.

ಯುವಕ ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್ ಖಾತೆಯಲ್ಲಿ ತನ್ನ ಗೆಳತಿಯೊಂದಿಗೆ ಹಲವಾರು ಫೋಟೋಗಳ ಜೊತೆಗೆ ತನ್ನ ನೋವು ಹಂಚಿಕೊಂಡ ವಿಡಿಯೋ ಅಪ್ಲೋಡ್​ ಮಾಡಿದ್ದಾನೆ. ಅದರಲ್ಲಿ ಸುನೀಲ್ ಆತ್ಮಹತ್ಯೆಗೆ ತನ್ನ ಗೆಳತಿ ಸೇರಿದಂತೆ ಇಬ್ಬರೇ ಕಾರಣ ಎಂದು ಆರೋಪಿಸಿದ್ದಾರೆ.

ಯುವಕ 10 ವರ್ಷಗಳಿಂದ ಅನ್ಯಧರ್ಮೀಯ ಯುವತಿ ಪ್ರೀತಿಸುತ್ತಿದ್ದು, ಯುವತಿ ಈಗ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಯುವಕ ವಿಡಿಯೋದಲ್ಲಿ ಹೇಳಿದ್ದಾನೆ. ವಿಡಿಯೋದಲ್ಲಿ ತನ್ನ ಗೆಳತಿ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾನೆ.

ವಿಡಿಯೋದಲ್ಲಿ ಸುನೀಲ್ ತನ್ನ ಗೆಳತಿಯ ಹೆಸರು ನೂರ್ಜಹಾನ್ ಬೇಗಂ (ಹೆಸರು ಬದಲಿಸಲಾಗಿದೆ) ಎಂದು ಹೇಳಿಕೊಂಡಿದ್ದಾರೆ. ಇವರಿಬ್ಬರು ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರೂ ಲಿವಿಂಗ್ ಇನ್ ರಿಲೇಶನ್​ಶಿಪ್​ನಲ್ಲಿದ್ದರು. ನೂರ್ಜಹಾನ್ ಬೇಗಂ ಅವರ ಕನಸುಗಳನ್ನು ಪ್ರೇರೇಪಿಸಿರುವ ಸುನೀಲ್​ ಕಾನ್ಪುರ, ಲಖನೌ ಮತ್ತು ದೆಹಲಿಯಲ್ಲಿ ಒಟ್ಟಿಗೆ ಇದ್ದುಕೊಂಡು ಆಕೆಗೆ ಶಿಕ್ಷಣ ಕೊಡಿಸಿದ್ದಾನೆ. ಸುನೀಲ್ ಅವರ ಈ ನಿರ್ಧಾರದಿಂದ ಸುನಿಲ್ ಕುಟುಂಬಸ್ಥರು ಕೂಡ ಸಂತಸ ಪಟ್ಟಿದ್ದರು.

ಕೆಲವು ತಿಂಗಳ ಹಿಂದೆ, ನೂರ್ ಜಹಾನ್ ಬೇಗಂ ಸುನಿಲ್‌ನಿಂದ ದೂರವಿರಲು ಪ್ರಾರಂಭಿಸಿದ್ದಳು. ಅವಳು ನೋಯ್ಡಾದ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದ ಸುನೀಲ್ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದನು.

ನೂರ್ಜಹಾನ್ ಬೇಗಂ ತಾನು ಹಿಂದೂ ಧರ್ಮದವ ಎಂಬ ಕಾರಣಕ್ಕೆ ಹುಡುಗಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಸೆಪ್ಟೆಂಬರ್ 20 ರಂದು ನೂರ್ ಜಹಾನ್ ತನ್ನನ್ನು ಕೊಲೆ ಮಾಡುತ್ತಾಳೆ. ತನ್ನ ಪ್ರಿಯತಮೆ ಕೈಯಲ್ಲಿ ಸಾಯುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಉತ್ತಮ ಎಂದು ಸುನೀಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಸುನೀಲ್ ಮೌರ್ಯ ಕುಟುಂಬಸ್ಥರು ಯಾರ ವಿರುದ್ಧವೂ ದೂರು ನೀಡಿಲ್ಲ. ದೂರು ನೀಡಿದರೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಡಿಎಸ್ಪಿ ಶೇಷಮಣಿ ಉಪಾಧ್ಯಾಯ ತಿಳಿಸಿದ್ದಾರೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​​ ಸ್ಟೇಟಸ್​ಗೆ ಡೆತ್ ನೋಟ್ ಹಾಕಿ ಶಿರಸ್ತೇದಾರ ಆತ್ಮಹತ್ಯೆ: ಹಿರೇಕೆರೂರು ನೌಕರರ ಭವನದಲ್ಲಿ ಘಟನೆ

Last Updated : Sep 19, 2022, 9:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.