ETV Bharat / bharat

ಭಿಕ್ಷೆ ಬೇಡುವವನಂತೆ ಬಂದು ಚಾಕು ಹಲ್ಲೆ: ಟಿಡಿಪಿ ಮುಖಂಡನಿಗೆ ಗಂಭೀರ ಗಾಯ

ಭಿಕ್ಷೆ ಕೇಳುವವನಂತೆ ಪೋಸು ಕೊಟ್ಟ ದುಷ್ಕರ್ಮಿಯು ಅವರ ಮನೆಯ ಮುಂದೆ ಕೈಯಿಂದ ಭಿಕ್ಷೆ ಸ್ವೀಕರಿಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಾಮಿ ಮಾಲೆ ಮತ್ತು ಕೇಸರಿ ಶಾಲು ಧರಿಸಿದ್ದ ದಾಳಿಕೋರ, ರಾವ್ ಕೈಯಿಂದ ಭಿಕ್ಷೆ ತೆಗೆದುಕೊಳ್ಳುತ್ತಿರುವಾಗ ಇದ್ದಕ್ಕಿದ್ದಂತೆ ಚಾಕು ತೆಗೆದು ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.

author img

By

Published : Nov 17, 2022, 6:15 PM IST

ಭಿಕ್ಷೆ ಬೇಡುವವನಂತೆ ಬಂದು ಚಾಕು ಹಲ್ಲೆ: ಟಿಡಿಪಿ ಮುಖಂಡನಿಗೆ ಗಂಭೀರ ಗಾಯ
andhra-pradesh-man-posing-as-alms-seeker-stabs-tdp-leader-p-sheshagiri-rao

ಅಮರಾವತಿ: ಭಿಕ್ಷೆ ಬೇಡುವವನಂತೆ ಬಂದ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಆಂಧ್ರಪ್ರದೇಶದಲ್ಲಿನ ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರೊಬ್ಬರು ಗಾಯಗೊಂಡಿದ್ದಾರೆ. ಕಾಕಿನಾಡ ಜಿಲ್ಲೆಯ ತುನಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಟಿಡಿಪಿ ಮುಖಂಡ ಪಿ. ಶೇಷಗಿರಿರಾವ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ.

ಭಿಕ್ಷೆ ಕೇಳುವವನಂತೆ ಪೋಸು ಕೊಟ್ಟ ದುಷ್ಕರ್ಮಿಯು ಅವರ ಮನೆಯ ಮುಂದೆ ಕೈಯಿಂದ ಭಿಕ್ಷೆ ಸ್ವೀಕರಿಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಾಮಿ ಮಾಲೆ ಮತ್ತು ಕೇಸರಿ ಶಾಲು ಧರಿಸಿದ್ದ ದಾಳಿಕೋರ, ರಾವ್ ಕೈಯಿಂದ ಭಿಕ್ಷೆ ತೆಗೆದುಕೊಳ್ಳುತ್ತಿರುವಾಗ ಇದ್ದಕ್ಕಿದ್ದಂತೆ ಚಾಕು ತೆಗೆದು ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.

ಪಿ. ಶೇಷಗಿರಿರಾವ್ ನೆಲದ ಮೇಲೆ ಕುಸಿದು ಬೀಳುವವರೆಗೂ ಆತ ಚಾಕುವಿನಿಂದ ಇರಿಯುತ್ತಲೇ ಇದ್ದ. ರಾವ್ ಅವರ ಕೂಗು ಕೇಳಿ ಕುಟುಂಬಸ್ಥರು ಹೊರಗೆ ಧಾವಿಸಿದಾಗ, ದಾಳಿಕೋರ ಮೋಟರ್ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಪಿ. ಶೇಷಗಿರಿರಾವ್ ಅವರನ್ನು ತುನಿಯ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಡಿಪಿ ಮುಖಂಡರು ಹಾಗೂ ಮಾಜಿ ಸಚಿವ ಯನಮಲ ರಾಮಕೃಷ್ಣುಡು ಮತ್ತು ಚಿನ್ನ ರಾಜಪ್ಪ ಆಸ್ಪತ್ರೆಗೆ ಭೇಟಿ ನೀಡಿ ರಾವ್ ಅವರನ್ನು ಭೇಟಿ ಮಾಡಿದರು. ಶೇಷಗಿರಿ ರಾವ್ ಅವರ ಮೇಲಿನ ಹಲ್ಲೆಗೆ ರಸ್ತೆ ಮತ್ತು ಕಟ್ಟಡ ಇಲಾಖೆ ಸಚಿವ ದಾಡಿಸೆಟ್ಟಿ ರಾಜಾ ಅವರ ಬೆಂಬಲಿಗರೇ ಕಾರಣ ಎಂದು ಟಿಡಿಪಿ ಆರೋಪಿಸಿದೆ. ರಾವ್ ಹತ್ಯೆ ಯತ್ನವನ್ನು ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ. ಆಚನ್ನಾಯ್ಡು ಖಂಡಿಸಿದ್ದಾರೆ.

ಇದನ್ನೂ ಓದಿ: '2024ರಲ್ಲಿ ಟಿಡಿಪಿ ಮರಳಿ ಅಧಿಕಾರಕ್ಕೆ ಬರದಿದ್ದರೆ, ಅದೇ ನನ್ನ ಕಡೆ ಚುನಾವಣೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.