ವಿಜಯನಗರ (ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಒಡಿಶಾದ ಬಾಲಾಸೋರ್ ದುರಂತದ ಮಾದರಿ ನಡೆದ ಪ್ಯಾಸೆಂಜರ್ ರೈಲು ಅಪಘಾತದಲ್ಲಿ 14 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ನಿರಂತರ ಕಾರ್ಯಾಚರಣೆಯ ಬಳಿಕ ನಾಶವಾಗಿದ್ದ ಹಳಿಗಳನ್ನು ಸೋಮವಾರ ಮರುಜೋಡಿಸಲಾಗಿದೆ. ಸರಕು ಸಾಗಣೆ ರೈಲಿನ ಬಳಿಕ, ಪ್ರಶಾಂತಿ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಿದವು.
-
#WATCH | Andhra Pradesh | The first train plies on the railway track after restoration at the spot of Vizianagaram train derailment accident. pic.twitter.com/x7w6bTLOCw
— ANI (@ANI) October 30, 2023 " class="align-text-top noRightClick twitterSection" data="
">#WATCH | Andhra Pradesh | The first train plies on the railway track after restoration at the spot of Vizianagaram train derailment accident. pic.twitter.com/x7w6bTLOCw
— ANI (@ANI) October 30, 2023#WATCH | Andhra Pradesh | The first train plies on the railway track after restoration at the spot of Vizianagaram train derailment accident. pic.twitter.com/x7w6bTLOCw
— ANI (@ANI) October 30, 2023
ಸಿಎಂ ಜಗನ್ ವೈಮಾನಿಕ ಸಮೀಕ್ಷೆ: ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಅವರು ರೈಲು ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಇದಾದ ಬಳಿಕ ಘಟನಾ ಸ್ಥಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
-
#WATCH | Andhra Pradesh Chief Minister YS Jagan Mohan Reddy conducted an aerial survey at the train accident site at Kantakapalli, Vizianagaram district.
— ANI (@ANI) October 30, 2023 " class="align-text-top noRightClick twitterSection" data="
After visiting the injured in Vizianagaram Government Hospital, the CM conducted an aerial survey before reaching… pic.twitter.com/kw4Sr24W4g
">#WATCH | Andhra Pradesh Chief Minister YS Jagan Mohan Reddy conducted an aerial survey at the train accident site at Kantakapalli, Vizianagaram district.
— ANI (@ANI) October 30, 2023
After visiting the injured in Vizianagaram Government Hospital, the CM conducted an aerial survey before reaching… pic.twitter.com/kw4Sr24W4g#WATCH | Andhra Pradesh Chief Minister YS Jagan Mohan Reddy conducted an aerial survey at the train accident site at Kantakapalli, Vizianagaram district.
— ANI (@ANI) October 30, 2023
After visiting the injured in Vizianagaram Government Hospital, the CM conducted an aerial survey before reaching… pic.twitter.com/kw4Sr24W4g
ಮುಖ್ಯಮಂತ್ರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದಲ್ಲಿ ದಟ್ಟಣೆ ಉಂಟಾಗಿ, ಹಳಿಗಳ ಮರು ಜೋಡಣೆ ಕೆಲಸ ವಿಳಂಬವಾಗಲಿದೆ ಎಂಬ ಕಾರಣಕ್ಕಾಗಿ ಅಧಿಕಾರಿಗಳ ಮನವಿಯ ಮೇರೆಗೆ ಸಿಎಂ ಜಗನ್ ಮೊದಲು ವೈಮಾನಿಕ ಸಮೀಕ್ಷೆ ಮಾತ್ರ ನಡೆಸಿದರು. ಇದರಿಂದಾಗಿ ಹಳಿಗಳ ಮರುಜೋಡಣೆ ಕಾರ್ಯ ಭರದಿಂದ ಸಾಗಿತು.
ವಿಜಯವಾಡದಿಂದ ಅವರು ವಿಶಾಖಪಟ್ಟಣಕ್ಕೆ ವಿಮಾನದಲ್ಲಿ ಬಂದಿಳಿದರು. ಬಳಿಕ ನೇರವಾಗಿ ಘಟನಾ ಸ್ಥಳಕ್ಕೆ ತೆರಳಲು ಯೋಜಿಸಲಾಗಿತ್ತು. ಆದರೆ, ರೈಲ್ವೆ ಅಧಿಕಾರಿಗಳು ಸಿಎಂ ಆಗಮಿಸಿದಲ್ಲಿ ಕಾರ್ಯಾಚರಣೆ ವಿಳಂಬವಾಗುವ ಬಗ್ಗೆ ತಿಳಿಸಿದ್ದರು. ಹೀಗಾಗಿ ಅವರು ನೇರವಾಗಿ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು.
-
#WATCH | Andhra Pradesh train accident: Latest ANI drone camera footage from the site of train collision in Vizianagaram.
— ANI (@ANI) October 30, 2023 " class="align-text-top noRightClick twitterSection" data="
The first train crossed through the spot after restoration, earlier this afternoon. pic.twitter.com/kXu7BimXkT
">#WATCH | Andhra Pradesh train accident: Latest ANI drone camera footage from the site of train collision in Vizianagaram.
— ANI (@ANI) October 30, 2023
The first train crossed through the spot after restoration, earlier this afternoon. pic.twitter.com/kXu7BimXkT#WATCH | Andhra Pradesh train accident: Latest ANI drone camera footage from the site of train collision in Vizianagaram.
— ANI (@ANI) October 30, 2023
The first train crossed through the spot after restoration, earlier this afternoon. pic.twitter.com/kXu7BimXkT
ಡ್ರೋನ್ ಕಣ್ಣಲ್ಲಿ ದುರಂತ: ರೈಲು ದುರಂತದ ಸ್ಥಳವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ರೈಲು ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಭೀಕರ ಅಪಘಾತಕ್ಕೆ ಸಾಕ್ಷಿಯಾಗಿವೆ. ಇದಾದ ಬಳಿಕ ಮತ್ತೊಂದು ದೃಶ್ಯದಲ್ಲಿ ಹಳಿಗಳನ್ನು ಮರು ಜೋಡಿಸಲಾಗಿದ್ದು, ರೈಲು ಸಂಚಾರ ಆರಂಭವಾಗಿದ್ದು ಕಾಣಬಹುದು. ಮೊದಲು ಸರಕು ಸಾಗಣೆಯ ರೈಲನ್ನು ಕಳುಹಿಸಿದ ಬಳಿಕ, ಪ್ರಶಾಂತಿ ಎಕ್ಸ್ಪ್ರೆಸ್ ರೈಲಿನ ಸಂಚಾರಕ್ಕೆ ಅನುಮತಿ ನೀಡಲಾಯಿತು.
ಕೇಂದ್ರ, ರಾಜ್ಯದಿಂದ ಪರಿಹಾರ ಘೋಷಣೆ: ರೈಲು ದುರಂತದ ಬಳಿಕ ಈ ಮಾರ್ಗವಾಗಿ ಸಂಚರಿಸಬೇಕಿದ್ದ 20 ಕ್ಕೂ ಅಧಿಕ ರೈಲುಗಳನ್ನು ರದ್ದು ಮಾಡಲಾಗಿತ್ತು. ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ, ಸಣ್ಣಪುಟ್ಟ ಗಾಯಕ್ಕೆ 50 ಸಾವಿರ ರೂ. ಘೋಷಿಸಲಾಗಿದೆ. ಇದೇ ವೇಳೆ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ ರೂ.50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ.
ರಾಜ್ಯ ಸರ್ಕಾರವೂ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ. ಸಿಎಂ ಜಗನ್ ಮೃತರಿಗೆ 10 ಲಕ್ಷ ರೂಪಾಯಿ, ಗಂಭೀರ ಗಾಯಾಳುಗಳಿಗೆ 2 ಲಕ್ಷ, ಇತರ ರಾಜ್ಯಗಳ ಪ್ರಯಾಣಿಕರ ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.
ಇದನ್ನೂ ಓದಿ: ಆಂಧ್ರ ರೈಲು ಅಪಘಾತ : ಸಾವಿನ ಸಂಖ್ಯೆ 14ಕ್ಕೆ ಏರಿಕೆ..ಸಿಎಂ ಜಗನ್ ಜೊತೆ ಮಾತುಕತೆ ನಡೆಸಿದ ರೈಲ್ವೆ ಸಚಿವ