ETV Bharat / bharat

ಮೌಖಿಕವಾಗಿ ಅಲ್ಲದೇ, ಬರೆದು ನೀಡುವ ತಲಾಖ್​ ಕೂಡ ಅಮಾನ್ಯ: ಆಂಧ್ರಪ್ರದೇಶ ಹೈಕೋರ್ಟ್​

ಮೌಖಿಕವಾಗಿ ತಲಾಖ್​ ನೀಡುವುದು ರದ್ದು ಆಗಿದ್ದು, ಅದನ್ನು ಬರೆಯುವ ಮೂಲಕ ನೀಡಿದ ವಿಚ್ಚೇದನ ಅಮಾನ್ಯ ಮಾಡಿ ಆಂಧ್ರಪ್ರದೇಶ ಹೈಕೋರ್ಟ್​ ಆದೇಶ ನೀಡಿದೆ. ಈ ಮೂಲಕ ಮುಸ್ಲಿಂ ಕಾನೂನು ಮತ್ತು ಸಂವಿಧಾನಬಾಹಿರ ಎಂದು ಮಹತ್ವದ ತೀರ್ಪು ನೀಡಿದೆ.

andhra-pradesh-high-court
ಆಂಧ್ರಪ್ರದೇಶ ಹೈಕೋರ್ಟ್​
author img

By

Published : Aug 6, 2022, 12:07 PM IST

Updated : Aug 6, 2022, 2:08 PM IST

ಅಮರಾವತಿ: ತಲಾಖ್,​ ತಲಾಖ್​, ತಲಾಖ್​ ಎಂದು ಮೂರು ಬಾರಿ ಹೇಳಿ ನೀಡುವ ವಿಚ್ಚೇದನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಅದನ್ನು ಬರೆದು ನೀಡುವ ತಲಾಖ್​ ಕೂಡ ಅಮಾನ್ಯ ಡಿವೋರ್ಸ್​ ಕೂಡ ಅಸಿಂಧು ಎಂದು ಆಂಧ್ರಪ್ರದೇಶ ಹೈಕೋರ್ಟ್​ ಮಹತ್ವದ ಆದೇಶ ನೀಡಿದೆ. ಇಸ್ಲಾಮಿಕ್​ ಕಾನೂನು ನಿಯಮಗಳ ಪ್ರಕಾರ, ದಂಪತಿ ಮಧ್ಯೆ ರಾಜೀ ಸಂಧಾನ ಮಾಡಿಸಬೇಕು ಎಂದು ಅದು ಹೇಳಿದೆ.

ಮೂರು ಬಾರಿ "ತಲಾಖ್​" ಎಂದು ಬರೆದು ರಿಜಿಸ್ಟರ್ಡ್​ ಪೋಸ್ಟ್​ ಮೂಲಕ ಕಳುಹಿಸಿದ ವಿಚ್ಚೇದನ ಪತ್ರದ ವಿರುದ್ಧ ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ ಈ ತೀರ್ಪು ನೀಡಿದೆ.

ತಲಾಖ್ ಎಂದು ಹೇಳುವ ಬದಲಾಗಿ ಅದನ್ನು ಅಕ್ಷರ ರೂಪದಲ್ಲಿ ಬರೆದು ನೀಡುವ ವಿಚ್ಚೇದನ ಊರ್ಜಿತವಾಗುವುದಿಲ್ಲ. ಹಾಗೆ ಬರೆಯುವುದು ಮುಸ್ಲಿಂ ಕಾನೂನು ವಿರುದ್ಧವಾಗಿದೆ. ಅಂತಹ ತಲಾಖ್​ನಿಂದ ಮದುವೆಯನ್ನು ರದ್ದು ಮಾಡಲು ಬರುವುದಿಲ್ಲ. ಮಧ್ಯವರ್ತಿಗಳು ಇದರ ಹೊಣೆ ಹೊತ್ತು ಇಬ್ಬರ ಪರವಾಗಿ ರಾಜಿ ಮಾಡಿಸಬೇಕು ಎಂದು ಹೇಳಿದೆ.

ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ, ಸಮಂಜಸ ಕಾರಣ ನೀಡಿ ಮೂರು ಬಾರಿ ತಲಾಖ್​ ನೀಡಬೇಕು. ಪತಿ ತಲಾಖ್​ ಹೇಳುವ ಮೊದಲು ಈ ಬಗ್ಗೆ ಪತ್ನಿಗೆ ಮಾಹಿತಿ ನೀಡಬೇಕು. ಅಲ್ಲದೇ, ಒಂದು ತಲಾಖ್​ ಉಚ್ಚರಿಸುವ ಮೊದಲು ಎರಡನೇ ತಲಾಖ್​ ಎನ್ನುವ ಮಧ್ಯೆ ಸಮಯ ನೀಡಬೇಕು. ಈ ವೇಳೆ ಸಕಾರಣಗಳನ್ನು ನೀಡಬೇಕು. ಒಂದೇ ಉಸಿರಿಗೆ ತಲಾಖ್​ ನೀಡುವುದು ಅಸಾಂವಿಧಾನಿಕವಾಗಿದೆ ಎಂದು "ಶ್ಯಾರಾ ಬಾನೋ ಪ್ರಕರಣ"ದಲ್ಲಿ ಸುಪ್ರೀಂಕೋರ್ಟ್​ ನೀಡಿದ ತೀರ್ಪನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್ ಎಂದು ಮೂರು ಬಾರಿ ಬರೆದು ರಿಜಿಸ್ಟರ್ಡ್​ ಪೋಸ್ಟ್​ ಮಾಡಿ ವಿಚ್ಚೇದನ ನೀಡಿದ್ದ. ಇದನ್ನು ಧಿಕ್ಕರಿಸಿದ್ದ ಮಹಿಳೆ, ಪತಿ ಯಾವುದೇ ಕಾರಣ ನೀಡದೇ ವಿಚ್ಚೇದನ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್​ ಪತಿ ನೀಡಿದ ತಲಾಖ್​ ಸಮಂಜಸವಾಗಿಲ್ಲ. ಅವರ ಪತ್ನಿಯಾಗಿಯೇ ಮುಂದುವರಿಯುತ್ತಾರೆ. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ ಜೀವನಾಂಶಕ್ಕೆ ಅರ್ಹಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ರವಿನಾಥ್ ತಿಲಹಾರಿ ಅವರು ಈ ತೀರ್ಪು ನೀಡಿದ್ದಾರೆ.

ಓದಿ; ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು: ಆತಂಕದಲ್ಲಿ ದ್ವೀಪರಾಷ್ಟ್ರ

Last Updated : Aug 6, 2022, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.