ETV Bharat / bharat

ಸೌಲಭ್ಯ ಕಲ್ಪಿಸದ ರೈಲ್ವೆ ಸಿಬ್ಬಂದಿ.. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ನೋಟಿಸ್​ ಕೊಟ್ಟ ನ್ಯಾಯಮೂರ್ತಿಗಳು

ರೈಲಿನಲ್ಲಿ ನ್ಯಾಯಮೂರ್ತಿಗಳಿಗೆ ಸಕಾಲಕ್ಕೆ ಸಿಗದ ಸೌಲಭ್ಯ. ಅಧಿಕಾರಿಗಳ ನಿರ್ಲಕ್ಷ್ಯ ಪ್ರಶ್ನಿಸಿ, ನೋಟಿಸ್ ಜಾರಿ

Angry High Court judge sent notice to Railways for not getting breakfast and facilities
ಸೌಲಭ್ಯ ಕಲ್ಪಿಸದ ರೈಲ್ವೆ ಸಿಬ್ಬಂದಿ.. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ನೋಟಿಸ್​ ಕೊಟ್ಟ ನ್ಯಾಯಮೂರ್ತಿ
author img

By

Published : Jul 19, 2023, 11:09 PM IST

ಪ್ರಯಾಗರಾಜ್: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಗೌತಮ್ ಚೌಧರಿ ಅವರು ರೈಲು ಪ್ರಯಾಣದ ಸಮಯದಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡದೇ ಇರುವುದರಿಂದ ರೈಲ್ವೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ರೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಇದರೊಂದಿಗೆ ತಪ್ಪಿತಸ್ಥ ರೈಲ್ವೆ ಸಿಬ್ಬಂದಿ ಹಾಗೂ ಅಡೆತಡೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡುವಂತೆಯೂ ಸೂಚನೆ ನೀಡಲಾಗಿದೆ.

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಚೌಧರಿ ಅವರು ತಮ್ಮ ಪತ್ನಿಯೊಂದಿಗೆ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ರೈಲು ಮೂರು ಗಂಟೆ ತಡವಾಯಿತು. ರೈಲು ತಡವಾಗಿ ಬಂದ ನಂತರ ಜಡ್ಜ್​ ಪದೇ ಪದೆ ಅನಾನುಕೂಲತೆಗಳನ್ನು ಎದುರಿಸಬೇಕಾಯಿತು.

ಹೀಗೆ ಉಂಟಾದ ಅಡತಡೆಯಿಂದ ಅವರು ಈ ಬಗ್ಗೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ದೂರವಾಣಿ ಕರೆ ಮಾಡಿ, ರೈಲ್ವೆಯಿಂದ ವಿವರಣೆ ಪಡೆಯುವಂತೆ ಸೂಚಿಸಿದರು. ಇದಾದ ನಂತರ, ಹೈಕೋರ್ಟ್‌ನ ರಿಜಿಸ್ಟ್ರಾರ್ ಪ್ರೋಟೋಕಾಲ್ ಪರವಾಗಿ, ರೈಲ್ವೆಯ ಜಿಎಂ ಮತ್ತು ಇತರ ಅಧಿಕಾರಿಗಳಿಗೆ ನೋಟಿಸ್ ಕಳುಹಿಸುವ ಮೂಲಕ, ಸಂಬಂಧಿತ ನೌಕರರಿಂದ ಉತ್ತರವನ್ನು ಕೋರಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಉತ್ತರವನ್ನು ಹೈಕೋರ್ಟ್‌ಗೆ ತಿಳಿಸಲು ಸೂಚನೆಗಳನ್ನು ನೀಡಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಪ್ರೋಟೋಕಾಲ್ ಅಧಿಕಾರಿ ಆಶಿಶ್ ಶ್ರೀವಾಸ್ತವ ಪರವಾಗಿ, ಉತ್ತರ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್‌ಗೆ ನ್ಯಾಯಮೂರ್ತಿಗಳ ದೂರಿನ ಬಗ್ಗೆ ತಿಳಿಸಲು ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್​ಗೆ ಉತ್ತರಿಸುವಂತೆಯೂ ಸೂಚಿಸಲಾಗಿದೆ. ಹೈಕೋರ್ಟ್‌ನ ರಿಜಿಸ್ಟ್ರಾರ್ ಕಳುಹಿಸಿರುವ ಪತ್ರದಲ್ಲಿ ಜುಲೈ 8 ರಂದು ನ್ಯಾಯಮೂರ್ತಿಗಳು ತಮ್ಮ ಪತ್ನಿಯೊಂದಿಗೆ ದೆಹಲಿಯಿಂದ ಪ್ರಯಾಗರಾಜ್ ಪುರುಷೋತ್ತಮ್ ಎಕ್ಸ್‌ಪ್ರೆಸ್‌ನ ಎಸಿ ಫಸ್ಟ್ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ. ರೈಲು 3 ಗಂಟೆಗಳ ಕಾಲ ವಿಳಂಬವಾದ ನಂತರ, ಉಪಹಾರದ ವ್ಯವಸ್ಥೆಗಾಗಿ ನ್ಯಾಯಮೂರ್ತಿಗಳನ್ನು ಸಂಪರ್ಕಿಸಲಾಯಿತು. ಆದರೆ, ಹಲವಾರು ಬಾರಿ ಸಂಪರ್ಕಿಸಿದರೂ ಜಸ್ಟೀಸ್​​​​​​ಗೆ ಉಪಹಾರ ಲಭ್ಯವಾಗಿರಲಿಲ್ಲ.

ಅಷ್ಟೇ ಅಲ್ಲ ಅಲ್ಲಿನ ಮ್ಯಾನೇಜರ್‌ಗೆ ಕರೆ ಕೂಡಾ ಮಾಡಲಾಗಿತ್ತು. ಆದರೆ, ಆ ಮ್ಯಾನೇಜರ್ ರಾಜ್ ತ್ರಿಪಾಠಿ, ನ್ಯಾಯಮೂರ್ತಿಗಳ ಬಳಿಗೆ ಹೋಗಿರಲಿಲ್ಲ. ಅಷ್ಟೇ ಅಲ್ಲ ಜಸ್ಟೀಸ್​ ದೂರು ನೀಡಿದರೂ ಟಿಟಿಇ ಸೇರಿ ಇತರ ಸಿಬ್ಬಂದಿ ಸಹ ಅವರ ಬಳಿ ತೆರಳಿಲ್ಲ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.

ತಮ್ಮ ಕೆಲಸದ ಬಗ್ಗೆ ಇಂತಹ ಗಂಭೀರ ನಿರ್ಲಕ್ಷ್ಯ ತೋರಿದ ರೈಲ್ವೆ ಸಿಬ್ಬಂದಿ ವಿರುದ್ಧ ರೈಲ್ವೆ ಇಲಾಖೆ ಏನು ಕ್ರಮ ಕೈಗೊಳ್ಳುತ್ತದೆ. ಇದರೊಂದಿಗೆ ನಿರ್ಲಕ್ಷ್ಯ ತೋರಿದ ರೈಲ್ವೆ ಸಿಬ್ಬಂದಿ ವಿರುದ್ಧ ರೈಲ್ವೆ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡುವಂತೆಯೂ ನೋಟಿಸ್​ನಲ್ಲಿ ಸೂಚನೆ ನೀಡಲಾಗಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಗೌತಮ್ ಚೌಧರಿ ಅವರು ರೈಲು ಪ್ರಯಾಣದ ಸಮಯದಲ್ಲಿ ಅಗತ್ಯ ಸೌಲಭ್ಯಗಳನ್ನು ಪಡೆಯಲಿಲ್ಲ, ನಂತರ ಕೋಪಗೊಂಡ ನ್ಯಾಯಾಧೀಶರ ಪರವಾಗಿ ರೈಲ್ವೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದರೊಂದಿಗೆ ಆ ರೈಲಿನಲ್ಲಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಇದನ್ನ ಓದಿ:ಪಾಕ್​ ISI ಬಗ್ಗೆ ನಾನು ಕೇಳಿಯೇ ಇಲ್ಲ.. ಸೀಮಾ ಹೈದರ್‌ಗೆ ATS​ ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟ ಉತ್ತರ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.